ಮಾತೆ ರಮಾಬಾಯಿಗೆ
ನಿಮ್ಮ ನೆನೆಯದೆ ಹೋದರೆ ಎದೆ ಕಲ್ಲಾದೀತು.
ಬಾಬಾಸಾಹೇಬರ ಜೊತೆಗೂಡಿ ನಮ್ಮ ಉದ್ದಾರದ ಹಾದಿ ಬೆಳೆದೀತು.
ನಿಮ್ಮ ತಾಳ್ಮೆಯೊಂದು ಕ್ರಾಂತಿ
ಅದರಿಂದಲೇ ಬೆಳಗಿತು ಅಂದು ಜ್ಞಾನ ಜ್ಯೋತಿ
ನಿಮ್ಮ ಸಹನೆಗೆ ನಮನ
ನಿಮ್ಮ ತಾಳ್ಮೆಗೆ ನಮನ
ನಿಮ್ಮ ಆದರ್ಶ ಬಾಳ್ವೆಗೆ ನಮನ.
ನಿಮ್ಮಂಥ ಧೈರ್ಯವಂತೆ ನಾ ಕಂಡಿಲ್ಲ ತಾಯಿ
ನೀವೇ ನಮ್ಮ ಮಾತೃ ಸ್ವರೂಪಿ ಮಾತೆ ರಮಾಬಾಯಿ
ಹೆತ್ತಿದ್ದೂ ಮಗುವೊ ಸಾವೊ ಗೊತ್ತಾಗದ ನೋವು
ಎದೆಗುಂದದೆ ಕೈಯಲ್ಲಿದ್ದ ಛಲ ಸಾಧನೆಯ ಕಾವು
ನುಡಿದೆ ನೀನು ಹೋದವರ ನೆನೆದೇನು ಪ್ರಯೋಜನ?
ಉಳಿದು ಅತ್ತವರೆ ನಮ್ಮ ಕಣ್ಣ ಮುಂದಿನ ಮಕ್ಕಳು!
ಅವರಿಗಾದರೂ ಬೇಡವೆ ನಿಮ್ಮ ವಿದ್ಯೆ.
ಹುಂ ಓದಿ ನಾನಿರುವೆ ನಿಮ್ಮ ಜೊತೆಯಲ್ಲಿ ಎಂದೆ.
ಓದಿಸಿ ನೀವೇ ಬೆರಗಾಗಿ ಹೋದೆ.
ಪ್ರತಿ ಬೆಳಗಿನಲಿ ನಿಮ್ಮ ನೆನೆದು ನಿಮ್ಮನೇ ಬೇಡುವೆ ನಿಮ್ಮಂಥೆ ಸಹನೆ, ತಾಳ್ಮೆ, ಕಾಯಕನಿಷ್ಠೆ ಮೊದಲಾದ ಅಂಶಗಳ ಅನುಭೂತಿ ಕರುಣಿಸಿ ನೀಡು ನನಗೆ
ನಾ ಅರ್ಪಿಸುವೆ ಮಲ್ಲಿಗೆ ಕನಕಾಂಬರ ನಿನ್ನ ಪಾದಗಳಿಗೆ
ಪರಶುರಾಮ್. ಎ