ಬಿ ಟಿ ಎಸ್ RM – ಕಿಂ ನಂಜೂನ್

ಹಾಯ್, ಹಲೋ  ಎಲ್ಲರಿಗು…

ಒಬ್ಬ ಪುಟ್ಟ ಮುಗ್ಧ ಹುಡುಗ ಇದ್ದ. ಓದಿನಲ್ಲಿ ಹಿಂದೆ ಉಳಿದಿದ್ದ. ತನ್ನದೇ ಲೋಕದಲ್ಲಿ ಸದಾ ಮುಳುಗಿರುತ್ತಿದ್ದ. ಅವನಿಗಿದ್ದ ಪ್ರಪಂಚ ಒಂದೇ. ಅದು ಅವನ ತಾಯಿ.

ತನ್ನ ಮಗ ಬದುಕಿನಲ್ಲಿ ಎಲ್ಲರಂತಾಗಬೇಕೆಂದರೆ ತಾನು ಮಾತ್ರ ಅವನಿಗೆ ಪ್ರೋತ್ಸಾಹಿಸಬೇಕು ಎಂದು ಅರಿತ ತಾಯಿ ಅವನನ್ನು ಜಗತ್ತಿನ ಕಹಿ ಮಾತುಗಳಿಂದ ದೂರವಿರಿಸಿ, ಅವರೆಲ್ಲರೂ ಅವನನ್ನು ಪ್ರೀತಿಸುತ್ತಾರೆಂದೂ, ಹೊಗಳುತ್ತಾರೆಂದೂ ಹೇಳುತ್ತಿದ್ದಳು. ಮುಂದೆ ಆ ಹುಡುಗನು ಜನರ ನಂಬಿಕೆ, ಪ್ರೀತಿ, ನಂಬಿಕೆ ಉಳಿಸಲು ಮಹತ್ಕಾರ್ಯ ಮಾಡಿ ಜಗತ್ತಿಗೇ ಮಾದರಿಯಾದ ವಿಜ್ಞಾನಿಯಾದನಂತೆ.  ಒಬ್ಬ ತಾಯಿಗೆ ಮಾತ್ರ ತನ್ನ ಮಗುವನ್ನು ಯಶಸ್ಸಿನ ಎತ್ತರಕ್ಕೆ ಬೆಳೆಸಲು ಸಾಧ್ಯ. ಈ ಕತೆ ನಿಮಗೇಕೆ ಹೇಳುತ್ತಿದ್ದೇನೆಂದರೆ ಇಂತಹ ತಾಯಿ ಹೃದಯದ ಒಬ್ಬ ಹುಡುಗನ ರೋಚಕ ನಿಜ ಕತೆಯನ್ನು ಇಂದು ನಿಮ್ಮ ಮುಂದೆ ಇಡುತ್ತಿದ್ದೇನೆ.

‘ಜನ ಮರುಳೋ ಜಾತ್ರೆ ಮರುಳೊ’ ಎನ್ನುವಂತೆ ಮೊಟ್ಟ ಮೊದಲು BTSನ ಬಗ್ಗೆ ಜನರು ಅಷ್ಟೇನೂ ಪ್ರೀತಿ ಇಟ್ಟಿರಲಿಲ್ಲ. Haters ಎಂದು ಕರೆಯಲ್ಪಡುವ, ಹೀಗಳೆಯುವ ಜನರಿಂದ ಇಂಗ್ಲಿಷ್ ಅರ್ಥವಾಗದ ತನ್ನ ಬ್ಯಾಂಡ್ ಅನ್ನು ರಕ್ಷಿಸಿ, ಅವರೆಲ್ಲರೂ ತಮ್ಮ ಬ್ಯಾಂಡ್ ಬಗ್ಗೆ ಅಪಾರ ಪ್ರೀತಿ ಇರಿಸಿಕೊಂಡಿದ್ದಾರೆಂದೂ, ತಾವುಗಳು ಇನ್ನಷ್ಟು ಶ್ರಮವಹಿಸಿ ಒಳ್ಳೆಯ ಹಾಡುಗಳನ್ನು ಕೊಡಬೇಕೆಂದು ಪ್ರೋತ್ಸಾಹಿಸುತ್ತಿದ್ದ ನಾಯಕ ಬೇರಾರು ಅಲ್ಲ. ಅವನೇ ಕಿಂ ನಂಜೂನ್ (ಆರ್ ಎಂ). RM ಎಂದು ಕರೆಯಲ್ಪಡುವ ತಾಯಿ ಹೃದಯದ 27 ವರ್ಷದ ಯುವಕ. ಇತ್ತೀಚೆಗೆ ಇಂಗ್ಲಿಷ್ ಕಲಿಯುತ್ತಿರುವ ಬ್ಯಾಂಡಿನ ಸದಸ್ಯರಿಗೆ ತಮ್ಮನ್ನು ದೇವರೆಂದು ಆರಾಧಿಸುತ್ತಿರುವ ಇದೇ ಅಭಿಮಾನಿಗಳು ಈ ಹಿಂದೆ  ತಮ್ಮನ್ನು ನಿಕೃಷ್ಟವಾಗಿ ಕಂಡಿದ್ದರು ಎನ್ನುವ ಸತ್ಯ ಅರಿವಾದಾಗ ನಂಜೂನ್ ಬಗ್ಗೆ ಮತ್ತಷ್ಟು ಮಗದಷ್ಟು ಆರಾಧನಾ ಭಾವ ಬೆಳೆಯುತ್ತದೆ. ಉನ್ನತ ಮೌಲ್ಯಗಳಿಂದಾಗಿ RM ಜಗತ್ತಿನಾದ್ಯಂತ ಮನೆಮಾತಾಗಿರುವನು.

