ಕಳೆದ ವಾರದ ಟಾಸ್ಕ್ ಗಳಲ್ಲಿ ಸ್ಪರ್ದಿಗಳ ಲವಲವಿಕೆಯ ಆಟಗಳಿಂದ ಬಿಗ್ ಬಾಸ್ ನೋಡುಗ ಪ್ರಿಯರಿಗೆ ರೋಚಕವಾಗಿತ್ತು ಜೊತೆಗೆ ಮೊದಲನೇ ಮಹಿಳಾ ಕ್ಯಾಪ್ಟನ್ ಆಗಿ ದಿವ್ಯ ಉರುಡುಗ ಗಮನ ಸೆಳೆದರು.
ಬನ್ನಿ ಈ ವಾರದ ಬಿಗ್ ಬಾಸ್ ಸೀಸನ್ 8 ಮುಖ್ಯಾಂಶಗಳನ್ನು ನೋಡೋಣ. ಈ ವಾರ ಅತಿ ಹೆಚ್ಚು ಘರ್ಷಣೆಗಳನ್ನು ಕಂಡ ವಾರವಾಗಿದ್ದು. ಫೈನಲ್ ದಿನಗಳು ಹತ್ತಿರವಾದಂತೆ ಮನೆಯಲ್ಲಿನ ತಾಪಮಾನ ಹೆಚ್ಚುತ್ತಿದೆ. ಮಂಜು ಪಾವಗಡ, ದಿವ್ಯ ಯು, ಪ್ರಶಾಂತ್ ಸಂಭರ್ಗಿ, ಡಿ ಜೆ ಚಕ್ರವರ್ತಿ, ವೈಷ್ಣವಿ, ದಿವ್ಯ ಸುರೇಶ್, ಶುಭ ಪೂಂಜಾ, ಅರವಿಂದ್ ಕೆ ಪಿ, ರಘು ಹಾಗು ಪ್ರಿಯಾಂಕಾ ಎಲ್ಲರು ಕ್ಯಾಪ್ಟನ್ ಶಿಪ್ ನಲ್ಲಿ ಚೆನ್ನಾಗಿ ಹೋರಾಡಿದ್ದಾಯ್ತು.
ಈ ವಾರ ಕ್ಯಾಪ್ಟನ್ ಶಿಪ್ ಗೆ ಅರ್ಹತೆ ಗಳಿಸಲು ಹಲವಾರು ಟಾಸ್ಕ್ ಗಳನ್ನೂ ಬಿಗ್ ಬಾಸ್ ಕೊಟ್ಟಿದ್ದರು. ಟಾಸ್ಕಿನಲ್ಲಿ ಗೆದ್ದ ಸ್ಪರ್ದಿಗಳಿಗೆ ಹಣವನ್ನು ಕೊಟ್ಟು ಅದನ್ನು ಉಳಿಸಿಕೊಂಡು ಬೆಳೆಸಿಕೊಳ್ಳಲು ಹೇಳಲಾಗಿತ್ತು. ಈ ವಾರದ ಟಾಸ್ಕಿನಲ್ಲಿ ಮೊಟ್ಟೆಗಳು ಹೆಚ್ಚಾಗಿ ಕಂಡು ಬಂದವು. ಮೊದಲನೆಯದಾಗಿ ಸ್ಪರ್ದಿಗಳ ಕಣ್ಣಿಗೆ ಬಟ್ಟೆ ಕಟ್ಟಿ ಕೂಡಿಸಿ ಮೇಲೆ ಹಗ್ಗದಲ್ಲಿ ಕಟ್ಟಿದ ನೀರಿನ ಬಲೂನ್ಗಳನ್ನೂ ಬಿಡಲಾಗಿ ಯಾರು ಕೊನೆಯತನಕ ಬಲೂನ್ಗಳಿಗೆ ತಗುಲದೆ ಉಳಿಯುತ್ತಾರೋ ಅವರು ಗೆದ್ದಂತೆ ಮತ್ತು ಬಲೂನ್ ತಗಲಿದವರು ಸೋತಂತೆ. ಈ ಟಾಸ್ಕಿನಲ್ಲಿ ಕೊನೆಯ ತನಕ ಅರವಿಂದ್ ಕೆ ಪಿ ಮತ್ತು ಡಿ ಜೆ ಚಕ್ರವರ್ತಿ ಉಳಿದು ಅರವಿಂದ್ ಗೆಲ್ಲುತ್ತಾರೆ. ಮತ್ತೊಂದು ಟಾಸ್ಕಿನಲ್ಲಿ ಮೊಟ್ಟೆಯನ್ನು ತಲೆಗೆ ಹೊಡೆದುಕೊಳ್ಳಬೇಕಿತ್ತು ಮತ್ತು ಯಾರು ಹೆಚ್ಚು ಮೊಟ್ಟೆ ಹೊಡೆಯುತ್ತಾರೋ ಅವರಿಗೆ ಚಿನ್ನದ ಮೊಟ್ಟೆ (golden egg) ಯನ್ನು ಕೊಡಲಾಯಿತು. ಇದರಲ್ಲಿ ಶುಭ ಪೂಂಜಾ ಅವರು ಬಹಳ ಹಾಸ್ಯಕರವಾಗಿ ಆಡಿದರು.
ದಿವ್ಯ ಸುರೇಶ್, ಶಮಂತ್, ಮಂಜು ಪಾವಗಡ, ಡಿ ಜೆ ಚಕ್ರವರ್ತಿ ಮತ್ತು ಅರವಿಂದ್ ಕೆ ಪಿ ಚಿನ್ನದ ಮೊಟ್ಟೆಯನ್ನು ಗೆದ್ದು ಈಗ ಅದನ್ನು ಬೇರೆ ಸ್ಪರ್ದಿಗಳ ತಲೆಗೆ ಹೊಡೆದಲ್ಲಿ ಆ ಸ್ಪರ್ದಿಗಳ ಅಸ್ಟೂ ಮೊತ್ತ ಅವರಿಗೆ ಹೋಗುವುದೆಂದು ಬಿಗ್ ಬಾಸ್ ತಿಳಿಸುತ್ತಾರೆ. ಈ ಟಾಸ್ಕಿನಲ್ಲಿ ಡಿ ಜೆ ಚಕ್ರವರ್ತಿ ಮತ್ತು ಅರವಿಂದ್ ಕೆ ಪಿ ನಡುವೆ ಬಿನ್ನಾಭಿಪ್ರಾಯ ಬರುತ್ತದೆ ಹಾಗು ಮೊಟ್ಟೆ ಹೊಡೆಯುವ ವಿಚಾರದಲ್ಲಿ ಡಿ ಜೆ ಚಕ್ರವರ್ತಿ, ಪ್ರಿಯಾಂಕಾ, ಮತ್ತು ಶಮಂತ್ ನಡುವೆ ಮಾತಿನ ಚಕಮಕಿ ನೆಡೆದು ಕೊನೆಗೆ ದಿವ್ಯ ಸುರೇಶ್ ಚಿನ್ನದ ಮೊಟ್ಟೆಯನ್ನು ಪ್ರಿಯಾಂಕಾರ ತಲೆಗೆ ಹೊಡೆಯಲು ನೀರಿಗೆ ಇಳಿಯಬೇಕಾಯಿತು. ಮುದ್ರಣೇ ಟಾಸ್ಕಿನಲ್ಲಿ ಎಲ್ಲರು ಭಾಗವಹಿಸಿ ತಾವು ಮುದ್ರಿಸಿದ ಹಣದಲ್ಲಿ ಪಾಲನ್ನು ಪಡೆದು ತಮ್ಮ ಹಣದ ಮೊತ್ತವನ್ನು ಹೆಚ್ಚಿಸಿಕೊಂಡಿದ್ದಾರೆ.
