ಪುನಃ ಪುನಃ ಬುದ್ಧ ನೆನಪಾಗುತ್ತಾನೆ.
ಅವನು ಕಲಿಸಿದ ಸಾಸಿವೆಯ ಪಾಠಕ್ಕೆ
ಸಾಸಿವೆಯಷ್ಟೇ ಕಹಿಯಾದ ಸತ್ಯಕ್ಕೆ..
ಈಗ ಎಲ್ಲರ ಮನೆಯಲ್ಲೂ
ಓರ್ವ ಕಿಸಗೌತಮಿ ಇದ್ದಾಳೆ..
ದುರಂತದ ಸಾಕ್ಷಿಯಾಗಿ..
ಸಾವಿನ ಭಾದೆಗೆ ಎಲ್ಲರೂ ಅರ್ಹರು..
ಕಣ್ಣು ತೆರೆಸಿದನು ಬುದ್ಧ.. ಗೌತಮಿ ನಕ್ಕಳಾಗ..
ಈಗ ನಾವೂ ಕಣ್ಣು ತೆರೆಯಬೇಕಿದೆ.. ಬೆತ್ತಲಾಗದಿರಲು ಜಗದ ಮುಂದೆ.
ಇಪ್ಪತೊಂದನೆಯ ಶತಮಾನ ಅದೆಂತಹ ಕೇಡು..
ರಾಕೇಟುಗಳ ಕಳುಹಿಸಿ ಬೀಗದರೇನು ಬಂತು ಗಗನದೊಳು..
ಗಮನ ಹರಿಸಲು ಬೇಕು.. ಭೂಮಿಯೊಳು. ನಮ್ಮ ಆರೈಕೆಯೊಳು.
ಇಂದು ರಸ್ತೆಗಳು ಖಾಲಿಯಾಗಿವೆ..
ಮನೆಗಳು ಹಾಳುಬೀಳದಿರಲಿ.
ಉಸಿರಾಟಕ್ಕೆ ತೊಂದರೆಯ ರೋಗವಿದೆ..
ಉಸಿರು ನಿಲ್ಲದಿರಲಿ.
ನಮ್ಮೆಲ್ಲರ ಸಂಕಲ್ಪ ಹೀಗೆ ಇರಲಿ..
ಬುದ್ಧ ಹೇಳಿದಂತೆ ಗೆಲ್ಲೋಣ ಯುದ್ದದಲ್ಲಿ..
ರಸ್ತೆಯೊಂದಿಗೆ ಮನೆಗಳೂ ಖಾಲಿಯಾಗದಿರಲಿ..
ಪವನ ಕುಮಾರ ಕೆ ವಿ
ಬಳ್ಳಾರಿ
ಶೀರ್ಷಿಕೆ ಚಿತ್ರ ಸೃಷ್ಟಿ: ಕುಮಾರಿ ಚಂದ್ರಕಲಾ