💜💜💜

ಕಿಂ ನಂಜೂನಿನ ಸ್ಟೇಜ್ ಹೆಸರು RM ಎಂದು. ರ್ಯಾಪ್ ಮಾಂಸ್ಟರ್ ಎಂದು ಗುರುತಿಸಿಕೊಳ್ಳುತ್ತ ಇದೀಗ ‘ರಿಯಲ್ ಮಿ’ ಎಂದು ಕರೆದುಕೊಳ್ಳುತ್ತಾನೆ. ಇವನು ಹುಟ್ಟಿದ್ದು ಸೆಪ್ಟೆಂಬರ್ 12,1994 ರಂದು. ನಂಜೂನ್ BTSನ‌ ಮೊದಲ ಸದಸ್ಯ ಹಾಗು ನಾಯಕ.

ನಾಲ್ಕು ಜನ ಮಕ್ಕಳಲ್ಲಿ ಕಿಂ ನಂಜೂನ್ ಮೊದಲನೆಯವನು. ಇಬ್ಬರು ತಮ್ಮಂದಿರು,  ಒಬ್ಬ ತಂಗಿ. BTSನ ಇತರರಿಗಿಂತ ನಂಜೂನ್ ಮಾತ್ರವೇ ಇಂಗ್ಲಿಷ್ ಮಾತನಾಡುವುದು. ಕಾರಣ, ಚಿಕ್ಕಂದಿನಲ್ಲಿ ನಂಜೂನ್ ತನ್ನ ತಾಯಿಯೊಂದಿಗೆ ಕುಳಿತು ‘ಫ್ರೆಂಡ್ಸ್’ ಇಂಗ್ಲಿಷ್ ಸೀರಿಸ್ ನೋಡುತ್ತಾ ಇಂಗ್ಲಿಷ್ ಕಲಿತನಂತೆ. ಕೊರಿಯನ್, ಜಪಾನಿ ಭಾಷೆಗಳೊಂದಿಗೆ ಇಂಗ್ಲೀಷ್ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಾನೆ.

ಕಿಂ ನಂಜೂನ್ ಚಿಕ್ಕವನಿರುವಾಗಲೆ ಅಂದರೆ ಮಿಡಲ್ ಸ್ಕೂಲ್ ವಯಸ್ಸಿನಲ್ಲಿ ‘ಎಪಿಕ್ ಹೈ’ ಬ್ಯಾಂಡ್ ಹಾಡುಗಳಿಂದ ಪ್ರಭಾವಿತನಾದನು. ಇದು ಮುಂದೆ ತಾನು ಇಂತಹದ್ದೇ ಒಂದು ಬ್ಯಾಂಡ್ ನಾಯಕನಾಗಲು ಪ್ರಭಾವಿಸಿರಬೇಕು. ರ್ಯಾಪರ್ (Rapper) ಆಗಬೇಕೆಂದು ಬಯಸಿದ್ದ ಕಿಂ ನಂಜೂನ್, ಆರನೇ ತರಗತಿಯಲ್ಲಿಯೇ ಸ್ಟೇಜ್ ಶೋಗೆ ಪರಿಚಿತನಾದ. ನಂಜೂನ್ BTS ಸೇರಿದಾಗ ಅವನಿಗೆ ಕೇವಲ 16 ವರ್ಷಗಳು.

