ಮನಸಿನ ಭಾವಚಿತ್ತ
ಮನಸಿನ ಲಹರಿಗೆ ತಾನೆಂದೂ
ಸಿಗದೆನ್ನುವ ಭಾವ ಹೃದಯಕೆ!
ಸಿಕ್ಕರೂ ತನಗೇನೂ ನಷ್ಟವಿರದೆನ್ನುವ..
ನಿರಾಳತೆಯ ಭಾವ ಅಂತರಾಳಕೆ!!
ಮನಸಲಿ ನಡೆವ ತುಮುಲಗಳ
ಬೇರ್ಪಡಿಸುವ ಭಾವ ಚಿಂತನೆಗೆ!
ಆ ಚಿಂತನೆಯಲೇ ಸಂತಸವನು..
ಅರಸುವ ಭಾವ ನಿತ್ಯವೂ ಚಿತ್ತಕೆ!!
ಮನದ ಸಾಗರದಿ ಏಳುವ
ಚಿಂತೆಯಲೆಗಳ ಉಬ್ಬರ ಮುಗಿಲೆತ್ತರಕೆ!
ದೇವರ ಲೀಲೆಯ ನಿತ್ಯ ಪ್ರಶ್ನಿಸುವವ..
ಕಾಯಬಾರದೇ ಅವನ ಉತ್ತರಕೆ!!
ಮನಸೆಂಬ ಬನದಲಿ ಸ್ನೇಹದಂಕುರ
ಚಿಗುರಲು ಬದುಕಲಿ ಸಡಗರ!
ಅದು ಕೊಡುವ ದಿವ್ಯ ಪ್ರತಿಫಲದ..
ಸಿಹಿಯ ಸವಿಯಲು ಬಾಳು ಮಧುರ!!
ಸುಮನಾ ರಮಾನಂದ