ಮಿಲ್ಖಾಸಿಂಗ್

ಲೇಖಕರು: ಆರ್ ಬಿ ಗುರು ಬಸವರಾಜ
ಮುದ್ರಣ: ಸಾಹಿತ್ಯಲೋಕ ಪಬ್ಲಿಕೇಷನ್
ಬೆಲೆ : 150 /-

ಓಡು ಮಿಲ್ಖಾ ಓಡು

1947 ರ ದೇಶ ವಿಭಜನೆ ಸಮಯದಲ್ಲಿ ಎಷ್ಟೋ ಮಕ್ಕಳು ತಂದೆ ತಾಯಿಯರನ್ನು ಕಳೆದುಕೊಂಡು ಅನಾಥರಾದರು. ಅವರುಗಳಲ್ಲಿ ಮಿಲ್ಕಾ ಸಿಂಗ್ ಒಬ್ಬರು. ಇದು ಕೇವಲ ಮಿಲ್ಖಾಸಿಂಗ್ ಒಬ್ಬರ ಜೀವನ ಕಥೆಯಲ್ಲ. ಇದರಲ್ಲಿ ದೇಶ ವಿಭಜನೆಯ ನೋವಿದೆ, ಮಿಲ್ಖಾಸಿಂಗ್‌ನ ಸಾಧನೆಗಳ ಸೌಖ್ಯವಿದೆ ಮತ್ತು ನಮ್ಮೆಲ್ಲರ ಭವಿಷ್ಯದ ಮಾರ್ಗವಿದೆ.
• ಸತತ ಮೂರು ವರ್ಷ ಬರಿಗಾಲಿನಲ್ಲಿ ಓಡಿ ಚಿನ್ನದ ಪದಕ ಗಳಿಸಿದ ಭಾರತದ ಏಕೈಕ ಓಟಗಾರನ ರೋಚಕ ಜೀವನ ಕಥನ.
• ದೇಶ ವಿಭಜನೆಯ ವೇಳೆ ತನ್ನ ಕಣ್ಣ ಮುಂದೆ ತಂದೆ ಮತ್ತು ಕುಟುಂಬದವರನ್ನು ಕಳೆದುಕೊಂಡ ಆ ಘಟನೆ ಓದತೊಡಗಿದರೆ ಕಠಿಣ ಮನಸ್ಸಿನವರೂ ಕಣ್ಣೀರು ಸುರಿಸುತ್ತಾರೆ.

Photo credit: TV9 Kannada


• ಸೈನ್ಯಕ್ಕೆ ಸೇರಿದ ಯುವಕ ಅಂತರರಾಷ್ಟ್ರೀಯ ಮಟ್ಟದ ಓಟಗಾರನಾಗುವ ಪರಿಶ್ರಮ ಎಲ್ಲರಿಗೂ ಮಾದರಿಯಾಗುತ್ತದೆ.
• ಓಲಂಪಿಕ್ಸ್ ನಲ್ಲಿ ಭಾರತ ಚಿನ್ನದ ಪದಕ ಗಳಿಸುವುದನ್ನು ನೋಡಲು ಹಾತೊರೆದು ಮರೆಯಾದ ಅಪ್ರತಿಮ ಸಾಧಕನ ಜೀವನದ ಮೈಲುಗಲ್ಲುಗಳ ಪಯಣ ಇಲ್ಲಿದೆ.
• ಏಷ್ಯನ್ ಕ್ರೀಡಾಕೂಟದ 400 ಮೀ. ಓಟದಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಓಟಗಾರನ ಕೌಶಲ್ಯದ ಹಿಂದಿನ ತಂತ್ರಗಾರಿಕೆ ತಿಳಿಯಲು ಈ ಕೃತಿ ಸಹಾಯಕ
45.6 ಸೆಕೆಂಡುಗಳಲ್ಲಿ 400 ಮೀಟರ್ ಓಡಿ ವಿಶ್ವದಾಖಲೆ ಮಾಡಿದ ಮಾಂತ್ರಿಕ ಶಕ್ತಿಯ ಹಿಂದಿನ ಗುಟ್ಟು ತಿಳಿಯಲು ಓದಲೇಬೇಕಾದ ಪುಸ್ತಕ.

ಆರ್ ಬಿ ಗುರು ಬಸವರಾಜ

ಪುಸ್ತಕ ಕೊಳ್ಳಲು ಸಂಪರ್ಕಿಸಿ ರಘುವೀರ್, ಸಾಹಿತ್ಯಲೋಕ ಪ್ರಕಾಶನ, ಮೊಬೈಲ್ – 9945939436 ಅಂಚೆ ವೆಚ್ಚ ಉಚಿತ

Related post

Leave a Reply

Your email address will not be published. Required fields are marked *