ನಂಜೂನ್ ಚಿಕ್ಕ ಹುಡುಗನಾಗಿದ್ದಾಗಲೇ ಪದ್ಯಗಳನ್ನು ಬರೆಯುತ್ತಿದ್ದ. ಅವನ ಬರಹಗಳಿಗೆ ಬಹುಮಾನಗಳನ್ನೂ ಪಡೆಯುತ್ತಿದ್ದ. ಕಲಿಕೆಯಲ್ಲಿಯು ಮೊದಲಿಗನಾಗಿದ್ದನು. ಅಸಾಮಾನ್ಯರ ಸಾಲಿನಲ್ಲಿ ನಿಲ್ಲುವ ಇವನ IQ 148!  ಬೆಳೆಯುತ್ತಾ ಬರವಣಿಗೆ, ರ್ಯಾಪ್ ಸಂಗೀತದೆಡೆಗೆ ಆಸಕ್ತಿ ಬೆಳೆಸಿಕೊಂಡನು. ಅವನ ತಂದೆ ತಾಯಿಯರಿಗೆ ಮಗ ಒಬ್ಬ ಬ್ಯುನಸಿನೆಸ್ ಮ್ಯಾನ್ ಆಗಬೇಕೆಂದಿತ್ತು. ಬದಲಿಗೆ ನಂಜೂನ್ ಒಬ್ಬ ಸಂಗೀತಗಾರನೂ, ಸಾಹಿತ್ಯಕಾರನೂ ಆದನು. ಈಗ ರೆಕಾರ್ಡ್ ಪ್ರೊಡ್ಯೂಸರ್ ಸಹ ಆಗಿ ಗುರುತಿಸಿಕೊಂಡಿದ್ದಾನೆ.

ತನ್ನ ಶಾಲಾ ದಿನಗಳಲ್ಲಿಯೇ ಪಾಪ್ ಸಂಗೀತದ ಸೆಳೆತದ ತೆಕ್ಕೆಗೆ ಬಂದ ಕಿಂ ನಂಜೂನ್, ಕೆಲವೊಂದು ಸಂಗೀತ ತಂಡಗಳಿಗೆ ಹಾಡಿದನು. ಮುಂದೆ ‘ಬಿಗ್ ಹಿಟ್ ಎಂಟರ್ಟೈನ್ಮೆಂಟ್’ ಗೆ ಆಡಿಷನ್ ಗೆ ಬಂದದ್ದು, ಒಂದೊಂದೇ ಮುತ್ತು ಪೋಣಿಸುವಂತೆ ಮಿಕ್ಕ ಆರು ಮುತ್ತುಗಳು ಅವನ ಜೊತೆಗೂಡಿದ್ದು, ಪ್ರಪಂಚದಾದ್ಯಂತ ಸದ್ದು ಮಾಡಿ, ಸಂಗೀತ ಪ್ರೇಮಿಗಳ ಮನಸ್ಸಿನಲ್ಲಿ ಮನೆ ಮಾಡಿರುವುದು….. ಹಳೆಯ ಕತೆ

RM ಎಂದೇ ಯುವ ಮನಸ್ಸುಗಳಲ್ಲಿ ಮನೆ ಮಾಡಿರುವ ನಂಜೂನ್ ಸರಳ ವ್ಯಕ್ತಿ. ಬಿಗ್ ಹಿಟ್ ನ ಮೊದಲ ಸದಸ್ಯ, ಪ್ರೆಸಿಡೆಂಟ್ ಆದ ಕಿಂ ನಂಜೂನ್, ಗುಂಪಿನ ಎಲ್ಲ ಸದಸ್ಯರ ಆಗುಹೋಗುಗಳ, ಭಾವನೆಗಳ, ಅಗತ್ಯಗಳನ್ನು, ಸಣ್ಣಪುಟ್ಟ ವಿಷಯಗಳನ್ನು ಆಳವಾಗಿ ಗಮನಿಸುತ್ತಾನೆ. ಒಬ್ಬ ನಾಯಕನಿಗೆ ಇರಬೇಕಾದ ಎಲ್ಲ ಒಳ್ಳೆಯ ಗುಣಗಳು ಅವನಲ್ಲಿವೆ. ತನ್ನ ಗುಂಪಿನ ಸದಸ್ಯರನ್ನು ಪ್ರೀತಿಯಿಂದ ಕಾಣುತ್ತಾನೆ. ಅವರನ್ನು ಮುಕ್ತವಾಗಿ ಹೊಗಳಿ ಪ್ರೋತ್ಸಾಹಿಸುತ್ತಾನೆ.

