ಬಿಗ್ ಬಾಸ್ (ಸೀಸನ್ -8)

ಕೋವಿಡ್ ಎರಡನೇ ಅಲೆಯಿಂದಾಗಿ ಚಿತ್ರೀಕರಣ ನಿಲ್ಲಿಸಿದ್ದ ಬಿಗ್ ಬಾಸ್ 8 ನೇ ಸೀಸನ್ ಮತ್ತೆ ಶುರುವಾದ ಹಿನ್ನಲೆಯಲ್ಲಿ ಎರಡು ವಾರದ ಹಿಂದೆ ಅಳುತ್ತಾ ಮನೆಗೆ ತೆರೆಳಿದ್ದ ಎಲ್ಲಾ ಸ್ಪರ್ದಿಗಳು ನಗುನಗುತ್ತಾ ಬಿಗ್ ಬಾಸ್ ಮನೆಗೆ ಹಿಂತಿರುಗಿದ್ದಾಯಿತು. ಬಿಗ್ ಬಾಸ್ ಕಾರ್ಯಕ್ರಮದ ಇತಿಹಾಸದಲ್ಲೇ ಈ ರೀತಿ ಸ್ಪರ್ಧೆ ನಿಂತು ಹೋಗಿ ಮತ್ತೆ ಶುರುವಾಗಿರುವುದು ಇದೇ ಮೊದಲು. ಈ ಆವೃತ್ತಿಯ ಸ್ಪರ್ದಿಗಳಿಗೆ ಕಾಲಾವಕಾಶ ದೊರೆತು ತಮ್ಮಲೇ ವಿಶ್ಲೇಷಣೆ ಮಾಡಿಕೊಂಡು ಸಿಗುವ ಸಲಹೆಗಳನ್ನು ಉಪಯೋಗಿಸಿಕೊಂಡು ಇನ್ನು ಚೆನ್ನಾಗಿ ಆಡಬಹುದಾಗಿದೆ.ಸ್ಪರ್ಧೆಯ ವೇಳೆಯಲ್ಲಿದ್ದ ದುಗುಡ ಆತಂಕ ಒತ್ತಡಗಳು ಮತ್ತೆ ಸ್ಪರ್ದಿಗಳಲ್ಲಿ ಕಾಣತೊಡಗಿದೆ.

ಇದೀಗ ಸ್ಪರ್ಧೆಯ 84 ದಿನಗಳು ಮುಗಿದಿದ್ದು ಇರುವ ಕೆಲವೇ ವಾರಗಳಲ್ಲಿ ಹೇಗೆ ಪ್ರಚಾರ ತೆಗೆದುಕೊಳ್ಳುವುದು ಮತ್ತೆ ಹೇಗೆ ನೋಡುಗರ ಕಣ್ ಸೆಳೆಯುವುದು ಎಂದು ಸ್ಪರ್ದಿಗಳು ಚಿಂತಿಸುತಿದ್ದಾರೆ. ಕೆಲ ಸ್ಪರ್ದಿಗಳಂತೂ ನೆಡೆಯುತ್ತಿರುವ ಟಾಸ್ಕ್ ನಲ್ಲಿ ಹೆಚ್ಚು ಹೆಚ್ಚು ಕ್ರಿಯಾಶೀಲರಾಗಿ ಆಡುತ್ತಿದ್ದಾರೆ. ಈ ಪ್ರಯತ್ನದಲ್ಲಿ ಕೆಲವರು ತಮ್ಮ ಮಾತುಗಾರಿಕೆಯಿಂದ ಮನೆಯಲ್ಲಿ ನಗೆಯ ವಾತಾವರಣವನ್ನು ಸೃಷ್ಟಿಸಿದರೆ ಕೆಲವರ ವರ್ತನೆ ಮನೆಯಲ್ಲಿ ಬೇಸರ, ಮನಸ್ತಾಪ ಹಾಗು ಕಿರಿಕಿರಿಯ ವಾತಾವರಣ ಮೂಡಿದೆ. ಬಿಗ್ ಬಾಸ್ ಮನೆಯ ಶೂರಸೇನ ತಂಡದಲ್ಲಿ ಎಲ್ಲರು ಬಲಿಷ್ಠರೇ! ಕ್ಯಾಪ್ಟನ್ ಅರವಿಂದ್, ದಿವ್ಯ ಊರುಡುಗ, ಪ್ರಶಾಂತ್ ಸಂಭರ್ಗಿ, ಚಕ್ರವರ್ತಿ, ವೈಷ್ಣವಿ ಮತ್ತು ಶಮಂತ್ ಇದ್ದರೆ ಕ್ವಾಟ್ಲೆ ಕಿಲಾಡಿಗಳ ತಂಡದಲ್ಲಿ ಕ್ಯಾಪ್ಟನ್ ಪಾವಗಡ ಮಂಜು, ದಿವ್ಯ ಸುರೇಶ, ನಿಧಿ ಸುಬ್ಬಯ್ಯ, ಶುಭ ಪುಂಜ, ರಘು, ಎಲ್ಲಾ ಟಾಸ್ಕ್ಗಳಲ್ಲಿ ಠಕ್ಕರ್ ಕೊಟ್ಟು ನಾವು ಏನು ಸಾಮಾನ್ಯರಲ್ಲ ಎಂದು ಸಾಬೀತುಪಡಿಸಿದೆ.


