ಭೇಟಿ
ಹೊಂಗನಸ ಹಾದಿಯಲಿ
ಹಾದು ಹೋಗುವ ತವಕ,
ತಡೆಯಾಗದಿರಿಯೆನಗೆ
ಮನದ ಭಾವಗಳೆ;
ಆಗು-ಹೋಗುಗಳೆಡೆಗೆ
ಗಮನವೆನಗಿಂದಿಲ್ಲ,
ಗುರಿಯೊಂದೇ ನನ್ನ
ಕಣ್ಮುಂದೆಯಿಹುದು ;
ದೂರ ದೂರದಲಿರುವ
ಬೆಳಕಿನೋಕುಳಿಯೀಗ,
ಮಾತಿರದೆ ಮೌನದಲೇ,
ನನ್ನ ಸೆಳೆಯುತಿದೆ;
ಅಡೆತಡೆಗಳಾವುದೂ
ನನಗೆ ತಡೆಯಾಗದು,
ಧ್ಯಾನಸ್ಥ ಮನಕಾವ
ಮಸುಕು ಮುಸುಕದು!
ಹೋಗಿ ಸೇರುವೆನಲ್ಲಿ
ನೆಲಮುಗಿಲಿನಂಚಿನಲಿ,
ಸಾಗರನು ಆಗಸವ
ಸಂಧಿಸುವ ಸಮಯದಿ!
ಶ್ರೀವಲ್ಲಿ ಮಂಜುನಾಥ
ಬೆಂಗಳೂರು