ಮೇಘದೂತ
ಇಳೆಗೆ ಬಿದ್ದ ಮೊದಲ ಹನಿ ಮಳೆ
ಮುತ್ತಿನ ರೂಪದಾ ಸ್ವಾತಿಮಳೆ
ರೇವತಿ ಭರಣಿ ಪುಷ್ಯದಾ ಮಳೆ
ಮಳೆಯಾದರೆ ತಂಪಾಗುವುದು ಭೂಮಿಯೊಡಲು
ಘನೀಭೂತವಾಗಲು ಜಲರಾಶಿಯ ಕಡಲು
ಮನುಷ್ಯನ ಮೊಗದಲಿ ಸಂತಸದಾ ಹೊನಲು
ಚಿತ್ತೆ ಮಖೆಯರ ಆರ್ಭಟವ ತಂದವರಾರು
ಜಲರಾಶಿಯ ಹಿಡಿದಿಟ್ಟು ಕೊಂಡವರಾರು
ಸಮಚಿತ್ತದಲಿ ಮಳೆಯ ಸುರಿಸಿದವರಾರು
ಉಪ್ಪು ನೀರನುಂಡು ಬಂದವ ನೀನು
ನಮಗೆಲ್ಲ ಸಿಹಿನೀರ ಕೊಟ್ಟವ ನೀನು
ನಿಗಿನಿಗಿ ಸೂರ್ಯನ ತಾಪ ತಣಿಸಿದವ ನೀನು
ಒಮ್ಮೆ ಶಿವನಂತೆ ಕಾಣಿತ್ತೀಯಂತೆ
ಮತ್ತೊಮ್ಮೆ ದೇಶದ ಭೂಪಟದಂತೆ
ನಿನ್ನಾಗಮನವೇ ಎಲ್ಲರಿಗೂ ಹರುಷವಂತೆ
ಓ ಮೇಘರಾಯ ಹೇಗೆ ಸಲ್ಲಿಸಲಿ ವಂದನೆ
ನೀನೇ ನಮ್ಮ ಪಾಲಿನ ದೇವದೂತನು
ಸಿ.ಎನ್. ಮಹೇಶ್