ಮನೆದೇವತೆ
ಶರಣಾದೆ ನಿನ್ನಲ್ಲಿ ಓ ಮುದ್ದು ಮಡದಿ
ಇರಬೇಕು ನೀನೆಂದು ಈ ನನ್ನ ಮನದಿ!! ಪಲ್ಲವಿ!!
ನನಗಾಗಿ ನೀನು ತವರನ್ನು ಮರೆತೆ
ನೀನಾದೆ ನನ್ನ ಮನೆಯಲ್ಲಿ ಹಣತೆ
ನಿನಗಾಗಿ ನಾನೀಗ ಕವಿಯಾದೆನು
ಏಳೇಳು ಜನುಮಕ್ಕು ಜೊತೆಬರುವೆನು.!!೧!!
ಹಗಲಿರುಳು ಆಯಾಸ ನಿನಗಾಗದೆ
ನಿನ ಪ್ರೀತಿ ವಾತ್ಸಲ್ಯ ನಮಗೆಯಿದೆ
ನೀ ತಾನೆ ನನ್ನ ಮನೆದೇವತೆ,,
ನಿನಗಾಗಿ ಬರೆದೆ ಈ ನನ್ನ ಕವಿತೆ !!೨!!
ತಾಯಂತೆ ನನ್ನನ್ನು ಹಾರೈಸುವೆ
ಮಗುವಂತೆ ನೀ ನನ್ನ ಮುದ್ದಾಡುವೆ
ನಾ ಎಡವಿ ಬಿದ್ದಾಗ ಕೈಹಿಡಿಯುವೆ
ಎನಾದರೂನು ಜೊತೆ ನೆಡೆಯುವೆ.!!೩!!
ನನ ಮುದ್ದು ಮಗುವಿಗೆ ತಾಯಾಗುತ
ಮರುಜನ್ಮದ ನೋವು ನೀ ಸಹಿಸುತ
ನೋವೆಲ್ಲ ಮರೆತು ನೀ ನಗುತಲಿದ್ದೆ
ಕಂದನಿಗೆ ಹಾಲನ್ನು ನೀ ಉಣಿಸುತಿದ್ದೆ.!!೪!!
ಓ ಮುದ್ದು ಮಡದಿ, ನನ ಮಾತು ಕೇಳು
ಮುಂದಾದರೂನು ಸುಖವಾಗಿ ಬಾಳು
ನಾ ಮಾಡುವೆ ಎಲ್ಲ ಮನೆಗೆಲಸವ
ಮಾಡಿದರೆ ತಪ್ಪೇನು ಹೇಳು ಶಿವ.!!೫!!
ಹೇಗೆ ಪ್ರಸಾದ್
ಕುದೂರು ಲಕ್ಕೇನಹಳ್ಳಿ