ಭ್ರಷ್ಟರ ಸಂತೆ
ನಮ್ದೆ ದುಡ್ಡು,ನಮ್ದೆ ಕಾಸು ತೆರಿಗೆಯ ಹಣ
ಚುನಾವಣೆ ಬಂದ್ರೆ ಸಾಕು ಜಣ್ ಜಣಾ ಜಣ!! ಪಲ್ಲವಿ!!
ಮನೆತನಕ ಬರುತಾರೆ ಹುಡುಕೊಂಡು,,
ಅದು ಮಾಡ್ತಿನಿ, ಇದು ಮಾಡ್ತಿನಿ ಎನುಕೊಂಡು,,
ಗೆದ್ಮೆಲೆ ಮಾಡೋದು ಪುಟ್ಗೊಸಿ,,,,
ಗೆಲ್ಲೋದು ಜನಗಳನು ಯಾಮಾರ್ಸಿ!!೧!!
ಇವರಿಂದ ಹುಟ್ಟಿದ್ದೆ ಈ ಸುಳ್ಳು,,
ಕೊಡುವಂತ ಭರವಸೆಯು ಬರಿ ಪೊಳ್ಳು
ಅಧಿಕಾರದ ಆಸೆಗೆ ಬರುತಾರೆ,,,
ಆ ಪಕ್ಷ, ಈ ಪಕ್ಷ ಎನುತಾರೆ.!!೨!!
ಆ ಯೋಜನೆ, ಈ ಯೋಜನೆ ತರುತಾರೆ,,
ನಾ ಕೊಟ್ಟೆ,ನಾ ಕೊಟ್ಟೆ ಎನುತಾರೆ
ಅದರಲ್ಲು ಕೊಳ್ಳೇನ ಹೊಡಿತಾರೆ
ಪ್ರಜೆಗಳಿಗೆ ಟೋಪಿನ ಇಡುತಾರೆ.!!೩!!
ಜಾತಿಯ ಹೆಸರಲ್ಲಿ ಇವರಾಟ
ಧರ್ಮಕ್ಕು ಕೊಡುತಾರೊ ಬಲುಕಾಟ
ಯುವಜನರ ಬದುಕಲ್ಲಿ ಹುಡುಗಾಟ
ಬಡಜನರ ಬದುಕಂತು ಪರದಾಟ !!೪!!
ಗೆದ್ದವರ ಬದುಕೆಲ್ಲ ಬರಿ ಸ್ವರ್ಗವು
ಕೈಯಿಟ್ಟ ಕಡೆಯಲ್ಲ ಕರಿ ರೊಕ್ಕವು
ಗೆಲ್ಲಿಸಿದ ಜನರೆಲ್ಲ ಬದಲಾದರೆ.?
ದೇಶವನು ನೆಡೆಸುವನು ಆ ದೇವರೆ.!!೫!!
ಹೇಗೆ ಪ್ರಸಾದ್
ಕುದೂರು ಲಕ್ಕೇನಹಳ್ಳಿ