ಅಂಗಿ ಮೇಲಿನ ಅಂಗಿ – ಮಂಗಿಯಾಗದೆ ಕ್ಯಾಪ್ಟನ್ ಆದ ದಿವ್ಯ ಉರುಡುಗ:


ಇದೇನಪ್ಪಾ ಅಂಗಿ ಮಂಗಿ ಅಂತ ಹೇಳುತ್ತಿದ್ದಾರೆ ಅಂತಾ ಗಲಿಬಿಲಿ ಆದಿರಾ ? ನಾನು ಹೇಳಹೊರಟಿರುವುದು ಬಿಗ್ ಬಾಸ್ 8 ನೇ ಸೀಸನ್ ಎರಡನೇ ಇನ್ನಿಂಗ್ಸ್ ನ 10 ನೇ ದಿನದ ಕ್ಯಾಪ್ಟನ್ಸಿ ಟಾಸ್ಕ್ ಬಗ್ಗೆ. ಕಳೆದ ಹತ್ತು ದಿನದ ಹೈಲೈಟ್ಸ್ ನೋಡುವುದಾದರೆ, ಈ ವಾರ ಕ್ಯಾಪ್ಟನ್ಸಿ ಟಾಸ್ಕ್ ತುಂಬಾ ರೋಚಕವಾಗಿ ವಿಭಿನ್ನವಾಗಿತ್ತು. ಹುಡುಗಿಯರಲ್ಲಿ ಈ ಬಾರಿಯಾದರೂ ಯಾರಾದರೊಬ್ಬರು ಕ್ಯಾಪ್ಟನ್ ಹಾಗಬೇಕು ಅಂತ ಕಷ್ಟ ಪಟ್ಟು ಆಡಿ ನಮಗೂ ಒಂದು ಅವಕಾಶ ಕೊಡಿ ಎಂದು ಎಲ್ಲರ ಬಗ್ಗೆ ಚರ್ಚಿಸುತ್ತ ಕ್ಯಾಪ್ಟನ್ ಅಭ್ಯರ್ಥಿಗಳಲ್ಲಿ ವಿನಂತಿಸುತ್ತಿದ್ದರು. ತಮ್ಮ ಅತ್ಯುತಮ ಪ್ರದರ್ಶನದಿಂದ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಮೊದಲ ಬಾರಿಗೆ ಮಹಿಳಾ ಅಭ್ಯರ್ಥಿಯಾಗಿ ಆಯ್ಕೆ ಆದದ್ದು ಬೇರೆ ಯಾರು ಅಲ್ಲಾ ಅವರು ದಿವ್ಯ ಉರುಡುಗ.

