ಮುದ್ದು ಮಗಳೇ – ತಾಯಿಯೊಬ್ಬಳ ಆತ್ಮಕಥೆ
ಲೇಖಕಿ: ಲತಾ ಶ್ರೀನಿವಾಸ್
ಪ್ರಕಾಶನ: ಕಾಜಾಣ
ಬೆಲೆ: 200/-
ಲೇಖಕಿ ಶ್ರೀಮತಿ ಲತಾ ಶ್ರೀನಿವಾಸ್ ತುಮುಕೂರಿನವರು, ಕನ್ನಡ ಸ್ನಾತಕೋತ್ತರ ಪದವೀಧರೆ, ನಿವೃತ್ತ ಐ ಎ ಸ್ ಅಧಿಕಾರಿ ಶ್ರೀ ಕೆ. ಆರ್. ಶ್ರೀನಿವಾಸ್ ರವರ ಧರ್ಮಪತ್ನಿ. ಇವರು ಬರೆದ ಕೆಲವು ಸಣ್ಣ ಕಥೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಲೇಖಿಕಾ ಸಾಹಿತ್ಯ ವೇದಿಕೆ ನಡೆಸಿದ ಕಥಾ ಸ್ಪರ್ಧೆಯಲ್ಲಿ ಇವರಿಗೆ ಬಹುಮಾನ ದೊರೆತಿದೆ.

ಮುದ್ದಿನ ಮಗಳ ಅಕಾಲ ಮರಣದಿಂದ ತತ್ತರಿಸಿದ ಮಹಾತಾಯಿ ಶ್ರೀಮತಿ ಲತಾ ಶ್ರೀನಿವಾಸ್. ತಮ್ಮ ಮಗಳ ಅಗಲುವಿಕೆಯ ತಡೆಯಲಾರದ ನೋವಿನೊಟ್ಟಿಗೆ ಮುದ್ದು ಮಗಳೇ ಆತ್ಮಕಥೆಯನ್ನು ಹೊರತಂದಿದ್ದಾರೆ. ಈ ಕೃತಿಯಲ್ಲಿ ತಮ್ಮ ಮಗಳ ಜನನದ ಸವಿನೆನಪಿನಿಂದ ಮರಣದ ನೋವಿನವರೆಗೂ ಬರಹ ರೂಪದಲ್ಲಿ ಹಂಚಿಕೊಂಡಿದ್ದಾರೆ.
ಈ ಕೃತಿಗೆ ಖ್ಯಾತ ಕಥೆಗಾರ್ತಿ ಯವರ ಬೆನ್ನುಡಿ ಹಾಗು ಬೇಲೂರು ರಘುನಂದನ್ ಮತ್ತು ಎಚ್. ಎಸ್. ಶಿವಪ್ರಕಾಶ್ ರವರ ಮುನ್ನುಡಿ ಇದೆ. ಕಾಜಾಣ ಪ್ರಕಾಶನ ಈ ಪುಸ್ತಕವನ್ನು ಹೊರತಂದಿದ್ದಾರೆ. ಪ್ರತಿಯೊಬ್ಬ ಪೋಷಕರು ಓದಲೇಬೇಕಾದ ಕೃತಿ. ಈ ಪುಸ್ತಕವನ್ನು ಹೊಂದುವ ಆಸಕ್ತಿಯಿರುವವರು ಸತೀಶ್ ರವರನ್ನು 91 – 7411170180 ನಂಬರಿಗೆ ಕರೆ ಮಾಡಿದರೆ ನಿಮ್ಮ ಮನೆಬಾಗಿಲಿಗೆ ತಲುಪಿಸುತ್ತಾರೆ.
ಸಾಹಿತ್ಯಮೈತ್ರಿ ತಂಡ