‘ಮಾಯೆ’ ಕೃತಿ ಲೋಕಾರ್ಪಣೆ

‘ಮಾಯೆ’ ಶ್ರೀಮತಿ ಆಶಾ ರಘು ರವರ ಹೊಸ ಕಾದಂಬರಿಯು ಇಂದು ‘ಗಾಂಧಿ ಸಾಹಿತ್ಯ ಸಂಘ’ (ಮಲ್ಲೇಶ್ವರಂ) ಸಬಾಂಗಣದಲ್ಲಿ ಲೋಕಾರ್ಪಣೆಯಾಯಿತು. ಸಾಹಿತ್ಯಲೋಕ ಪಬ್ಲಿಕೇಷನ್ಸ್ ಹಾಗು ಬುಕ್ ಬ್ರಹ್ಮ ಸಹಯೋಗದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಖ್ಯಾತ ಕಾದಂಬರಿಕಾರರಾದ ‘ಕೆ ಎನ್ ಗಣೇಶಯ್ಯ, ಲೇಖಕಿಯರ ಸಂಘದ ಅಧ್ಯಕ್ಷರಾದ ವನಮಾಲಾ ಸಂಪನ್ನಕುಮಾರ್, ಲೇಖಕರಾದ ಗಿರಿಜಾ ರೈಕ್ವ, ಕೃತಿಯ ಲೇಖಕರಾದ ಆಶಾ ರಘು ಹಾಗು ಪುಸ್ತಕ ಪ್ರಕಟಣೆ ಮಾಡಿದ ರಘುವೀರ್ ಸಮರ್ಥ್ ರವರು ಉಪಸ್ಥಿತರಿದ್ದರು.


‘ಮಾಯೆ’ ಕೃತಿಯನ್ನು ಬಿಡುಗಡೆ ಮಾಡಿದ “ಕೆ ಎನ್ ಗಣೇಶಯ್ಯ” ನವರು
” ಇತ್ತೀಚಿಗೆ ನಮ್ಮ ಭಾರತದಲ್ಲಿ ಸಾಹಿತ್ಯದ ಮೂಲಕ ಚರಿತ್ರೆಯನ್ನು ಹುಡುಕುವ ಪ್ರಯತ್ನ ಸತತವಾಗಿ ನೆಡೆಯುತ್ತಿದೆ, ಹೆಣ್ಣು ಹೊನ್ನು ಮಣ್ಣು ಇವುಗಳ ಹಿಂದೆ ಬಿದ್ದ ಯಾವುದೇ ವ್ಯಕ್ತಿಯು ಈವರೆಗೂ ಸುಖದಾಯಕ ಬದುಕು ಕಂಡಿಲ್ಲ, ಇದನ್ನು ನಿರೂಪಿಸಲು ಆಶಾ ರಘು ರವರು ಎರಡು ವಿರುದ್ಧ ಪಾತ್ರಗಳನ್ನು ಕೃತಿಯಲ್ಲಿ ಸೊಗಸಾಗಿ ಸೃಷ್ಟಿಸಿ ಹೇಳಿಕೊಂಡು ಹೋಗಿದ್ದಾರೆ, ಹಾಗು ಇತ್ತೀಚಿನ ಪೀಳಿಗೆಯ ಜನಸಾಮಾನ್ಯರ ಅರಿವಿನಲ್ಲಿ ಬಹುತೇಕ ಮರೆತುಹೋಗಿರುವ ಜಾನಪದ ಲೋಕವನ್ನು ಈ ಕೃತಿಯ ಮೂಲಕ ಮರುಪರಿಚಯಿಸುವಲ್ಲಿ ಆಶಾ ರಘು ರವರು ಯಶಸ್ವಿಯಾಗಿದ್ದಾರೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬ ಓದುಗನು ‘ಮಾಯೆ ಕೃತಿಯನ್ನು ಓದಬೇಕಾದದ್ದೇ” ಎಂದು ತಮ್ಮ ಭಾಷಣದಲ್ಲಿ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ವನಮಾಲಾ ಸಂಪನ್ನಕುಮಾರ್ ರವರು ” ಹಿಂದೆ ಇದ್ದ ಸಹಗಮನ ಪದ್ಧತಿ, ಹೆಣ್ಣಿಗೆ ಹಾಗುತಿದ್ದ ದೌರ್ಜನ್ಯ, ಹಾಗು ಅವಳ ಮನಸ್ಥಿತಿಗಳನ್ನು ಮನದಲ್ಲಿಟ್ಟುಕೊಂಡು ಲೇಖಕಿ ಆಶಾ ರಘು ರವರು ‘ಮಾಯೆ’ ಕೃತಿಯನ್ನು ಸೊಗಸಾಗಿ ಮೂಡಿಸಿದ್ದಾರೆ” ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

