ಬೆನಕ

ಬೆನಕ

ನಮ್ಮ ಬೆನಕನು ಬರುವನು
ಕರೆದೊಯ್ಯಲೆನ್ನ ತಾಯನು
ಭಾದ್ರಪದದಲಿ ಬರುವನು
ನಮಗಮಿತ ಸಂತಸವೀವನು!

ಮುತ್ತುರತ್ನವ ಬೇಡನಿವನು
ಹುಲ್ಲು ಗರಿಕೆಗೆ ಒಲಿವನು
ಗೌರಿದೇವಿಯ ಕಂದನಿವನು
ಮೋದಕ ಪ್ರಿಯನಿವನು !

ನಕ್ಕ ಚಂದ್ರಗೆ ಶಾಪವಿತ್ತನು
ಪರಿಹಾರವ ತಾ ಕೊಟ್ಟನು
ಭಕ್ತರ ಪೊರೆಯೆ ಬರುವನು
ಮನಕಾನಂದವ ತರುವನು!

ಶ್ರೀವಲ್ಲಿ ಮಂಜುನಾಥ

Related post

Leave a Reply

Your email address will not be published. Required fields are marked *