ಭೂರಮೆ ವಿಲಾಸ’ ಹಾಗೂ ‘ವೈಫ್ ಆಫ್ ಸೋಲ್ಜರ್

ನಾಲ್ಕು ವರ್ಷದ ಸೃಜನಿಯ ಕಲಾಕೃತಿಗಳ ಪ್ರದರ್ಶನ

ನಾಲ್ಕು ವರ್ಷದ ಬಾಲ ಕಲಾವಿದೆ ಎಸ್.ವಿ.ಸೃಜನಿಯ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಮತ್ತು ಕಗ್ಗೆರೆಪ್ರಕಾಶ್ ಅವರ 4ನೇ ಕವನ ಸಂಕಲನ, 21ನೇ ಪುಸ್ತಕ ‘ಭೂರಮೆ ವಿಲಾಸ’ಹಾಗೂ ಎಸ್.ಭಾಗ್ಯ ಅವರ ಅನುಭವ ಕಥನ ‘ವೈಫ್ಆಫ್ಸೋಲ್ಜರ್’ ಬಿಡುಗಡೆ ಕಾರ್ಯಕ್ರಮ ಇದೇ ಏಪ್ರಿಲ್ 25ನೇ ತಾರೀಖು ಭಾನುವಾರ ಬೆಂಗಳೂರಿನ ಕೆಜಿಎಲ್ಡಿ ಆರ್ಟ್ಗ್ಯಾಲರಿಯಲ್ಲಿ ನಡೆಯಲಿದೆ.  ಇಂಥ ಅಪರೂಪದ ಕಾರ್ಯಕ್ರಮಕ್ಕೆ ತಮ್ಮೆಲ್ಲರಿಗೂ ಪ್ರೀತಿಯ ಸ್ವಾಗತ.

• ಕಗ್ಗೆರೆ ಪ್ರಕಾಶನದ ಹೆಮ್ಮೆಯ ಕೊಡುಗೆ

• ನಾಲ್ಕು ವರ್ಷದ ಸೃಜನಿ ಕಲಾಕೃತಿಗಳ ಪ್ರದರ್ಶನ

• ಸೈನಿಕನ ಹೆಂಡತಿ ಎಸ್. ಭಾಗ್ಯಅವರ ಅನುಭವ ಕಥನ ಅನಾವರಣ

• ಕಗ್ಗೆರೆ ಪ್ರಕಾಶ್ ಅವರ ಕಾವ್ಯಕೃತಿ ‘ಭೂರಮೆವಿಲಾಸ’ ಬಿಡುಗಡೆ

• ಇದೇ ಏಪ್ರಿಲ್ 25ಕ್ಕೆಬೆಂಗಳೂರಿನ ಕೆಜಿಎಲ್ಡಿ ಆರ್ಟ್ಗ್ಯಾಲರಿಯಲ್ಲಿ.

ಕಗ್ಗೆರೆ ಪ್ರಕಾಶನ ಪ್ರಕಟಿಸಿರುವ ‘ಭೂರಮೆ ವಿಲಾಸ’ಕಾವ್ಯ ಕೃತಿಗೆ ಮೂರು ವರ್ಷದ ಬಾಲಕಲಾವಿದೆ ಎಸ್.ವಿ. ಸೃಜನಿ ಕಲಾಕೃತಿಗಳನ್ನು ಬರೆಯುವ ಮೂಲಕ ದಾಖಲೆ ನಿರ್ಮಿಸುವಲ್ಲಿ ಮುಂದಾಗಿದ್ದಾಳೆ. ಮುಖಪುಟ ಸೇರಿದಂತೆ ಇಡೀ ಪುಸ್ತಕದ ಎಲ್ಲ ಪದ್ಯಗಳಿಗೆ ರೇಖಾಚಿತ್ರಗಳನ್ನು ರಚಿಸಿರುವುದು ಅಚ್ಚರಿ ಉಂಟು ಮಾಡಿದೆ. ಅಷ್ಟೇ ಅಲ್ಲ; ಈ ರೀತಿಯ ಪ್ರಯತ್ನ ಪ್ರಯೋಗ ಇಡೀ ಜಗತ್ತಿನಲ್ಲೇ ಮೊದಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

‘ಭೂರಮೆ ವಿಲಾಸ’

