ಬಿಳಿ ಹುಬ್ಬಿನ ಗಿಬ್ಬನ್ – Hoolock

ಬಿಳಿ ಹುಬ್ಬಿನ ಗಿಬ್ಬನ್ ಅಥವಾ Whitebrowed Gibbon

ಹೂಲಾಕ್‌ (Hoolock) ಅಥವಾ Whitebrowed Gibbon ಎಂದು ಕರೆಲ್ಪಡುವ ಇದು ನರ ವಾನರ(Apes) ಕುಟುಂಬಕ್ಕೆ ಸೇರಿದೆ. ಇಡೀ ಭಾರತ ಉಪಖಂಡಕ್ಕೆ ಇದೊಂದೇ ನರವಾನರ ಜಾತಿಯ ಜೀವಿಯಾಗಿದೆ, ನೋಡಲು ಮಂಗನಂತೆ ಕಂಡರೂ ಮಂಗಗಳಿಗೆ ಹಾಗು ನರವಾನರ ಗಳಿಗೆ ತುಂಬಾ ವ್ಯತ್ಯಾಸಗಳಿವೆ.

ನರವಾನರಗಳು

ನರವಾನರ ಅಥವಾ Apes ಗಳು ಬಾಲವಿಲ್ಲದ ಮನುಷ್ಯರ ಹತ್ತಿರದ ಸಂಬಂಧಿಗಳು, ಇವು ಬುದ್ಧಿವಂತಿಕೆಯಲ್ಲಿ ಮಂಗಗಳಿಗಿಂತ ಮುಂದುವರಿದಿವೆ, ಹಾಗು ಗಾತ್ರದಲ್ಲಿ ದೊಡ್ಡವು ಇವು ಆಯುಧವನ್ನು ಬಳಸಬಲ್ಲವು, ದೊಡ್ಡ ಮೆದುಳನ್ನ ಹೊಂದಿವೆ. ಗೊರಿಲ್ಲ, ಚಿಂಪಾಂಜಿ, ಒರಂಗ್ಉಟಾನ್, ಬೊನಬೋ ಮಾನವನ ಹತ್ತಿರದ ಸಂಬಂಧಿಯಾದರೆ ಗಿಬ್ಬನ್ಗಳು ಮಂಗ ಹಾಗು ವಾನರಗಳ ಮಧ್ಯಸ್ಥ ಪ್ರಾಣಿಗಳು ಎನ್ನಬಹುದು. ಸಾಮಾನ್ಯವಾಗಿ ನರವಾನರರ ಕೈಗಳು ಕಾಲಿಗಿಂತ ಉದ್ದವಾಗಿವೆ, ಜೀವಿಸಿದ ಎಲ್ಲಾ ಮಂಗ ಹಾಗು ನರ ವಾನರಗಳಲ್ಲಿ ಮೈ ತುಂಬಾ ರೋಮಗಳಿದ್ದರೆ ನರ ಮನುಷ್ಯ ಮಾತ್ರ ರೋಮರಹಿತವಾಗಿದ್ದಾನೆ.

ಹೊಲೊಂಗಾಫರ್ ಗಿಬ್ಬನ್ ವನ್ಯ ಜೀವಿ ಧಾಮ

ಈ ಬಿಳಿ ಹುಬ್ಬಿನ ಗಿಬ್ಬನ್ ನಮ್ಮ ಅಸ್ಸಾಂ, ಮೀಜೋರಾಂ, ಮೇಘಾಲಯಗಳಲ್ಲಿ ಕಂಡು ಬರುತ್ತವೆ. 6-8 Kg ತೂಗುವ ಇವು ಮರಗಳ ಎಲೆ ಹಾಗು ಹಣ್ಣುಗಳನ್ನು ತಿನ್ನುತ್ತವೆ, ಕೆಲವು ಸಲ ಕಂಬಳಿ ಹುಳು ಇರುವೆ ಮೊಟ್ಟೆ ಹುಳ ಹುಪ್ಪಟಿ ತಿನ್ನುತ್ತವೆ. ಗುಂಪು ಜೀವಿಗಳು ಗಂಡು ಕಪ್ಪಗಿದ್ದರೆ ಹೆಣ್ಣು ಬಿಳಿ- ಕಂದು ಬಣ್ಣ ಹೊಂದಿದೆ, ಗರ್ಭಧಾರಣೆ ಅವಧಿ ಸುಮಾರು 210-230 ದಿನಗಳು ಒಮ್ಮೆ ಒಂದೇ ಮರಿಗೆ ಜನ್ಮ ನೀಡುತ್ತವೆ. ಇವುಗಳ ಕೈಗಳು ಕಾಲುಗಳಿಗಿಂತ ಉದ್ದವಿದ್ದು ಮರಗಳ ಕೊಂಬೆಗಳಿಗೆ ಜೋತು ಬಿದ್ದು ವೇಗವಾಗಿ ಚಲಿಸಬಲ್ಲವು.

Western ಗಿಬ್ಬನ್ ಹಾಗು eastern ಗಿಬ್ಬನ್ ಎಂಬ ಎರಡು ಜಾತಿಗಳನ್ನು ಗುರುತಿಸಲಾಗಿದೆ,ಇವು ಅಪಾಯದಂಚಿನ ಪ್ರಾಣಿಗಳ ಪಟ್ಟಿಗೆ ಸೇರುತ್ತವೆ , ಮೂಳೆ ತಲೆಬುರುಡೆ, ಮನೆಯಲ್ಲಿಸಾಕಲು,ಬೇಟೆಯಾಡಲಾಗುತ್ತದೆ. ಅಸ್ಸಾಮಿನಲ್ಲಿ ಗಿಬ್ಬನ್ ಗಳಿಗಾಗಿಯೇ ಹೊಲೊಂಗಾಫರ್ ಗಿಬ್ಬನ್ ವನ್ಯ ಜೀವಿ ಧಾಮ ಇದೆ.

Related post

Leave a Reply

Your email address will not be published. Required fields are marked *