ಭಜರಂಗಿ ಮೊದಲ ಚಿತ್ರಕ್ಕು ಇದಕ್ಕೂ ಸಂಬಂಧವಿಲ್ಲ ನಿಜ
ಇಂತದೊಂದು ಕಲ್ಪನೆ ಹರ್ಷ ಅವರಿಗೆ ಬಂದದ್ದು ಅದಕ್ಕೆ ಶಿವಣ್ಣ ನ ಒಪ್ಪಿಗೆ ಮೆಚ್ಚುವಂತದ್ದೇ.
ಕಾಲ್ಪನಿಕ – Fantasy ಕಥೆ
ಈ ಚಿತ್ರವನ್ನು ಹಾಗೆ ನೋಡಬೇಕು
ಲೋಪ ದೋಷಗಳು ಏನೇ ಇದ್ದರೂ ರಪ್ಪಂತ ಪಾಸ್ ಹಾಗುತ್ತವೆ
ಮೊದಲರ್ದ ಅಕ್ಕನ ಪ್ರೀತಿಯಲ್ಲಿ ಶೃತಿ ಪ್ರೇಕ್ಷಕರನ್ನು ಆಕ್ರಮಿಸುತ್ತಾರೆ. ಇನ್ನು ನೆಪ ಮಾತ್ರಕ್ಕೆ ಅಂಜನಾ ಮತ್ತೆ ಇನ್ನು ಬರುವ ಪಾತ್ರಗಳು
ಮೊದಲ ಭಜರಂಗಿ ಚಿತ್ರದಲ್ಲಿ ಅಬ್ಬರಿಸಿದ ಸೌರವ್ ಲೋಕೇಶ್ ಇಲ್ಲಿ ವೈದ್ಯೋ ನಾರಾಯಣ ಹರಿ
ಇನ್ನು ಶಿವಣ್ಣ ಅಭಿನಯ ದೂಸ್ರಾ ಮಾತೆ ಇಲ್ಲ.
ಶಿವಣ್ಣ ಸತ್ತು ಬದಕುವ ಪಾತ್ರ ಎಷ್ಟು ನೈಜ್ಯ ಅಂದ್ರೆ
ಅಪ್ಪು ಮತ್ತೆ ಇದೇ ರೀತಿ ವಾಪಸ್ಸು ಬಂದ ಅನ್ನೋ ರೀತಿ
ಪುಟ್ಟ ತಮ್ಮನ ಅಗಲಿಕೆ ಶಿವಣ್ಣನಿಗೆ ಹೇಗೆ ತಡಕೊಳ್ಳೋಕೆ ಆಗುತ್ತೆ
ಇಲ್ಲಾ ತಾನೆ
ನಿರ್ಮಾಪಕರು ದುಡ್ಡು ಏರ್ಪಡಿಸಿ ಇಂಥ ಒಂದು ಒಳ್ಳೆಯ ಸಿನಿಮಾ ಮಾಡಿದ್ದಾರೆ.
ಎಷ್ಟೇ ಆದರು ಇದು fantasy ಚಿತ್ರ ಲೋಪ ದೋಷ ಹುಡುಕಬೇಡಿ ಚಿತ್ರ ನೋಡಿ 🙏
ಹನುಮ ಹರ್ಷನ ಪ್ರತಿಭೆ ಕಾಪಾಡಲಿ
ಕು ಶಿ ಚಂದ್ರಶೇಖರ್