ಪ್ರತಿಬಾರಿಯಂತೆ ಕ್ಯಾಪ್ಟನ್ಸಿ ಆಯ್ಕೆಗೆ ಎರಡು ತಂಡಗಳಾಗಿ ಮಾಡಲಾಗಿದ್ದು ಒಂದು ತಂಡದ ಹೆಸರು ಕ್ವಾಟ್ಲೆ ಕಿಲಾಡಿಗಳು. ಇದರ ಕ್ಯಾಪ್ಟನ್ ಮಂಜು ಪಾವಗಡ ಮತ್ತು ಇನ್ನೊಂದು ಶೂರಸೇನೆ ತಂಡ ಕ್ಯಾಪ್ಟನ್ ಅರವಿಂದ್. ಶೂರಸೇನೆ ತಂಡ ಕ್ವಾಟ್ಲೆ ತಂಡದ ವಿರುದ್ಧ ಗೆದ್ದು ಅಂತಿಮ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಭಾಗವಹಿಸಿದರು. ಅದರಂತೆ ಈ ಬಾರಿ ಕೊಟ್ಟ ಟಾಸ್ಕ್ ಮಜವಾಗಿತ್ತು. ಅದು ಯಾವುದಪ್ಪಾ ಅಂದರೆ ‘ಅಂಗಿ ಮೇಲಿನ ಅಂಗಿ’ ಎಂದರೆ ಬಟ್ಟೆಗಳ ಮೇಲೆ ಬಟ್ಟೆಗಳನ್ನು ಹಾಕಿಕೊಳ್ಳುವುದು. ಶೂರಸೇನ ತಂಡದಲ್ಲಿ ಅರವಿಂದ, ದಿವ್ಯ ಊರುಗಡ, ವೈಷ್ಣವಿ, ಪ್ರಶಾಂತ್, ಚಕ್ರವರ್ತಿ ಹಾಗು ಶಮಂತ್ ಇದ್ದರು, ಇವರುಗಳಿಗೆ ಬಟ್ಟೆಗಳ ಮೇಲೆ ಬಟ್ಟೆಗಳು ಹಾಕುವ ಟಾಸ್ಕ್ ನೀಡಲಾಗಿದ್ದು ಅತಿ ಹೆಚ್ಚು ಬಟ್ಟೆಗಳನ್ನು ಹಾಕುವ ಅಭ್ಯರ್ಥಿ ಈ ವಾರದ ಕ್ಯಾಪ್ಟನ್ ಆಗಬಹುದಿತ್ತು. ಇದರಲ್ಲಿ ಅರವಿಂದ್ 60 ಬಟ್ಟೆಗಳನ್ನು, ವೈಷ್ಣವಿ 64, ದಿವ್ಯ 81, ಪ್ರಶಾಂತ್ 47, ಚಕ್ರವರ್ತಿ 42, ಹಾಗು ಶಮಂತ್ 29 ಬಟ್ಟೆಗಳನ್ನು ಹಾಕಿಕೊಂಡರು. ಅತಿ ಹೆಚ್ಚು ಬಟ್ಟೆಗಳನ್ನು ಹಾಕುವ ಮೂಲಕ ದಿವ್ಯ ಉರುಡುಗ ಈ ವಾರದ ಕ್ಯಾಪ್ಟನ್ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.

ಒಟ್ಟಾರೆ ‘ಅಂಗಿ ಮೇಲಿನ ಅಂಗಿ’ ಮಂಗಿ ಯಾಗದೆ ದಿವ್ಯ ಉರುಡುಗ ಅವರ ಕ್ಯಾಪ್ಟನ್ ಆಗಿರುವುದಕ್ಕೆ ಶುಭಕೋರುತ್ತೇವೆ.

ದಿವ್ಯಶ್ರೀ ಸುನಿಲ್

Related post

30 Comments

  • Good

  • Nice

  • Very true we support Divya Uruga Big Boss Season 8

  • ತುಂಬಾ ಬಹಳ ಚನ್ನಾಗಿದೆ…

  • Very nice

  • Good one Divya

  • Good

  • Very nice comment🙄

  • Very nice👌

  • Nice

  • Nice summary of the show. You’ve written it well.

  • Excellent 👌🏼

  • Very nice.

  • Informative and Good move.. All the best!

  • Good one Divya. Exquisite..

  • Nice

  • Very Nice Divya👌

  • ಒಳ್ಳೆ ಪ್ರಯತ್ನ ಹೀಗೆ ಮುಂದುವರೆಯಲಿ

  • Nice

  • Nice article. Keep it up multi-talented Divya💐💐not Uraduga🤩🤩

  • Nice info!

  • Nice writing, keep going…

  • Nice writing, keep going…

  • Nice article

  • ಚೆನ್ನಾಗಿದ

  • ಚೆನ್ನಾಗಿದೆ, ಶುಭಾಶಯಗಳು

  • Good, keep it up

  • good,
    Best of luck

  • Good One

  • nice

Leave a Reply

Your email address will not be published. Required fields are marked *