ಛಲದಂಕ ಮಲ್ಲ ಜಗದೇಕ ಸುಂದರ
ಛಲದಿಂದ ಏನನ್ನಾದರೂ ಸಾಧಿಸಬಹುದು ಎನ್ನಲು ಉದಾಹರಣೆ ಕಿಂ ಸಿಯೊಕ್ ಜಿನ್ (Kim Seok-Jin).
ಕಿಂ ಸಿಯೊಕ್-ಜಿನ್ (Kim Seok-Jin), 28 ವರ್ಷಗಳ ಅತ್ಯಂತ ಸುಂದರ ಯುವಕ. ಅವನನ್ನು ಜಗದೇಕ ಸುಂದರ (World wide handsome) ಎಂದೂ ಕರೆಯುತ್ತಾರೆ.
ಅವನ ಸ್ಟೇಜ್ ಹೆಸರು ಜಿನ್ ಎಂದು. BTSನ ಎರಡನೇ ಸದಸ್ಯ. ಇವನ ವೈಯಕ್ತಿಕ ಬದುಕಿನ ಬಗ್ಗೆ ಅಷ್ಟೇನೂ ವಿವರಗಳು ತಿಳಿದುಬಂದಿಲ್ಲವಾದರೂ, ಅಲ್ಪಸ್ವಲ್ಪ ವಿವರಗಳನ್ನು ಹೆಕ್ಕಿದ್ದೇನೆ.
ಜಿನ್ ಹುಟ್ಟಿದ್ದು ಡಿಸೆಂಬರ್ 4, 1992ರಲ್ಲಿ. ಜಿನ್ ನ ತಂದೆ ತಾಯಿಯರಿಗೆ ಇಬ್ಬರು ಮಕ್ಕಳು. ಜಿನ್ ಎರಡನೆಯವನು. ಜಿನ್ ನ ದೊಡ್ಡಣ್ಣನಿಗೆ ಜಪಾನಿನಲ್ಲಿ ಒಂದು ಹೋಟೆಲ್ ಇದೆ. ಜಿನ್ ಅದರ ಪಾಲುದಾರನಾಗಿದ್ದಾನೆ.
ಆಗರ್ಭ ಶ್ರೀಮಂತನಾದ ಜಿನ್ ತನ್ನ ತಂದೆಯ ಹಣ, ಪ್ರಭಾವವನ್ನು ಬಳಸಿಕೊಳ್ಳಲು ಇಷ್ಟಪಡಲಿಲ್ಲ. ತನ್ನ ದಾರಿಯನ್ನು ತಾನೇ ಕಂಡುಕೊಂಡನು. ಜಿನ್ ಗೆ ತಾನೊಬ್ಬ ನಟನಾಗಬೇಕು ಎಂದು ಆಸೆ ಇತ್ತು. ಆದರೆ ಸಂಗೀತದ ಗಂಧವೇ ಇರದಿದ್ದ ಜಿನ್ BTSನ ಪ್ರಮುಖ ಗಾಯಕನಾಗಿದ್ದು ಒಂದು ಪವಾಡವೇ ಸರಿ!
ಅದೃಷ್ಟ ಜಿನ್ ನನ್ನು ಪದೇ ಪದೇ ಹುಡುಕಿಕೊಂಡು ತನ್ನದಾಗಿಸಿಕೊಂಡಿದೆ ಎನ್ನಬಹುದು. ಏಕೆಂದರೆ ಸಂಗೀತ, ನೃತ್ಯದ ಗಾಳಿ ಗಂಧವೇ ಇರದ ಹುಡುಗ Big Hit Entertainmentನಲ್ಲಿ ನಟನೆಯ ಆಡಿಷನ್ ಸಲುವಾಗಿ ಬಂದಿದ್ದ. ಆದರೆ ಅದೃಷ್ಟ ಅವನು ಏನನ್ನು ತನ್ನ ಕನಸಿನಲ್ಲಿಯೂ ಊಹಿಸಿರಲಿಲ್ಲವೊ ಅಂತಹ ಎತ್ತರಕ್ಕೆ ಕೊಂಡೊಯ್ತು.