ಪ್ರತಿಯೊಂದು ಸ್ಟೆಪ್ ಹೇಗೆ ಬರಬೇಕು, ಹಾಡು ಹೇಗಿದ್ದರೆ ಚಂದ, ಹಾಡು ಮತ್ತು ನೃತ್ಯ ಹೇಗೆ ಸಮ್ಮಿಳಿತವಾಗಿರಬೇಕು ಎಂಬುದನ್ನು ನಿರ್ಧರಿಸುವುದು ಕಿಂ ನಂಜೂನ್. ಗುಂಪಿನ ಸದಸ್ಯರ ವೈಯಕ್ತಿಕ ಪರಿಧಿಯನ್ನು ಗೌರವಿಸುವ ಕಿಂ ನಂಜೂನ್, ಅವರ ಹಾಡಿನ, ನೃತ್ಯದ ಪ್ರತಿಭೆಯು ಸಂಪೂರ್ಣವಾಗಿ ಹೊರಹೊಮ್ಮಲು ಪ್ರೋತ್ಸಾಹಿಸುತ್ತಾನೆ. ‘ನಿಮ್ಮ ಸರತಿ ಬಂದಾಗ ನೀವು ಎಂಜಾಯ್ ಮಾಡಿಕೊಂಡು ಹಾಡಿರಿ, ಆ ಹಾಡಿಗೆ ತಕ್ಕಹಾಗೆ ಹೆಜ್ಜೆಗಳನ್ನು ಇಡಿರಿ. Just enjoy the song from the bottom of the heart’ ಎನ್ನುತ್ತಾನೆ ಕಿಂ ನಂಜೂನ್. ಅಂತೆಯೇ BTS ಹುಡುಗರ ಸ್ವರ ಜ್ಞಾನ, ಪರಸ್ಪರ ಸಹಕಾರ ಅದ್ಭುತವಾದದ್ದು.

2018ರಲ್ಲಿ ಯುನಿಸೆಫ್ ಸಂಸ್ಥೆಯು ಯುವ ಪ್ರತೀಕವೆನಿಸುವ BTS ತಂಡವನ್ನು ‘ಜನರೇಷನ್ ಅನ್ ಲಿಮಿಟೆಡ್’ (Generation Unlimited) ಕಾರ್ಯಕ್ರಮದ ಉದ್ಘಾಟನೆಯ ಸಲುವಾಗಿ ಆಹ್ವಾನಿಸಿತ್ತು. ಕಿಂ ನಂಜೂನ್ ತನ್ನ 25ನೇ ವಯಸ್ಸಿನಲ್ಲಿ ಯುನಿಸೆಫ್ ನಲ್ಲಿ ಭಾಷಣ ಮಾಡಿದ. ಇಂತಹ ಗೌರವಕ್ಕೆ ಪಾತ್ರವಾಗೊದು ಕಡಿಮೆಯೇ?

ನಿಮಗೆ ಗೊತ್ತಾ?!!

