ಮತ್ತೆ ಬಂತು ಸಂಕ್ರಾಂತಿ..
ಮತ್ತೆ ಬಂದಿದೆ ನೋಡು ಮಕರ ಸಂಕ್ರಾಂತಿ
ಎಳ್ಳು ಬೆಲ್ಲದ ಸವಿಯ ಜೊತೆಯಲಿ ತಂದು
ಎಲ್ಲರ ಮೊಗದಲ್ಲಿ ಮೂಡಿಸಿದೆ ಕಾಂತಿ
ಹೊಲಗದ್ದೆಯಲಿ ತುಂಬಿದೆ ಕಾಳು
ರೈತನ ಜೀವಕೆ ತಂದಿದೆ ಹೊಸಬಾಳು
ಕಬ್ಬಿನ ಜಲ್ಲೆಯು ನಿಂತಿದೆ ಹೊಲದಲಿ
ಬೆಲ್ಲದ ಸವಿಯನು ನೀಡಲು ಬಂದಿದೆ
ಭತ್ತದ ಪೈರು ನೀಡಿದೆ ಧಾನ್ಯ
ಬೆಳೆದ ರೈತನಿಗೆ ಅದುವೆ ಭಾಗ್ಯ
ಎತ್ತುಗಳ ಸಿಂಗರಿಸಿ ಬೀಗಿಹ ರೈತ
ದೇಶದ ಬದುಕಿನ ಭಾಗ್ಯದಾತ
ಲೋಕದಾ ಕಾರಿರುಳ ಕಳೆಯುವನೀತ
ಸುಗ್ಗಿಯ ಸಡಗರವ ಎಲ್ಲೆಡೆ ಬೀರುತ್ತ
ಬಂದಿದೆ ನೋಡಿರಿ ಈ ಸಂಕ್ರಾತಿ
ಎಲ್ಲರ ಮನದಲಿ ತುಂಬಿದೆ ಶಾಂತಿ….
ಸುನೀಲ್ ಹಳೆಯೂರು