ಇಂತಹ ಜಿನ್ ಹಿಂದೊಮ್ಮೆ ಅಷ್ಟೇನೂ ಸುಂದರನಲ್ಲದ, ತನ್ನ ಬಗ್ಗೆ ಕೀಳರಿಮೆ, ನಾಚಿಕೆ ಸ್ವಭಾವದ, ಯಾರೊಂದಿಗೂ ಅಷ್ಟಾಗಿ ಬೆರೆಯದ ಅಂತರ್ಮುಖಿಯಾಗಿದ್ದನು ಎನ್ನುವುದು ಈಗ ಊಹಿಸಲೂ ಸಾಧ್ಯವಾಗುವುದಿಲ್ಲ.
ಇಂಟರ್ವ್ಯೂ ಒಂದರಲ್ಲಿ ಜಿಮ್ “ನಾನೇನೂ ಪ್ರತಿಭಾವಂತನಲ್ಲ. ಆದರೆ ಙಗೆ ಸಿಕ್ಕ ಅವಕಾಶಗಳಲ್ಲಿ ನನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡೆ. ನನ್ನ ಪ್ರಯತ್ನಶೀಲತೆ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ. ಪ್ರತಿಯೊಂದು ಹೊಸತನ್ನು ಕಷ್ಟಪಟ್ಟು ಅಭ್ಯಾಸ ಮಾಡುತ್ತೇನೆ.
BTS ಆಡಿಷನ್ ಗೆಬಂದಾಗ ನನಗೆ ಏನೂ ಗೊತ್ತಿರಲಿಲ್ಲ. ಹಾಡು, ಡ್ಯಾನ್ಸ್ ಎಲ್ಲವನ್ನೂ ಕಲಿತೆ. ದಿನದಿಂದ ದಿನಕ್ಕೆ ಪರಿಣತಿ ಹೊಂದುತ್ತಾ ಬಂದೆ.
ಸ್ವರ, ರಿದಮ್, ಸಾಹಿತ್ಯ ಎಂದರೇನು ಎಂದು ಗೊತ್ತಿರಲಿಲ್ಲ. ಈಗಲೂ ನಾನೊಬ್ಬ ಹೊಸತನ್ನು ಕಲಿಯುತ್ತಿರುವ ವಿದ್ಯಾರ್ಥಿ.
ಬೇರೆಯವರನ್ನು ಪ್ರೀತಿಸು ಎಂದರೆ ಸಾಧ್ಯವಾಗದು. ನಮನ್ನು ನಾವು ಪ್ರೀತಿಸಿಕೊಳ್ಳಲೂ ನಮಗೆ ಸಾಧ್ಯವಾಗುವುದಿಲ್ಲ. ನಮ್ಮನ್ಮು ನಾವು ಪ್ರೀತಿಸುವುದು ಅತ್ಯಂತ ಕಷ್ಟಕರವಾದದ್ದು. ಆದರೆ ಒಮ್ಮೆ ನಾವು ನಮ್ಮನ್ನು ಪ್ರೀತಿಸಲು ಕಲಿತರೆ, ಸ್ವಯಂ ಕಲಿಕೆ, ಸ್ವಯಂ ತಿದ್ದುಪಡಿ (self learning, self correction) ಖಂಡಿತ ಸಾಧ್ಯವಾಗುತ್ತದೆ. ದೃಢನಿಶ್ಚಯ, ದೃಢಪ್ರಯತ್ನ ನಿಮ್ಮನ್ನು ಅತ್ಯಂತ ಸುಂದರ ವ್ಯಕ್ತಿಯನ್ನಾಗಿ ರೂಪಿಸುತ್ತದೆ.” ಎಂದಿದ್ದಾನೆ.
ಇಂತಹ ಜಿನ್ ಹಿಂದೊಮ್ಮೆ ಅಷ್ಟೇನೂ ಸುಂದರನಲ್ಲದ, ತನ್ನ ಬಗ್ಗೆ ಕೀಳರಿಮೆ, ನಾಚಿಕೆ ಸ್ವಭಾವದ, ಯಾರೊಂದಿಗೂ ಅಷ್ಟಾಗಿ ಬೆರೆಯದ ಅಂತರ್ಮುಖಿಯಾಗಿದ್ದನು ಎನ್ನುವುದು ಈಗ ಊಹಿಸಲೂ ಸಾಧ್ಯವಾಗುವುದಿಲ್ಲ.