ಕೃತಿಯ ಪರಿಚಯದ ಹೊಣೆ ಹೊತ್ತಿದ್ದ ಲೇಖಕಿ ಗಿರಿಜಾ ರೈಕ್ವ ರವರು ” ಮಾಯೆ ಎಂಬುದು ತುಂಬಾ ಕ್ಲಿಷ್ಟಕರವಾದ ವಿಷಯ ಅದು ಆದಿಗುರು ಶಂಕರಾಚಾರ್ಯರಿಂದ ಅಲ್ಲಮಪ್ರಭು ಗಳಿಂದ ಇವತ್ತಿನವರೆಗೂ ಚರ್ಚೆಯಾಗುತ್ತಿರುವ ವಿಷಯ, ಬದುಕು ಮಾಯೆ, ನೆನ್ನೆ ಇದ್ದವರು ಇವತ್ತಿಲ್ಲದಿರುವುದು ಎಲ್ಲರು ಅರಗಿಸಿಕೊಳ್ಳಬೇಕಾದ ಸತ್ಯವೇ ನಾವೆಲ್ಲರೂ ಬದುಕುತ್ತಿರುವುದು ಮಾಯೆಯ ಲೋಕದಲ್ಲಿಯೇ, ಈ ಸತ್ಯವನ್ನು ಆಶಾ ರಘು ರವರು ‘ಮಾಯೆ’ ಕೃತಿಯಲ್ಲಿ ಸೊಗಸಾಗಿ ಪಾತ್ರಗಳ ಮೂಲಕ ಹೇಳಿಸಿದ್ದಾರೆ” ಎಂದು ತಮ್ಮ ಅನಿಸಿಕೆಯನ್ನು ಸುಧೀರ್ಘವಾಗಿ ವಿವರಿಸಿದರು.

ಕೃತಿಯ ಲೋಕಾರ್ಪಣೆಗೆ ಪ್ರೋತ್ಸಾಹಿಸಿ ಸಹಕರಿಸಿದ ಎಲ್ಲ ಮಾಧ್ಯಮಗಳಿಗೂ ಹಾಗು ಕಾರ್ಯಕ್ರಮಕ್ಕೆ ಬಂದಂತಹ ಜನರಿಗೂ ಲೇಖಕಿ ಆಶಾ ರಘು ರವರು ತಮ್ಮ ಮನದಾಳದ ಅಭಿನಂದನೆಗಳನ್ನು ಸಲ್ಲಿಸಿದರು.

ಅಪರೂಪದ ವಿಷಯವುಳ್ಳ ಆಶಾ ರಘು ರವರ “ಮಾಯೆ” ಕಾದಂಬರಿಯು ಹೆಚ್ಚೆಚ್ಚು ಕನ್ನಡ ಓದುಗರನ್ನು ಸೆಳೆಯಲಿ ಎಂದು ಸಾಹಿತ್ಯ ಮೈತ್ರಿ ತಂಡ ಅಭಿನಂದಿಸುತ್ತದೆ.

‘ಮಾಯೆ’ ಕೃತಿಯು ಇಂದಿನಿಂದ ಎಲ್ಲ ಪುಸ್ತಕ ಮಳಿಗೆಗಳಲ್ಲೂ ಲಭ್ಯವಿರುತ್ತದೆ ಓದುಗರು ರಘುವೀರ್ ರವರನ್ನು 9945939436 ಮೊಬೈಲ್ ಸಂಖ್ಯೆಗೆ ಕರೆ ಮಾಡಿ ತಮ್ಮ ಮನೆಗೆ ತರಿಸಿಕೊಂಡು ಓದಬಹುದು.

ಕು ಶಿ ಚಂದ್ರಶೇಖರ್

ಸಾಹಿತ್ಯಮೈತ್ರಿ ತಂಡ

Related post

Leave a Reply

Your email address will not be published. Required fields are marked *