ಬಿ ಟಿ ಎಸ್ – ಯುವ ಸಂಗೀತ ತಂಡ

BTS ಎಂದರೆ ಏನು ಎಂದು ಯಾರಾದರು ಯುವಕ, ಯುವತಿಗೆ ಕೇಳಿ ನೋಡಿ. ಅವರು I’m BTS Stan ಎಂದು ಹೇಳದಿದ್ದರೆ ಕೇಳಿ!

ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ BTS ಬಗ್ಗೆ ಹುಡುಕಿರಿ. ನೀವೂ ಸಹ ಅವರ ಸಂಗೀತ, ನೃತ್ಯದ ಮೋಡಿಗೊಳಗಾಗುವಿರಿ. ಅಂತಹದ್ದೇನಿದೆ BTS ನಲ್ಲಿ? ಓದಿ BTS Band ಬಗ್ಗೆ ಒಂದಷ್ಟು ವಿಚಾರಗಳು.

ಈಗಿನ ಕಾಲದ ವಿದೇಶಿ ಸಂಗೀತವೆಂದರೆ ಅದು BTS ಆಗಿರಲೇಬೇಕು. BTS ಎಲ್ಲ ವಯೋಮಾನದವರಿಗೂ ಇಷ್ಟವಾಗುತ್ತದೆ. ಏಕೆಂದಿರಾ? ಪುಟ್ಟ ಮಕ್ಕಳಿಗೆ ಇಷ್ಟವಾಗುವಂತಹ ಮ್ಯೂಸಿಕ್, ಡ್ಯಾನ್ಸ್ ಹೆಜ್ಜೆಗಳು, ಯುವ ಮನಸ್ಸುಗಳಿಗೆ ಹಿತ ನೀಡುವ ಮೆಲೋಡಿ, ಏಳು ಜನರ ಗೆಳೆಯರ ಗುಂಪು, ಮಧ್ಯ ಹಾಗೂ ಇಳಿ ವಯಸ್ಸಿನವರಿಗೆ ಇಷ್ಟವಾಗುವಂತಹ ಸದಭಿರುಚಿಯ ಸಾಹಿತ್ಯ, ಅಷ್ಟೇನೂ ಅಬ್ಬರವೆನಿಸದ ಸಂಗೀತ…. ಅಷ್ಟೇ ಅಲ್ಲ ಮೂಕಭಾಷೆಯವರಿಗಾಗಿ ವಿಶಿಷ್ಟವಾದ ನೃತ್ಯ ಸಂಯೋಜನೆ….. ಇನ್ನೇನು ಬೇಕು? ಅವರ ಒಗ್ಗಟ್ಟು, ಒಡನಾಟ ನೋಡಿದವರು ಅವರ ಹಿಂಬಾಲಕರಾಗಲು ಸಮಯ ಹಿಡಿಯದು.

BTS ಒಂದು ದಕ್ಷಿಣ ಕೊರಿಯನ್ ಬಾಯ್ ಬ್ಯಾಂಡ್ ಆಗಿದ್ದು, ಇದನ್ನು ಬ್ಯಾಂಕ್ತಾನ್ ಸಾನ್ಯೊನ್ದಾನ್ (Bangtan Sonyeondan) ಎಂದೂ ಕರೆಯುತ್ತಾರೆ. ಈ ತಂಡವು 7 ಯುವಕರ ತಂಡವಾಗಿದ್ದು 2010ರಲ್ಲಿ ಒಟ್ಟುಗೂಡಿದ್ದರು. 2013ರಲ್ಲಿ ಬಿಗ್ ಹಿಟ್ ಎಂಟರ್ಟೈನ್ಮೆಂಟ್ (Big Hit Entertainment) ಅಡಿಯಲ್ಲಿ ತಮ್ಮ ಕಾರ್ಯಕ್ರಮಗಳನ್ನು ನೀಡಲು ಪ್ರಾರಂಭಿಸಿದರು. BTS ಗುಂಪಿನ ಹುಡುಗರು ಕೇವಲ ತಮ್ಮ ಪಾಪ್ ಸಂಗೀತದಿಂದಾಗಿ ಜಗತ್ಪ್ರಸಿದ್ಧರು. ಜೀರೋ ಇಂದ ಹೀರೋಗಿರಿಯ ಎತ್ತರಕ್ಕೆ ಏರಿದವರು.