ಆತ್ಮಾಭಿಮಾನ, ಆತ್ಮವಿಶ್ವಾಸ, ಸತತ ಕಲಿಕೆ ಮತ್ತು ಅಭ್ಯಾಸದಿಂದ ಸೊನ್ನೆಯೂ ಸನ್ನೆಯಾಗಬಲ್ಲದು.
ನಿಮಗೆ ಗೊತ್ತಾ?!!
- ಜಿನ್ ಗೆ ಮ್ಯೂಸಿಕ್, ಡ್ಯಾನ್ಸ್ ಎರಡೂ ಗೊತ್ತಿರಲಿಲ್ಲ.
- ಹಾಡು, ಸ್ವರಗಳ ಜ್ಞಾನವೇ ಇರದಿದ್ದ ಜಿನ್ ಇಂದು ಪಂಚಮಸ್ವರದಲ್ಲಿ ಹಾಡಬಲ್ಲನು.
- ಜಿನ್ BTSನಲ್ಲೇ ಉದ್ದಕಾಲುಳ್ಳವನು.
- ಜಿನ್ ಅತ್ಯಂತ ಶ್ರೀಮಂತ ಮನೆತನದಿಂದ ಬಂದವನು.
- ಜಿನ್ ಅತ್ಯಂತ ಆತ್ಮವಿಶ್ವಾಸವುಳ್ಳವನು.
- ಜಿನ್ ಇಂದು BTS ಅನ್ನು ತನ್ನ ಉಸಿರಾಗಿಸಿಕೊಂಡಿದ್ದಾನೆ.
ಜಿನ್ ಇಂಟರ್ ವ್ಯೂ ತುಣಕು ಮತ್ತು ಹಾಡಿನ ಕ್ಲಿಪ್ … ನಿಮಗಾಗಿ
ಮುಂದಿನ ವಾರ BTSನ ಮೂರನೇ ಸದಸ್ಯನ ಕತೆಯನ್ನು ನಿಮ್ಮ ಮುಂದೆ ಇಡುವೆ. ಅಲ್ಲಿಯವರೆಗೆ ಬೈ ಬೈ Borahae!! 💜 Saranghae!! 💜
ನಿಖಿತಾ ಅಡವೀಶಯ್ಯ
ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ. ವಾಟ್ಸಪ್ ಮೂಲಕ, ಫೇಸ್‌ಬುಕ್ ನಲ್ಲಿಯೂ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿರುವುದಕ್ಕಾಗಿ ಧನ್ಯವಾದಗಳು.
13 Comments
Ma’am ur articles are very informative and educative, they not only feature on the success of a person but the important thing in his life- his struggle, his desire, his dedication towards his goal. Above all his achievement. Thank u so much for sharing these info ma’am, Many of us don’t know these things but simply love BTS n their music.🙏🏻😊
😊😊💜 nice article , Borahea BTS!🥺💜
💜💜💜💜💜thank you for writing about bts and the people in it it means a lot to us 💜💜💜
Aah a very nice article, with lovely picture collections…. Please keep writing 😄
ನಿಖಿತ, ಜಿನ್ ಬಗ್ಗೆ ತಿಳಿಸಿಕೊಟ್ಟದ್ದಕ್ಕೆ ಧನ್ಯವಾದಗಳು. ಆತ ನಿಜ ಸುಂದರಾಂಗ! ಎಲ್ಲಿಂದ ಎಲ್ಲಿಗೆ ಬೇಕಾದರೂ ಯಾರಾದರೂ ಏರಬಹುದು ಎಂದು ತೋರಿಸಿದ ಧೀರ!
Nice.
Nice.
Thank you Rekha
Thank you Sir.
Thank you Shivani
Thank you Krysanthe A
Thank you, Borahea!!!
Thank you very much for your inspiring words Poornimaji