ಮುತ್ತಿನ ಕಥೆ ….

ಮುತ್ತಿನ ಕಥೆ ….

ಸಿಂಪಿ (Oysters) ಗಳನ್ನೂ “ದ್ವಿಕವಾಟ ಮೃದ್ವಂಗಿಗಳು” ಎಂದು ಕರೆಯಬಹುದು. ಇವು ಪ್ರಪಂಚದ ಅನೇಕ ಸಾಗರಗಳಲ್ಲಿ ಕಂಡುಬರುವುದು. ಆಭರಣಗಳಿಗೆ ಸುಂದರವಾದ ಜೊಡಿಸ್ಪಡುವ ಮುತ್ತುಗಳು ಇಂತಹ ಸಿಂಪಿಗಳಿಂದ ಹೊರತೆಗೆಯಲಾಗಿರುತ್ತೆ .


ಆದರೇ ಇದರ ಹಿಂದೆ ಒಂದು ನೋವಿನ ಕಥೆ ಇದೆ.

ಸಮುದ್ರದ ಮರಳು ಸಿಂಪಿನ ಕವಚವನ್ನ ಕೊರೆದು ಸೇರಿದಾಗ ಸಿಂಪು ಗಾಯಗೊಳ್ಳುತ್ತದೆ. ಆಗ ಪ್ಯಾರಾಸೈಟಗಳು, ಉಪದ್ರವಿ ಬ್ಯಾಕ್ಟೀರಿಯಾಗಳು ಸಿಂಪಿನ ಕವಚಗಳಲ್ಲಾದ ಸೀಳಿನ ಮುಖಾಂತರ ಅವುಗಳ ದೇಹ ಸೇರುತ್ತವೆ. ಪ್ಯಾರಾಸೈಟಗಳನ್ನ ಪ್ರತಿರೋಧಿಸುವುದಕ್ಕಾಗಿ ಸಿಂಪಿನ ಚಿಪ್ಪುಗಳ ಒಳಗೆ “ಆಗೊನೈಟ್” (agonite ,a carbonate mineral) ಮತ್ತು
“ಕಾಂಕಿಯೋಲಿನ್” (conchiolin a protein) ಎನ್ನುವ ಪ್ರೋಟೀನ್ ದ್ರವಗಳನ್ನ ಬಿಡುಗಡೆ ಮಾಡುತ್ತೆ.

ಈ ಆಗೊನೈಟ್ ಮತ್ತು ಕಾಂಕಿಯೋಲಿನ್ ದ್ರವ ಪಧಾರ್ಥಗಳು ಪ್ಯಾರಾಸೈಟ್ ಮತ್ತು ಬ್ಯಾಕ್ಟೀರಿಯಾಗಳೊಂದಿಗೆ ಘರ್ಷಿಸಿ
ಸಮ್ಮಿಶ್ರಣವಾದಾಗ ಅದು nacre ಎನ್ನುವ ಗಟ್ಟಿಯಾಗಿ ಗುಂಡಾಕಾರದ ಪಧಾರ್ಥವಾಗಿ ಪರಿವರ್ತನೆಯಾಗುತ್ತೆ.
ಈ ನ್ಯಾಕ್ರ್ (nacre) ಪಧಾರ್ಥವೇ “ಮುತ್ತು”.

ಸಮುದ್ರದ ಮರಳು ಪ್ಯಾರಾಸೈಟ್ ಮತ್ತು ಉಪದ್ರವಿ ಬ್ಯಾಕ್ಟಿರಿಯಾಗಳಿಂದ ಘಾಸಿಗೊಳ್ಳದ ಸಿಂಪು ಮುತ್ತು ಉತ್ಪಾದಿಸಲು ಸಾಧ್ಯವಿಲ್ಲ. ಪ್ರತಿ ಮುತ್ತು ಸಿಂಪಿಗಳ ಗಾಯದ ಸಂಕೇತವಾಗಿದ್ದು ಸಿಂಪಿಗಳ ಗಾಯವಿಲ್ಲದೆ ಮುತ್ತು ಹೊರಬರಲು ಸಾಧ್ಯವಿಲ್ಲ.

ಮೃತ್ಯುಂಜಯ ನ ರಾ

Related post

Leave a Reply

Your email address will not be published. Required fields are marked *