ಜಂಗ್ ಕುಕ್ (Jungkook), ಆರ್ ಎಂ (RM), ಜಿಮಿನ್ (Jimin), ವಿ (V), ಜಿನ್ (Jin), ಸೂಗ (Suga) ಮತ್ತು ಜೆ-ಹೋಪ್ (J-Hope) – ಈ ಏಳು ಯುವಕರ ಏಕೈಕ ಗುರಿ ಕನಸು ಪಾಪ್ ತಾರೆಗಳಾಗುವುದು. ಹುಡುಗಾಟದ ವಯಸ್ಸಿನಲ್ಲಿ ಕನಸಿನ ಬೆನ್ನೇರಿ ಛಲದಿಂದ ನನಸು ಮಾಡಿಕೊಂಡ ಈ ಸಪ್ತ ತಾರೆಗಳು ಅಚಲ ಶ್ರದ್ಧೆ, ನಿರಂತರ ಅಭ್ಯಾಸ, ಒಗ್ಗಟ್ಟು, ನಿರಹಂಕಾರದ ಗುಣಗಳಿಂದಾಗಿ ಇಂದಿನ ಯುವ ಜನರಿಗೆ ಮಾದರಿಯಾಗುವರು. ಕೆ-ಪಾಪ್ (K-pop) ಇತಿಹಾಸದಲ್ಲೇ ಏಳು ಜನರ BTS ತಂಡವು ಅದ್ಭುತಗಳನ್ನು ಸೃಷ್ಟಿಸಿದೆ. ಈ ಏಳೂ ಯುವಕರು ಸಂಗೀತದ ಸಪ್ತಸ್ವರಗಳಂತೆ ಭಾಸವಾಗುವರು. ಸಂಗೀತಕ್ಕೆ ಅದರದ್ದೇ ಆದ ಭಾಷೆ ಇದೆ. ಭಾವ ಸ್ಪೃಹತೆಯೇ ಅದರ ಭಾಷೆ. ಈ ಭಾಷೆಯಿಂದಾಗಿಯೇ BTS ಗಂಧರ್ವರು ಅಮೇರಿಕನ್ ಮಾರ್ಕೆಟ್ ನಲ್ಲಿ ಮೊಟ್ಟಮೊದಲ ಬಾರಿಗೆ ಟಾಪ್ ತ್ರೀ ಸ್ಥಾನದಲ್ಲಿದ್ದಾರೆ.

ಗಮ್ಯ ದಾರಿಯಲ್ಲಿ ಬಂದ ಎಲ್ಲ ಸಂಕಷ್ಟಗಳನ್ನು ತಾಳ್ಮೆಯಿಂದ ನಿವಾರಿಸಿಕೊಂಡು ಯಶಸ್ಸಿನ ಮೆಟ್ಟಿಲುಗಳ ಮೇಲೆ ಕೈ ಕೈ ಹಿಡಿದು ಏರಿದ ಯುವಕರ ಬಗ್ಗೆ ಮುಂದಿನ ಸಂಚಿಕೆಯಲ್ಲಿ ಮತ್ತಷ್ಟು ತಿಳಿಯೋಣ. ಒಬ್ಬೊಬ್ಬರ ಕಥೆಯೂ ಸ್ಪೂರ್ತಿದಾಯಕವಾಗಿದೆ. ಕಾಯುತ್ತೀರಲ್ಲವೇ? ಅಲ್ಲಿಯ ವರೆಗೆ ಅವರ ಸಂಗೀತವನ್ನು ಗೂಗಲ್, ಯೂಟ್ಯೂಬ್‌ಗಳಲ್ಲಿ ಕೇಳಿ, ನೋಡಿ ಆನಂದಿಸುತ್ತಿರಿ. ಕಮೆಂಟ್ ಮೂಲಕ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿರಿ.

ನಿಖಿತಾ ಅಡವೀಶಯ್ಯ

Related post

8 Comments

 • Thank-you aunty for writing this!💜😊
  Saranghea BTS💜💜

 • Oh so sweet!
  I just love the fact that u wrote about BTS!!!
  Borahae 💜

 • Thank you. Wait for some more about BTS 🤘

 • Thank you Darshini. Wait for some more about BTS 🤘

 • Thank you dear. Wait for some more about BTS 🤘 along with your favourite stunning pics and videos 💜

 • thanks for writing about them
  💜

 • Thanks for writing about them. 💜

 • Welcome Kwerthana.

Leave a Reply

Your email address will not be published. Required fields are marked *