 • ಇಡೀ ಗುಂಪಿನಲ್ಲಿ ನಂಜೂನ್ ಗೆ ಮಾತ್ರ ಸರಿಯಾಗಿ ಇಂಗ್ಲಿಷ್ ಮಾತನಾಡಲು ಬರುವುದು. ಬೇರೆ ಸದಸ್ಯರು ಇಂಗ್ಲಿಷ್ ಮಾತನಾಡಲು ತಡವರಿಸುತ್ತಾರೆ ಮತ್ತೆ ಕೆಲವರು ಕಲಿಯುತ್ತಿದ್ದಾರೆ!
 • ಅವನಿಗೆ ವಿಮಾನಯಾನಗಳೆಂದರೆ ಅಷ್ಟಕ್ಕಷ್ಟೆ!
 • ಕಿಂ ನಂಜೂನ್ ನ ಸಂದೇಶ ‘Love yourself’/ ‘Love Myself’…. ನಿಮ್ಮನ್ನು ನೀವು ಪ್ರೀತಿಸಿರಿ 💜 ಈ ಘೋಷ ವಾಕ್ಯವನ್ನು ಯುನಿಸೆಫ್ ನಂಜೂನ್ ಅನುಮತಿ ಪಡೆದು #BTSLoveMyself ಹ್ಯಾಷ್ ಟ್ಯಾಗ್ ನೊಂದಿಗೆ ಬಳಸಿಕೊಂಡಿದೆ.

ಕಿಂ ನಂಜೂನ್ ನ‌ ಒಂದೆರಡು ಪಾಪ್ ಆಲ್ಬಂಗಳು ನಿಮಗಾಗಿ. ನೋಡಿ, ಆನಂದಿಸಿ, ಅನುಭವಿಸಿ.

ಪಾಪ್, ರ್ಯಾಪ್ ಸಂಗೀತವು ನಮಗೆ ಶಾಸ್ತ್ರೀಯ ಅನ್ನಿಸುವುದಿಲ್ಲ. ಆದರೆ ಪಾಶ್ಚಾತ್ಯ ದೇಶಗಳಲ್ಲಿ ಅವು ಜನಪ್ರಿಯ ಸಂಗೀತವೆನಿಸುತ್ತವೆ. ಸಂಗೀತಕ್ಕೆ ಭಾಷೆಯುಂಟೇ? ಸಂಗೀತವೇ ಸ್ವಯಂ ಭಾಷೆ. ಸಂಗೀತಕ್ಕೆ ಎಲ್ಲೆಯುಂಟೇ? ಸಂಗೀತವೇ ಎಲ್ಲೆ.

ತಾಯಿ, ಗೆಳೆಯ, ಟೀಚರ್, ಗೈಡ್ ಎಲ್ಲವೂ ಆಗಿರುವ ಕಿಂ ನಂಜೂನ್ ನಿಂದಾಗಿಯೇ ಇಂದು BTS ತನ್ನ ಅಸ್ತಿತ್ವವನ್ನು ಹೊಂದಿದೆ.

ಕಿಂ ನಂಜೂನ್ ನಂತಹ ಒಬ್ಬ ಫ್ರೆಂಡ್ ನಮಗೆ ಇದ್ದಿದ್ರೆ?

ನಾವೇ ಇವನಂಥ ಒಳ್ಳೆ ಫ್ರೆಂಡ್ ಯಾಕಾಗಬಾರದು…

ಮುಂದಿನ ವಾರ BTSನ ಎರಡನೇ ಸದಸ್ಯನ ಕತೆಯನ್ನು ನಿಮ್ಮ ಮುಂದೆ ಇಡುವೆ. ಅಲ್ಲಿಯವರೆಗೆ ಬೈ ಬೈ Borahae!! 💜 Saranghae!! 💜

ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ. ವಾಟ್ಸಪ್ ಮೂಲಕ, ಫೇಸ್‌ಬುಕ್‌ ನಲ್ಲಿಯೂ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿರುವುದಕ್ಕಾಗಿ ಧನ್ಯವಾದಗಳು.

ನಿಖಿತಾ ಅಡವೀಶಯ್ಯ

Related post

6 Comments

 • I really liked this so much. It’s was very nice to read. And also an inspiring thought. Thanks to you for writing about RM..☺️🥰

 • “ಸತ್ಯ ಸಂಗತಿ’ಗಳ ನುಡಿ ತೋರಣ” ಚೆನ್ನಾಗಿದೆ…. ಮುಂದುವರೆಸಿ…ಧನ್ಯವಾದಗಳು
  ಶುಭವಾಗಲಿ…

 • 👌👌👌 super , very nice story and
  waiting for 2nd story.

 • Thank you dear Soundarya. Keep reading..

 • DhanyavadagaLu Mariyayyaswamy avare.

 • Thank you dear Suma. Keep reading..

Leave a Reply

Your email address will not be published. Required fields are marked *