ಮೈಕ್ರೋ ಗ್ರೀನ್ಸ್
ನಮ್ಮೆಲರಿಗೂ ಶಾಲೆಯ ನೆನಪುಗಳು ಮನದಂಗಳದಲ್ಲಿ ಬೇರೂರಿ ಆಗಾಗ ಅದನ್ನು ನೆನೆದು ಖುಷಿ ಪಡುವುದುಂಟು. ಇಂತಹ ಶಾಲಾ ಬಾಲ್ಯವನ್ನು ನೆನೆಯುತಿದ್ದಾಗ ನೆನಪಾದ ಒಂದು ಸನ್ನಿವೇಶ ಎಂದರೆ, ಸಸ್ಯಗಳ ಬಗ್ಗೆ ಕಲಿಯುವಾಗ ಶಿಕ್ಷಕರು ಕೊಟ್ಟ ಒಂದು ನಿಯೋಜನೆ. ಪುಟ್ಟ ಸಸ್ಯಗಳನ್ನು ಐಸ್ ಕ್ರೀಮ್ ಕಪ್ ಗಳಲ್ಲಿ ಬೆಳೆಸಿ ತೆಗೆದುಕೊಂಡು ಹೋಗಬೇಕಾದದ್ದು. ಗೋದಿ, ರಾಗಿ, ಮೆಂತ್ಯೆ, ಸಾಸಿವೆಯ ಎಳೆ ಸಸ್ಯಗಳನ್ನು ಜೋಪಾನವಾಗಿ ಬೆಳೆಸಿ ಅದನ್ನು ಶಿಕ್ಷಕರಿಗೆ ತೋರಿಸಲು ಹೋಗುತಿದ್ದೆವು. ನೀವೂ ಮಾಡಿರಬಹುದು ಅಲ್ಲವೇ.
ಅಂದು ನಾವು ನಿಯೋಜನೆಗೆಂದು ಬೆಳೆದ ಸಸ್ಯಗಳನ್ನು ಇತ್ತೀಚಿನ ಆಧುನಿಕ ಜಗತ್ತಿನಲ್ಲಿ ಒಂದು ಉದ್ಯೋಗವನ್ನಾಗಿ ಅಳವಡಿಸಿಕೊಂಡಿದ್ದಾರೆ ಎಂದರೆ ಆಶ್ಚರ್ಯಕರ. ಹೌದು ಈ ಎಳೆಯ ಸಸ್ಯಗಳನ್ನು ಮೈಕ್ರೋ ಗ್ರೀನ್ಸ್ ಎಂದು ಕರೆಯುತ್ತಾರೆ. ಮೈಕ್ರೋ ಗ್ರೀನ್ಸ್ ಎಂದರೆ ಪುಟ್ಟದಾದ ಸಸ್ಯಗಳು ಎಂದು. ಮೈಕ್ರೋ ಗ್ರೀನ್ಸ್ ನನ್ನು ಮನೆಗಳಲ್ಲಿ, ಹೋಟೆಲ್ ರೆಸ್ಟೋರೆಂಟ್ ಗಳಲ್ಲಿ ಅಲಂಕಾರಿಕ ಸಸ್ಯಗಳನ್ನಾಗಿ ಬೆಳೆಸುವುದಲ್ಲದೆ ಇದರಿಂದ ಬಹಳಷ್ಟು ಖಾದ್ಯಗಳನ್ನು ಸಹ ತಯಾರಿಸಲಾಗುತ್ತದೆ.
ಮೈಕ್ರೋ ಗ್ರೀನ್ಸ್ ನ ವೈಶಿಷ್ಟತೆ ಏನೆಂದರೆ ಈ ಸಸ್ಯಗಳನ್ನು ನೀರು ಅಥವಾ 1 – 2 ಇಂಚು ಮಣ್ಣಿನಲ್ಲಿ ಅಥವಾ ತೆಂಗಿನ ನಾರಿನ ಪುಡಿಯಲ್ಲಿ (ಕೋಕೋ ಪೀಟ್) ಬೆಳೆಯಲಾಗುತ್ತದೆ. ಬೀಜಗಳನ್ನು ಚೆಲ್ಲಿ ಎಳೆಯ ಬಿಸಿಲಿನಲ್ಲಿ ಕಡಿಮೆ ವೆಚ್ಚದಲ್ಲಿ ಬೆಳೆಯಬಹುದಲ್ಲದೆ ಕೇವಲ 7 ರಿಂದ 10 ದಿನಗಳ ಒಳಗೆ ಕುಯ್ಲು ಮಾಡಿ ಕೇವಲ 2 ರಿಂದ 3 ಇಂಚು ಬೆಳೆಸಲಾಗುವುದು.
