ಬೀಚಿ ರಾಸಾಯನ – ಬೀಚಿ ಹೌಸ್ (ನಾಟಕ)

ಕನ್ನಡ ಸಾಹಿತ್ಯದ ಹಾಸ್ಯ ಲೇಖಕ ಬೀಚಿಯವರ ಪೂರ್ಣ ಹೆಸರು “ರಾಯಸಂ ಭೀಮಸೇನ ರಾವ್”. ವಿಜಯನಗರದ ಹರಪನಹಳ್ಳಿಯಲ್ಲಿ ಏಪ್ರಿಲ್ 23 1913 ರಂದು ಜನನ. ಬೀಚಿಯವರು ತಮ್ಮ ‘ತಿಮ್ಮ ರಾಸಾಯನ’ ಕೃತಿಯಲ್ಲಿ ಜನಸಾಮಾನ್ಯರು ನಿತ್ಯ ಬದುಕಿನಲ್ಲಿ ಉಪಯೋಗಿಸುವ ಎಷ್ಟೋ ಪದಗಳಿಗೆ ತಮ್ಮ ಪಂಚ್ ಗಳ ಮೂಲಕ ಹೊಸ ಅರ್ಥಗಳನ್ನೇ ನೀಡಿದ್ದಾರೆ. ಅಂತಹ ಪದಗಳನ್ನು ಹಾಗು ಅದರ ಹೊಸ ಅರ್ಥಗಳನ್ನ ಆಯ್ದು “ಬೀಚಿ ರಾಸಾಯನ” ಅಥವಾ “ಬೀಚಿ ಹೌಸ್” ಎಂದು ನಾಟಕ ರೂಪದಲ್ಲಿ ತಂದಿದ್ದಾರೆ ಶ್ರೀ ರಾಜೇಂದ್ರ ಕಾರಂತ್ ನಿರ್ದೇಶನದಲ್ಲಿ ಹಾಗು ಶ್ರೀ ಎನ್. ಸಿ. ಮಹೇಶ್ ರವರ ರಂಗರೂಪದಲ್ಲಿ ಹೊರಬಂದಿದೆ.

ಕಥಾವಸ್ತು ಸ್ವತಂತ್ರ, ಆದರೆ ಅದರ ಒಳಗಿನ ಪದ ಮತ್ತು ಅರ್ಥಗಳ ಜೀವಧಾತು ಬೀಚಿ ಅವರದು. ಭಕ್ತಿ ನಿಜವಾದದ್ದಾರೆ ಸಾಲದು, ಅದು ಜಾತಿ ಸೋಂಕಿನಿಂದಲೂ ಮುಕ್ತವಾಗಿರಬೇಕು ಎಂಬುದನ್ನು ನಾಟಕೀಯವಾಗಿ ಹೇಳುವ ನಾಟಕ ಇದು. ಇಲ್ಲಿ ಭಕ್ತಿಯ ಪ್ರತೀಕವಾಗಿ ‘ಜಾನಕಮ್ಮ’ ಇದ್ದಾರೆ. ಹಾಗೇ ಎಲ್ಲಿ ಭಕ್ತಿಯ ಪರಾಕಾಷ್ಠತೆ ಇರುತ್ತದೆಯೋ ಅಲ್ಲಿ ವಸ್ತುನಿಷ್ಠ ಗ್ರಹಿಕೆಯೂ ಇರುತ್ತದೆ.

ಗುರುಮೂರ್ತಿ ಈ ಪಾತ್ರದ ಸಂಕೇತ. ಈ ಭಕ್ತಿ ಮತ್ತು ವಸ್ತುನಿಷ್ಠತೆಗೆ ತನ್ನದೇ ಆದ ಗುಂಗು ಇರುತ್ತದೆ. ಅದೇ ಇಲ್ಲಿ ‘ ಶ್ರೀಧರ’ನ ಪಾತ್ರವಾಗಿ ಮೈದಾಳಿದೆ. ಈ ಗುಂಗು ತನ್ನ ಅಪ್ಪ ಅಮ್ಮನೆಂಬ ಭಕ್ತಿ ಮತ್ತು ವಸ್ತುನಿಷ್ಠತೆಯನ್ನ ಹೇಗೆ ತಣಿಸುತ್ತದೆ ಎಂಬುದನ್ನು ಈ ನಾಟಕ ಕಟ್ಟಿಕೊಡುತ್ತದೆ. ಸಂಕೇತವಾಗಿಯೂ ನೋಡಬಹುದು ಹಾಗೂ ಕೇವಲ ಪಾತ್ರವಾಗಿಯೂ ಗ್ರಹಿಸಬಹುದು. ಎರಡೂ ಬಗೆ ಬೆರೆತಿರುವುದರಿಂದ ಇದು ‘ ರಸಾಯನ’. ಮತ್ತು ಬೀಚಿಯವರಿಂದ ಪದಾರ್ಥಗಳನ್ನ ಎರವಲು ಪಡೆದಿರುವುದರಿಂದ ಇದು ‘ಬೀಚಿ ರಸಾಯನ’

ಇಂದು 18-12-2021 ರ ಸಂಜೆ 7 ಕ್ಕೆ ಎನ್ ಆರ್ ಕಾಲೋನಿ ಯ ‘ಅಶ್ವತ್ ಕಲಾಭವ’ ನದಲ್ಲಿ ಈ ನಾಟಕದ ಪ್ರದರ್ಶನವಿದೆ. ಟಿಕೇಟಿನ ಬೆಲೆ ಕೇವಲ 150/- ಆಸಕ್ತರು ನಾಟಕ ವೀಕ್ಷಿಸಿ ರಂಗಭೂಮಿಯ ಇಂತಹ ವಿಶಿಷ್ಟ ಪ್ರಯೋಗವನ್ನು ಯಶಸ್ವಿಗೊಳಿಸಬೇಕೆಂದು ಕೋರುವ…

ಸಾಹಿತ್ಯಮೈತ್ರಿ ತಂಡ

Related post

Leave a Reply

Your email address will not be published. Required fields are marked *