‘ಪ್ರತಿಯೊಂದು ಮಗುವಿನಲ್ಲೂ ಒಬ್ಬ ಕಲಾವಿದನಿರುತ್ತಾನೆ’ ಎಂದು ಜಗತ್ಪ್ರಸಿದ್ಧ ಕಲಾವಿದ ಪಿಕಾಸೋ ಹೇಳುತ್ತಾನೆ. ಆದರೆ ಪುಸ್ತಕ ಪ್ರಪಂಚ ಈ ಮಾತನ್ನು ಗಂಭೀರವಾಗಿ ಪರಿಗಣಿಸಿಲ್ಲ. ಮುಖಪುಟ ಮತ್ತು ಸಾಂದರ್ಭಿಕ ಚಿತ್ರಗಳನ್ನು ದೊಡ್ಡವರಿಂದಲೇ ಬರೆಸಬೇಕೆಂಬ ಪರಿಪಾಠ ಈಗಲೂ ಇದೆ. ಮಕ್ಕಳ ಚಿತ್ರಗಳಿಗೂ ಹೆಚ್ಚಿನ ಮಹತ್ವ ಕೊಡುವ ನಿಟ್ಟಿನಲ್ಲಿ  ‘ಭೂರಮೆ ವಿಲಾಸ’ ಕಾವ್ಯಕೃತಿಗೆ ಮೂರು ವರ್ಷದ ಮಗು ಸೃಜನಿಯ ಚಿತ್ರಗಳನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಂಡು ಸೂಕ್ಷ್ಮಸಂಭಾವನೆ ಕೊಟ್ಟಿರುವುದು ಕನ್ನಡ ಪುಸ್ತಕ-ಚಿತ್ರ-ಪ್ರಕಾಶನ ಪರಂಪರೆ ಇತಿಹಾಸದಲ್ಲೇ ಇದೇಪ್ರಥಮ.

ಮಂಡ್ಯದ ಸೃಜನಿ ಚಿತ್ರಕಲಾವಿದ ಎಂ.ಎಲ್.ಸೋಮವರದ ಹಾಗೂ ವಿಶಾಲಾಕ್ಷಿ ದಂಪತಿ ಮಗಳು.ಈ ಎಲ್ಲ ಚಿತ್ರಗಳನ್ನು ಸೃಜನಿ ಇಷ್ಟಪಟ್ಟು ಸಹಜವಾಗಿ ಬರೆದಿದ್ದಾಳೆ. ಇವು ದೃಶ್ಯಭಾಷೆಯ ಮುಗ್ಧಚಿತ್ರಗಳು.‘ಬೆಳೆವಸಿರಿ ಮೊಳಕೆಯಲ್ಲೇ ಕಾಣು ಎಂಬಂತೆ ಇವಳು ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾಳೆ. ಫೇಸ್ಬುಕ್ನಲ್ಲಿ ಇವಳ ಕಲಾಕೃತಿಗಳನ್ನು ವೀಕ್ಷಿಸಿರುವ ಅಮೆರಿಕ, ಬ್ರೆಜಿಲ್, ಪೋರ್ಚ್ಗಲ್ಚಿತ್ರ ಕಲಾವಿದರು ಮೆಚ್ಚಿದ್ದಾರೆ. ಕರ್ನಾಟಕದ ಹಲವು ಚಿತ್ರಕಲಾವಿದರು ‘ಇವಳ ಚಿತ್ರಗಳಲ್ಲಿ ವರ್ಣಸಂಯೋಜನೆ ಮತ್ತು ಕುಂಚದ ಹೊಡೆತ ಅದ್ಭುತವಾಗಿದೆ’ಎಂದು ಮೆಚ್ಚುಗೆ ವ್ಯಕ್ತಪಡಿಸಿ ‘ಭವಿಷ್ಯದಲ್ಲಿ ಈಕೆ ಒಳ್ಳೆಯ ಕಲಾವಿದೆಯಾಗಲಿ’ ಎಂದು ಶುಭ ಹಾರೈಸಿದ್ದಾರೆ.

ಬಹುಶಃ ಇವಳಿಗೇ ಗೊತ್ತಿಲ್ಲ; ಮೂರು ವರ್ಷಕ್ಕೆ ಇವಳ ನೂರಾರು ಕಲಾಕೃತಿಗಳು ಮಂಡ್ಯದಲ್ಲಿ ಮೊದಲ ಏಕವ್ಯಕ್ತಿಚಿತ್ರಕಲಾ ಪ್ರದರ್ಶನವಾಗಿರುವುದು ಈಗ ನಾಲ್ಕನೇ ವರ್ಷಕ್ಕೆ 2ನೇ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಬೆಂಗಳೂರಿನ ಕೆಜಿಎಲ್ಡಿಆರ್ಟ್ಗ್ಯಾಲರಿಯಲ್ಲಿ ಇದೇತಿಂಗಳ 25ನೇ ತಾರೀಖು ನಡೆಯುತ್ತಿರುವುದು.

ಚಿತ್ರಕಲಾ ಜಗತ್ತಿನ ದಿಗ್ಗಜರಾದ ಚಂದ್ರನಾಥಆಚಾರ್ಯ, ಮನೋಹರ ಆಚಾರ್, ಕೆ.ವಿ.ಸುಬ್ರಹ್ಮಣಂ, ಕೆ.ಜಿ.ಲಿಂಗದೇವರು, ಬಿ.ಡಿ.ಜಗದೀಶ್, ಎಲ್.ಶಿವಲಿಂಗಯ್ಯ, ಬಿ.ಸಿ.ದೇವರಾಜ್, ಬಾಬುರಾವ್ನಡೋಣಿ ಅಂತಹವರ ಗಮನವನ್ನು ಇವಳ ಕಲಾಕೃತಿಗಳು ಸೆಳೆದಿವೆ.

