‘ಭೂರಮೆ ವಿಲಾಸ’ ಹಾಗೂ ‘ವೈಫ್ ಆಫ್ ಸೋಲ್ಜರ್’ – ಪುಸ್ತಕಗಳ ಬಿಡುಗಡೆ

ಕಗ್ಗೆರೆ ಪ್ರಕಾಶ್ ರವರ ಕಾವ್ಯ ಕೃತಿ “ಭೂರಮೆವಿಲಾಸ” ಹಾಗು ಎಸ್ ಭಾಗ್ಯ ರವರ ಅನುಭವ ಕಥನ ‘ವೈಫ್ ಆಫ್ ಸೋಲ್ಜರ್’ ಪುಸ್ತಕಗಳ ಬಿಡುಗಡೆ ಆಗಸ್ಟ್ 1 ರ ಭಾನುವಾರ ಬೆಂಗಳೂರಿನ “ಕೆ ಜಿ ಎಲ್ ಡಿ ಆರ್ಟ್ ಗ್ಯಾಲರಿ” ಯಲ್ಲಿ ಮಧ್ಯಾಹ್ನ 3 ರ ವೇಳೆಗೆ ಆಯೋಜಿಸಲ್ಪಟ್ಟಿದೆ. ಸಂಪೂರ್ಣ ವಿಳಾಸ ಕೆಳಗೆ ಲಭ್ಯವಿದೇ. ಇಂಥ ಅಪರೂಪದ ಕಾರ್ಯಕ್ರಮಕ್ಕೆ ತಮ್ಮೆಲ್ಲರಿಗೂ ಪ್ರೀತಿಯ ಸ್ವಾಗತ. ಸಾಹಿತ್ಯಾಸ್ಕತರು ಭೇಟಿ ನೀಡಿ ಕಾರ್ಯಕ್ರಮವನ್ನು ಪ್ರೋತ್ಸಾಯಿಸಬೇಕೆಂದು ಸಾಹಿತ್ಯಮೈತ್ರಿ ವತಿಯಿಂದ ವಿನಂತಿ.

ವಿಶೇಷವೆಂದರೆ ಮೂರು ವರ್ಷದ ಬಾಲಕಲಾವಿದೆ ಎಸ್.ವಿ. ಸೃಜನಿ ಕಾವ್ಯ ಕೃತಿ “ಭೂರಮೆವಿಲಾಸ” ಕ್ಕೆ ಕಲಾಕೃತಿಗಳನ್ನು ಬರೆಯುವ ಮೂಲಕ ದಾಖಲೆ ನಿರ್ಮಿಸುವಲ್ಲಿ ಮುಂದಾಗಿದ್ದಾಳೆ. ಮುಖಪುಟ ಸೇರಿದಂತೆ ಇಡೀ ಪುಸ್ತಕದ ಎಲ್ಲ ಪದ್ಯಗಳಿಗೆ ರೇಖಾಚಿತ್ರಗಳನ್ನು ರಚಿಸಿರುವುದು ಅಚ್ಚರಿ ಉಂಟು ಮಾಡಿದೆ. ಅಷ್ಟೇ ಅಲ್ಲ; ಈ ರೀತಿಯ ಪ್ರಯತ್ನ ಪ್ರಯೋಗ ಇಡೀ ಜಗತ್ತಿನಲ್ಲೇ ಮೊದಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪುಸ್ತಕಗಳಿಗಾಗಿ ಕಗ್ಗೆರೆ ಪ್ರಕಾಶ್ ರವರನ್ನು 9663412986 ಮೊಬೈಲ್ ಸಂಖ್ಯೆಗೆ ಕರೆ ಮಾಡಿ. ಇದು ಕಗ್ಗೆರೆ ಪ್ರಕಾಶನದ ಹೆಮ್ಮೆಯ ಕೊಡುಗೆ.

ಪುಸ್ತಕ ಬಿಡುಗಡೆ ವಿಳಾಸ:

ಕೆ ಜಿ ಎಲ್ ಡಿ ಆರ್ಟ್ ಗ್ಯಾಲರಿ
#3 ಮೊದಲನೇ ಮಹಡಿ,
ವಿನೋದಪ್ಪ ಬೇಕರಿ ರಸ್ತೆ ಪೋಸ್ಟ್ ಆಫೀಸ್ ಹತ್ತಿರ,
ಸುಂಕದಕಟ್ಟೆ,
ಬೆಂಗಳೂರು – 560091

Related post

1 Comment

  • ಆಹ್ವಾನ ಪತ್ರಿಕೆ ತುಂಬಾ ಚೆನ್ನಾಗಿದೆ ಸರ್. ಧನ್ಯವಾದಗಳು.

Leave a Reply

Your email address will not be published. Required fields are marked *