ಮಣಿಕರ್ಣಿಕಾ

ಮಣಿಕರ್ಣಿಕಾ

ಎಲ್ಲರ ಮೆಚ್ಚಿನ ಕೂಸಾಗಿ ಜನಿಸಿದಳು
ಕಾಶೀ ಪಟ್ಟಣದ ಮುದ್ದಿನ ಕುಡಿಯಿವಳು
ಮುದ್ದಿಗೆ ಮನುವೆಂಬ ಹೆಸರ ಹೊಂದಿದವಳು

ಬಾಲ್ಯದಲಿ ಪೌರ್ಣಿಮೆಯ ಚಂದಿರನಂತೆ
ಕಲೆಯಲ್ಲಿ ವಿದ್ಯೆಯಲ್ಲಿ ಸರಸ್ವತಿಯಂತೆ
ಕಂಗೊಳಿಸುತ್ತಲಿ ಹೊಳೆವ ಮುತ್ತಾದಳು

ಅಪರೂಪದ ಚೆಲುವೆಯಿವಳು ಮುದ್ದು ಮಗಳು
ಕತ್ತಿವರಸೆ ಅಶ್ವಸವಾರಿಯ ಜಯಿಸಿದವಳು
ವಿಪ್ರ ಸಮುದಾಯವನ್ನು ಬೆರಗಾಗಿಸಿದವಳು

ರಾಜನ ಮನಗೆದ್ದು ಮಹಾರಾಣಿಯಾದಳು
ಪುತ್ರ ಮತ್ತು ಪತಿಯ ಅಗಲಿಕೆಗೆ ಶೋಕಿಸಿದಳು
ದತ್ತು ಪುತ್ರನ ಪಡೆದು ರಾಜ್ಯಭಾರವ ನಡೆಸಿದಳು

ಆಂಗ್ಲರ ಕುಟಿಲೋಪಾಯಕ್ಕೆ ನಲುಗಿದವದಳು
ವಿಶ್ವಕ್ಕೇ ಮೊದಲ ಮಹಿಳಾ ಸೇನೆ ಕೊಟ್ಟವಳು
ಹಲ್ಲಿನಲಿ ಲಗಾಮು, ಎರಡೂ ಕರಗಳಲಿ ಖಡ್ಗಗಳು

ಬೆನ್ನಿನ ಚೀಲದಲಿ ಹಸುಕಂದ ದಾಮೋದರ
ಆಂಗ್ಲರ ವಿರುದ್ಧ ನಡೆಸಿದಳು ಹುನ್ನಾರ
ಮೊಳಗಿಸಿದಳು ಸ್ವಾಂತ್ರತ್ರ್ಯದ ಝೇಂಕಾರ

ನಮ್ಮ ದೇಶಕ್ಕೆ ಸ್ವಾತಂತ್ರ್ಯದ ಕಿಚ್ಚುಹಚ್ಚಿದವಳು
ವೀರಾವೇಶದಿ ಹೋರಾಡಿ ಅಮರಳಾದಳು
ಝಾನ್ಸಿರಾಣಿ ಲಕ್ಷ್ಮೀಬಾಯಿ ಈ ದೇಶದ ಹೆಮ್ಮೆಯ ಮಗಳು……

ಸಿ.ಎನ್. ಮಹೇಶ್

Related post