ಮನದ ಭಾವಲಹರಿ…
ನನ್ನೊಳಗಿನ ಭಾವಗಳ ಸಂತೆಯಲಿ
ನಿನ್ನೊಲವನು ಜಂಗುಳಿಯಲಿ
ಹುಡುಕಲಾಗದಂತೆ ಕಳೆದು ಹೋಗಿದ್ದೇನೆ!!
ಎಲ್ಲರ ತಿರಸ್ಕಾರದ ಜಾತ್ರೆಯಲ್ಲಿ….
ತಪ್ಪಿಸಿ ಕೊಂಡ ಮಗು
ನನ್ನ ಮನಸು!!!
ನೀ ಚಾಚಿದ ಕೈಗಳ
ಭದ್ರವಾಗಿ ಹಿಡಿದು….
ಹೆಣೆಯುತಿರುವೆ ನಾನು
ನೂರಾರು ಕನಸು!!
ನೂರಾರು ಕನಸ
ಕಂಡ ಕಂಗಳಿಗೆ
ಹೂಮುತ್ತನು ನೀಡುವ
ಮನಸು!!
ನಿನ್ನ ಜೊತೆಗೆ
ಹೆಜ್ಜೆ ಹಾಕುವುದರಲಿ
ಇರುವುದು ಬಾಳಿನ ಸೊಗಸು!!
ಚಿಂತನೆಗಿಳಿವುದು ಮನ
ಕಂಡ ಕನಸುಗಳು ಎಂದಾದರೂ
ಆಗುವುದೇ ನನಸು!
ಉಂಡ ನೋವಿಗೆ
ಕಂಡ ತಿರಸ್ಕಾರಕೆ
ನಿನ್ನ ಒಲುಮೆ ಹರಿಸು!
ಸುಮನಾ ರಮಾನಂದ