ಕನ್ನಡದ ಹೆಣ್ಣು ಮಗಳ ಕಥನವೈಫ್ಆಫ್ಸೋಲ್ಜರ್

ಸಾಮಾನ್ಯ ವೀಕ್ಷಕರಾಗಿ ಯುದ್ಧದ ದೃಶ್ಯಗಳನ್ನು ಟೀವಿಗಳಲ್ಲಿ ನೋಡುತ್ತಿದ್ದರೆ ಎದೆಯಲ್ಲಿ ನಡುಕ ಹುಟ್ಟುತ್ತದೆ.ಇನ್ನು ಆ ಪ್ರಾಂತ್ಯದಲ್ಲಿ ಹೋರಾಡುತ್ತಿರುವ ಸೈನಿಕ ನಮ್ಮ ನಮ್ಮ ಮನೆಯವನೇ ಎಂದುಕೊಂಡು ಬಿಟ್ಟರಂತೂ ಆಗುವ ಆಘಾತ ಅಪರಿಮಿತ. ಹೀಗಿರಬೇಕಾದರೆ ಆ ಸೈನಿಕ ನನ್ನ ಗಂಡನೇ ಅಂತ ಗುರುತಿಸಿಕೊಂಡು ಬೆಂಗಳೂರಲ್ಲಿ ಟಿ.ವಿ. ನೋಡುತ್ತಿರುವ ಒಂದು ಹೆಣ್ಣಿನ ಮನಸ್ಥಿತಿ ಹೇಗಿರಬೇಡ? ಆಕೆಯ ತಲ್ಲಣಗಳು ಎಂಥವು? ಇದೋ ಇದು ಅಂತಹ ಕನ್ನಡ ಹೆಣ್ಣು ಮಗಳು ಎಸ್.ಭಾಗ್ಯ ಅವರ ತಾಜಾ, ನೈಜ ಸ್ಟೋರಿಯ ಅನುಭವಕಥನವೇ ‘ವೈಫ್ಆಫ್ಸೋಲ್ಜರ್.

`ದೇಶ ಸೇವೆ ಈಶ ಸೇವೆ’ ಎಂಬ ಮಾತನ್ನು ಇವತ್ತಿಗೂ ಪ್ರಚಲಿತವಾಗಿಸುತ್ತಿರುವ ಹೆಗ್ಗಳಿಕೆ ನಮ್ಮ ರಾಷ್ಟ್ರದ ಸೈನಿಕನಿಗೆ ಸಲ್ಲುತ್ತದೆ. ಸೈನಿಕ ದೇಶ ಸೇವೆಗೆ ತನ್ನನ್ನು ಸದಾ ಅರ್ಪಿಸಿಕೊಂಡಿರುತ್ತಾನೆ. ಅದು ಅವನ ದೇಶಪ್ರೇಮದ ಪ್ರತೀಕ. ಆದರೆ ಗಡಿಯೊಳಗೆ ಬೆಚ್ಚಗಿರುವ ನಾವು ಆತನ ಮತ್ತು ಆತನ ಹೆಂಡತಿಯ ಮಾನಸಿಕ ತುಮುಲಗಳು, ಕಷ್ಟಕಾರ್ಪಣ್ಯಗಳು ಹೇಗಿರುತ್ತವೆ ಎಂಬುದನ್ನು ಎಂದಾದರೂ ಒಂದು ಕ್ಷಣ ಯೋಚಿಸಿದ್ದೇವೆಯೇ? ಇತ್ತ ಮಕ್ಕಳ ಲಾಲನೆ-ಪಾಲನೆ ಪೋಷಣೆ, ಅತ್ತೆ ಮಾವಂದಿರ ನಿರ್ವಹಣೆ, ಒಂದು ಕಚೇರಿಯಲ್ಲಿ ದುಡಿಮೆ… ಅತ್ತ ದೂರದ ಗಡಿಪ್ರದೇಶದಲ್ಲಿ ದೇಶ ಕಾಯುವ ಗಂಡನ ಕನಸು-ಕಾತರ, ಸದಾ ಭಯದ ಗುಂಗು, ಆದರೆ, ಇವೆಲ್ಲಕ್ಕೂ ಭಿನ್ನವಾಗಿ ಯೋಚಿಸುವ ಈ ಕನ್ನಡದ ಹೆಣ್ಣು ಮಗಳು ಎಸ್. ಭಾಗ್ಯ ಅಪರೂಪ, ಮಾದರಿಯಾಗಿ ನಿಲ್ಲುತ್ತಾರೆ. ಒಬ್ಬ ಸೈನಿಕನ ಹೆಂಡತಿಯಾಗಿ ಆತನ ದೇಶಸೇವೆಗೆ ಇಂಬು ಕೊಟ್ಟು ದೇಶಾಭಿಮಾನ ಮೆರೆಯುತ್ತಾರೆ. ಹಾಗೆಯೇ ತಮ್ಮ ನೈಜಸ್ಟೋರಿಯಿಂದ ನಮ್ಮ ಮನ ಕಲಕಿಬಿಡುತ್ತಾರೆ.

-ಕಗ್ಗೆರೆ ಪ್ರಕಾಶ್

Related post