ಮೃದಂಗ

ಈ ಭೂಮಿ ಒಂದು ಸುಂದರ ಕಳಸದಂತೆ..ಹೊತ್ತವರ ತಲೆಮೇಲು ಇರುತ್ತೆ. ನೆಡೆದವರ ಕಾಲ ಕೆಳಗೂ ಇರುತ್ತೆ.
ಈ ಭೂಮಿ ಯಾರಿಗಾಗಿ ಹುಟ್ಟಿದೆ ಎಂದು ಗೊತ್ತಿಲ್ಲ?
ಮನುಷ್ಯ ಮಾತ್ರ ನನಗಾಗಿಯೇ ಭೂಮಿ ಸೃಷ್ಟಿಯಾಗಿದೆ ಅನ್ನೊ ಭ್ರಮೆಯಲ್ಲಿ ಅಹಂಕಾರದಲ್ಲಿ ಬದುಕ್ತಾ ಇದ್ದಾನೆ…

ಈ ಭೂಮಿಗೆ ಅದರದ್ದೆ ಆದ ನಿಯಮಗಳು, ಚಾಲನೆಗಳು, ಕರ್ತವ್ಯಗಳು ಇರುತ್ತವೆ. ಅದು ಅದರ ಕೆಲಸದ ಮಧ್ಯೆ ಮಾನವ ಕುಲದ ದರ್ಪ ದೌರ್ಜನ್ಯಗಳಿಗೆ ಒತ್ತು ಕೊಟ್ಟಂತೆ ಕಾಣುವುದಿಲ್ಲ.. ಹೀಗೇಕೋ ಸಣ್ಣದಾಗಿ ಗಮನಿಸಿದಂತಿದೆ.
ಫಲಾನು ಫಲದ ಜೋತೆ ಕರ್ಮದ ಬೂದಿಯನ್ನ ನೀಡಿದಂತಿದೆ ಮಾನವನಿಗೆ..ನೀವು ಸಹ ನೋಡಿದ್ದಿರಿ

ಅರಳೊ ಹೂವಿಗೆ ಜಂಜವಿಲ್ಲ..ಚುಚ್ಚೊ ಮುಳ್ಳಿಗೆ ನೋವಿಲ್ಲ ಅನ್ನೊ ಹಾಗೆ.. ಪ್ರಕೃತಿ ಎಲ್ಲವನ್ನೂ ಉಚಿತವಾಗಿ ನೀಡುವಾಗ .ಮಾನವ ಮಾತ್ರ ಎಲ್ಲ ನನ್ನಿಂದ ಎಂದು ತಲೆಕೆಟ್ಟ ಯಬಡನಂತೆ ಎದ್ದಾಡುವನು.. ಇರುವುದೆಲ್ಲ ಬಿಟ್ಟು ಭೂಮಿ ಒಮ್ಮೆ ನಡುಗಿದರೆ..ಮಾನವನು ಮತ್ತೆ ಮಂಗನೂ ಸಹ ಆಗಲಾರ.

    "ಅರಿತು ನೆಡೆದರೆ ಉಳಿಯುವುದು ಭವಿಷ್ಯತ್ಕಾಲ
    ಒಡೆದು ನೆಡೆದರೆ ಮುಗಿಯುವುದು ಆಯುಷ್ಕಾಲ"

ಆನಂದ ನಾಯಕ

ಸಂತೇಕೊಪ್ಪಲು – ಹಾಸನ ತಾಲ್ಲೂಕು

Related post

Leave a Reply

Your email address will not be published. Required fields are marked *