ಜಿಯಾನ್ ಜಂಗ್-ಕುಕ್ BTSನ ಅತ್ಯಂತ ಕಿರಿಯ ಸದಸ್ಯ. ಇವನು ಹುಟ್ಟಿದ್ದು ಸೆಪ್ಟೆಂಬರ್ 1ನೇ ತಾರೀಖಿನಂದು.

ಜಂಗ್-ಕುಕ್ ನದ್ದು ಅಪ್ಪ-ಅಮ್ಮ, ಒಬ್ಬ ಅಣ್ಣನೊಂದಿಗಿನ ಪುಟ್ಟ ಕುಟುಂಬ. ದೊಡ್ಡವನಾದ ಮೇಲೆ ತಾನು ಬ್ಯಾಡ್ಮಿಂಟನ್ ಆಟಗಾರನಾಗಬೇಕೆಂದು ಆಸೆಪಟ್ಟಿದ್ದ ಪುಟ್ಟ ಹುಡುಗ ಜಂಗ್-ಕುಕ್. ಜಿ-ಡ್ರ್ಯಾಗನ್ ನ (G-Dragon) ‘ಹಾರ್ಟ್ ಬ್ರೇಕರ್’ (Heartbreaker) ಎಂಬ ಪಾಪ್ ಸಂಗೀತವನ್ನು ದೂರದರ್ಶನದಲ್ಲಿ ನೋಡಿ, ತಾನೂ ಅವನಂತಾಗಬೇಕು ಎಂದು ಆಸೆಪಟ್ಟನು.
ಜಂಗ್-ಕುಕ್ 14 ವರ್ಷದವನಿದ್ದಾಗಲೇ ಕೊರಿಯಾದ ಸೂಪರ್ ಸ್ಟಾರ್ ಟ್ಯಾಲೆಂಟ್ ಶೋ ಒಂದರಲ್ಲಿ ಆಡಿಷನ್ ಗಾಗಿ ಹೋಗಿದ್ದನು. ಆದರೆ ಆ ಕಾರ್ಯಕ್ರಮಕ್ಕೆ ಅವನು ಆಯ್ಕೆಯಾಗದಿದ್ದರೂ ಸಹ ಏಳು ಮ್ಯೂಸಿಕ್ ಬ್ಯಾಂಡ್ ಕಂಪನಿಗಳಿಂದ ಆಹ್ವಾನ ಬಂದಿತು.
BTS ನ ನಾಯಕ ಕಿಂಜೂನ್ (RM)ನ ನ್ಯತ್ಯ ಪ್ರದರ್ಶನವನ್ನು ನೋಡಿದ ಜಂಗ್-ಕುಕ್, ಬಿಗ್ ಹಿಟ್ ಎಂಟರ್ಟೈನ್ಮೆಂಟ್ ಗೆ ಸೇರಲು ನಿರ್ಧರಿಸಿದನು.
ಕಿಂ ನಂಜೂನ್ ಅಕ್ಷರಶಃ ಒಬ್ಬ ತಾಯಿಯ ಹಾಗೆ ಸದಾ ಇವನನ್ನು ಗಮನಿಸುತ್ತಲೇ ಇರುತ್ತಾನೆ. ಆ ಕಾರಣಕ್ಕಾಗಿಯೇ ಇರಬೇಕು ಸಣ್ಣಪುಟ್ಟ ಸಮಸ್ಯೆಗಳು ಬಂದರೂ ಸಹ ಜಂಗ್-ಕುಕ್, RMನ ಬೆನ್ನುಹತ್ತುತ್ತಾನೆ. ಬಸವನ ಹಿಂದೆ ಬಾಲದ ಹಾಗೆ RM ಹಿಂದೆ ಸದಾ ಜಂಗ್-ಕುಕ್ ಇರುತ್ತಾನೆ!
2012ರಲ್ಲಿ ಜಂಗ್-ಕುಕ್ 15 ವರ್ಷದವನಿದ್ದಾಗ ತನ್ನ ಬೇಸಿಗೆ ರಜೆಯಲ್ಲಿ ಲಾಸ್ ಏಂಜಲೀಸ್ ಗೆ ಹೋಗಿ ನೃತ್ಯವನ್ನು ಕಲಿತು ಬಂದನು. ಬಂದನಂತರ ಮ್ಯೂಸಿಕ್ ವೀಡಿಯೊ ಒಂದಕ್ಕೆ ಕೆಲಸ ಮಾಡಿದನು.
💜💜💜
ನಿಮಗೆ ಗೊತ್ತಾ?!

- ಜಂಗ್-ಕುಕ್ ಎಲ್ಲರಿಗಿಂತ ಕಿರಿಯ, ಬ್ಯಾಂಗ್ತಾನ್ ಬೇಬಿ ಎಂದು ಕರೆಯಲ್ಪಡುತ್ತಾನೆ.
- ಶಾಲೆಯಲ್ಲಿರುವಾಗ ಆಟವೊಂದನ್ನು ಬಿಟ್ಟು ಇನ್ನೇನೂ ಇಷ್ಟವಾಗುತ್ತಿರಲಿಲ್ಲ.
- ತಿನ್ನುವುದೆಂದರೆ ಬಲು ಇಷ್ಟ!
- ಅವನಿಗೆ ಬಾಳೆಹಣ್ಣಿನ ಮಿಲ್ಕ್‌ಶೇಕ್ ಎಂದರೆ ಪಂಚಪ್ರಾಣ.
- ಚಿತ್ರ ಬಿಡಿಸುವುದು ಅವನ ಪ್ರೀತಿಯ ಹವ್ಯಾಸ.
- ಈಗಲು ಅನಿಮೇಷನ್ ಚಿತ್ರಗಳೆಂದರೆ ಬಲು ಇಷ್ಟ.
- ಸದಾ RMನ ಹಿಂದೆ ಮುಂದೆ ಓಡಾಡಿಕೊಂಡಿರುತ್ತಾನೆ.
- ಸಾಹಿತ್ಯ ರಚನೆ ಅವನ ಹವ್ಯಾಸ.
- ಗಿಟಾರು ಬಾರಿಸುವುದು ಅತ್ಯಂತ ಪ್ರೀತಿ.
- ಅನೇಕ ಸೋಲೋ ಹಾಡುಗಳನ್ನು ಹಾಡಿ, ಜಗತ್ಪಸಿದ್ಧನಾಗಿದ್ದಾನೆ
ನಿಮಗಾಗಿ ಜಂಗ್-ಕುಕ್ ನ ಕೆಲವೊಂದು ವೀಡಿಯೊ ತುಣುಕುಗಳು ಇಲ್ಲಿವೆ.
- https://youtu.be/xrjChRuhNtU
- https://youtu.be/LsC95Taz-xM
- https://youtu.be/kX0vO4vlJuU
ಮುಂದಿನ ವಾರ BTSನ ಇನ್ನೊಬ್ಬ ಸದಸ್ಯನ ಕತೆಯನ್ನು ನಿಮ್ಮ ಮುಂದೆ ಇಡುವೆ. ಅಲ್ಲಿಯವರೆಗೆ ಬೈ ಬೈ Borahae!! 💜 Saranghae!! 💜
ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ. ವಾಟ್ಸಪ್ ಮೂಲಕ, ಫೇಸ್‌ಬುಕ್ ನಲ್ಲಿಯೂ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿರುವುದಕ್ಕಾಗಿ ಧನ್ಯವಾದಗಳು.

ನಿಖಿತಾ ಅಡವೀಶಯ್ಯ