ಭ್ರಮೆ
ಜಗವಿದು ಸುತ್ತುತಿಹುದು ತನ್ನ ಪರಿಧಿಯಲ್ಲಿ
ಜನರೆಲ್ಲ ಸುತ್ತುತಿಹರು ತಮ್ಮ ಲೋಕದಲ್ಲಿ
ನನ್ನ ಸುತ್ತ ಜನರು ಸುತ್ತುತಿಹರು ಎಂಬ ಭಾವದಲ್ಲಿ
ನಾನೇ ಸರ್ವಸ್ವ ಎಂಬ ಭ್ರಮೆ ಉಳಿದಿಹುದು ನನ್ನಲ್ಲಿ
ಯಾರಿಗೆ ಯಾರೂ ಆಗುವುದಿಲ್ಲ
ಜಗದ ಪಥ ಎಂದೂ ನಿಲುವುದಿಲ್ಲ
ವಿಶ್ವದ ಓಟಕೆ ಜತೆಯಾದರೆ ನಾವು
ನಮ್ಮೊಂದಿಗೆ ಜಗವು ಸುತ್ತುವುದು
ಪರಿಭ್ರಮಿಸುವ ಈ ಪ್ರಪಂಚದ ಜನರಲ್ಲಿ
ಎಲ್ಲರೊಳಗೊಂದಾಗುತಾ ನಡೆಯಲು
ಜನರು ನನ್ನ ಸುತ್ತಲೇ ಸುತ್ತುತಿರುವ
ಭ್ರಮೆಯ ಮೂಟೆಯೊಡೆವುದು

ಸಿ. ಎನ್. ಮಹೇಶ್