ಕೊನೆಯದಾಗಿ ಸ್ಪರ್ದಿಗಳು ಕೂಡಿಟ್ಟಿಕೊಂಡ ಹಣದ ಆಧಾರದ ಮೇಲೆ ಅರವಿಂದ್ ಕೆ ಪಿ, ದಿವ್ಯ ಸುರೇಶ್, ಮಂಜು ಪಾವಗಡ, ಶಮಂತ್ ಮತ್ತು ವೈಷ್ಣವಿ ಕ್ಯಾಪ್ಟನ್ ಶಿಪ್ ಟಾಸ್ಕಿಗೆ ಆಯ್ಕೆಯಾಗುತ್ತಾರೆ. ಬಾಲುಗಳ ರಾಶಿಯಿಂದ ಬೀಗದ ಕೈಯನ್ನು ಹುಡುಕಿ ಪ್ರತಿಯೊಬ್ಬರೂ ತಮಗೆ ನೀಡಿರುವ ಮೂರು ಬೀಗಗಳನ್ನು ತೆಗೆಯುವ ಟಾಸ್ಕಿನಲ್ಲಿ ಅರವಿಂದ್ ಕೆ ಪಿ ಗೆದ್ದು ಮುಂದಿನ ವಾರದ ಕ್ಯಾಪ್ಟನ್ ಆಗಿದ್ದಾರೆ.
ಈ ವಾರದ ಹಣ ಮುದ್ರಿಕೆ ಆಟದ ವಿಷಯದಲ್ಲಿ ಪ್ರಶಾಂತ್ ಸಂಭರ್ಗಿ ಹಾಗು ದಿವ್ಯ ಊರುಗ, ಮತ್ತು ಮಂಜು ಪಾವಗಡ ಮದ್ಯೆ ಮನಸ್ತಾಪ ಉಂಟಾಗಿ ಜೋರಾದ ವಾದ ಪ್ರತಿವಾದ ನೆಡೆದು ಕೊನೆಗೆ ಪ್ರಶಾಂತ್ ಸಂಭರ್ಗಿ ಕಣ್ಣೀರಿಡುವಂತಾಯಿತು. ಪ್ರಶಾಂತ್ ಸಂಭರ್ಗಿ ಮತ್ತು ಡಿ ಜೆ ಚಕ್ರವರ್ತಿ ನಡುವೆ ವೈಷ್ಣವಿ ವಿಚಾರದಲ್ಲಿ ಜಗಳವೇ ಆಗಿ ಬಿಗ್ ಬಾಸ್ ಹಲವಾರು ಬಾರಿ ಬೀಪ್ ಗಳ ಮೂಲಕ ಇವರ ಮಾತುಗಳಿಗೆ ಸೆನ್ಸಾರ್ ಹಾಕಬೇಕಾಯಿತು. ಇದರಿಂದಾಗಿ ಶನಿವಾರ ಕಿಚ್ಚ ಸುದೀಪ್ ರಿಂದ ಚಕ್ರವರ್ತಿಗೆ ಸರಿಯಾಗಿ ಪೂಜೆಯು ಆಯಿತು
ವಾರದ ಕೊನೆಯ ಶುಕ್ರವಾರದ ಸಂಚಿಕೆಯಲ್ಲಿ ಅರವಿಂದ್ ಕೆ ಪಿ ಮತ್ತು ಪ್ರಶಾಂತ್ ಸಂಭರ್ಗಿ ನಡುವೆ ಮತ್ತೆ ಟಾಸ್ಕಿನ ವಿಚಾರವಾಗಿ ಭಾರಿ ಜಗಳವೇ ನೆಡೆದು ಮನೆಯಲ್ಲಿ ಒತ್ತಡದ ವಾತಾವರಣ ನಿರ್ಮಾಣವಾಗಿದೆ. ಮುಂದಿನ ಸಂಚಿಕೆಗಳಲ್ಲಿ ಮನೆಯ ವಾತಾವರಣ ತಿಳಿಯಾಗುವುದೋ ಇಲ್ಲವೋ ಎಂದು ಕಾದು ನೋಡೋಣ.
ಸುನಿಲ್ ಗುಂಡೂರಾವ್