ಬೀಸುವ ಕಲ್ಲು
ರಾಗಿ ಬೀಸೋ ರಾಜ್ಯಾದೊಳಗೆ
ನಾನೂ ನೀನೂ ಜೋಡಿಜೀವ
ನನ ಕಾಲ ಹೇಗಿತ್ತು ಕೇಳೋ ನನ ಜಾಣ
ಮನೆ ತುಂಬಾ ನೂರಾರು ಮಂದಿ
ಎಲ್ರಿಗೂ ಬೇಕು ಮುದ್ದೆ ರೊಟ್ಟಿ
ಸೇರು ಸೇರು ರಾಗಿ ಬೀಸೋ ಕಾಲ ನನ ಜಾಣ
ಬೆಳಗೆದ್ದು ನೀರ್ಹೊತ್ತು ಕಸ ಹೊಡೆದು
ಆಕಳ ಮೈ ತಿಕ್ಕಿ ಹಾಲು ಹಿಂಡಿ
ಕೆರೆಯಲ್ಲಿ ಮೈ ತೊಳೆದೆ ನನ ಜಾಣ
ಬುಡ್ಡಿ ದೀಪದ ಬೆಳಕಲ್ಲಿ ಪಾಟಿ ಹಿಡಿದು
ಮಕ್ಕಳಿಗೆ ಪಾಠ ಕಲಿಸಿ ದೊಡ್ಡೋರ ಮಾಡಿ
ಬಲು ಪಾಡು ಪಟ್ಟೆ ಕೇಳೋ ನನ ಜಾಣ
ಈಗುಂಟು ಸರ್ಕಾರ ಅದು ಕೊಟ್ಟ ಕರೆಂಟು
ಮಿಕ್ಸಿ ಮಿಲ್ಲುಗಳಿದ್ರೂ ಈ ರುಚಿ ಎಲ್ಲುಂಟು
ರಾಗಿ ಬೀಸೋದು ತಪ್ಲಿಲ್ಲ ಕೇಳೋ ನನ ಜಾಣ
ರಾಜರು ಹೋದರು ಮಂತ್ರಿಗಳು ಬಂದರೂ
ಹಳ್ಳಿಗಳು ಹೋಗಿ ನಗರಗಳು ಬಂದರೂ
ರಾಗಿ ಬೀಸೋದು ತಪ್ಲಿಲ್ಲ ಕೇಳೋ ನನ ಜಾಣ
ನಾ ರಾಗಿ ಬೀಸಿದರೆ ಎಲ್ರಿಗೂ ಹಿಟ್ಟುಂಟು
ನೀ ಬೀಸೋದ ಕಲೆತರೆ ನಿನಗೂ ಹಿಟ್ಟುಂಟು
ಈ ಸತ್ಯ ಅರಿಯೋ ನನ ಜಾಣ……

ಸಿ.ಎನ್. ಮಹೇಶ್
1 Comment
ಚೆನ್ನಾಗಿ ಬರೆದಿದ್ದೀರಿ