ಮೈಕ್ರೋ ಗ್ರೀನ್ಸ್ ನ ಮತ್ತೊಂದು ವಿಶೇಷತೆ ಏನೆಂದರೆ ಈ ಪುಟ್ಟ ಸಸ್ಯಗಳಲ್ಲಿ ನಾಲ್ಕು ಪಟ್ಟು ಹೆಚ್ಚು ಪೌಷ್ಟಿಕಾಂಶಕಗಳು ತುಂಬಿರುತ್ತವೆ. ಮೈಕ್ರೋ ಗ್ರೀನ್ಸ್ ಗಳಲ್ಲಿ ಹೇರಳವಾಗಿ ಆಂಟಿ-ಆಕ್ಸಿಡೆಂಟ್ಸ್, ವಿಟಮಿನ್ – ‘ಸಿ’ ಕಬ್ಬಿಣ, ಪೊಟ್ಯಾಸಿಯಂ, ಜಿಂಕ್, ಮ್ಯಾಗ್ನಿಷಿಯಂ ಹಾಗು ಕಾಪರ್ ನಂತಹ ಪೋಷಕಾಂಶಗಳು ಹೇರಳವಾಗಿರುತ್ತದೆ.
ಮೈಕ್ರೋ ಗ್ರೀನ್ಸ್ ನನ್ನ ಬೇಯಿಸದೆ ತಿನ್ನಲು ಮಾತ್ರವೇ ಸೂಕ್ತ. ಸ್ಯಾಂಡ್ವಿಚ್ ಗಳಲ್ಲಿ ಚಪಾತಿ, ದೋಸೆಯಲ್ಲಿ ಅಥವಾ ಕೋಸಂಬರಿಯಾಗಿಯೂ ಸಹ ಸೇವಿಸಬಹುದಾಗಿದೆ. ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆ ಕಂಡುಬಂದಲ್ಲಿ ಅವರಿಗೆ ಕಲಿಸಿ ಬೆಳೆಸಿ ತಿನ್ನಿಸಿದರೆ ಅವರಿಗೂ ಶ್ಲಾಘನೀಯ ಎನಿಸುತ್ತದೆ.
ಮೈಕ್ರೋ ಗ್ರೀನ್ಸ್ ನನ್ನು ನಮ್ಮ ಕೈತೋಟದಲ್ಲಿ ಬೆಳೆದು, ನಮ್ಮ ಆಹಾರ ಪದ್ದತಿಯಲ್ಲಿ ಸೇರಿಸುವುದರಿಂದ ದೇಹದಲ್ಲಿನ ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ. ಕ್ಯಾನ್ಸರ್ ನಂತಹ ರೋಗಗಳಿಂದ ನಮ್ಮನು ದೂರ ಉಳಿಸುತ್ತದೆ. ರುಚಿಕರವಾದ ಮೈಕ್ರೋ ಗ್ರೀನ್ಸ್ ಸೇವಿಸಲು ಸಹ ಬಹಳ ರುಚಿಕರವಾಗಿಯೂ ಇರುತ್ತದೆ.
ಇಂತಹ ಮೈಕ್ರೋ ಗ್ರೀನ್ಸ್ ಗಳನ್ನು ನಾವೇ ಬೆಳೆದು ಸೇವಿಸುವುದರಿಂದ ನಮಗೆ ಲಾಭ ಹೆಚ್ಚು. ಅತಿ ಹೆಚ್ಚಾಗಿ ಸುಲಭವಾಗಿ ಬೆಳೆಯಬಹುದಾದ ಮೈಕ್ರೋ ಗ್ರೀನ್ಸ್ ಎಂದರೆ ಸಾಸಿವೆ, ದಂಟು, ಮೆಂತ್ಯೆ, ಎಳ್ಳು, ಚಿಯಾ ಆಳವಿ. ಇವುಗಳು ಕೇವಲ 7 ದಿನಗಳಲ್ಲಿ ಕೂಯ್ದು ಸೇವಿಸಬಹುದು. ಗೋದಿಯ ಹುಲ್ಲಿನ ರಸವಂತು ಎಲ್ಲರಿಗು ಚಿರಪರಿಚಿತ. ಕಾಳುಗಳಾದ ಶೇಂಗಾ, ಹೆಸರುಕಾಳು, ಹುರಳಿ ಕಾಳುಗಳನ್ನು ಸಹ 8-10 ದಿನದಲ್ಲಿ ಬೆಳೆದು ಸೇವಿಸಬಹುದು. ತರಕಾರಿಗಳಾದ ಮೂಲಂಗಿ, ಎಲೆ ಕೋಸು ಗಳನ್ನು ಮೈಕ್ರೋ ಗ್ರೀನ್ಸ್ ಗಳಾಗಿ ಸೇವಿಸಬಹುದು.
ಮೈಕ್ರೋ ಗ್ರೀನ್ಸ್ ನ ಎಳೆಯ ಎಲೆ ಹಾಗು ಕಾಂಡಗಳು ಸೇವಿಸಲು ಅರ್ಹ ಹೊರತು ಬೇರುಗಳಲ್ಲ. ಮೈಕ್ರೋ ಗ್ರೀನ್ಸ್ ಗಳ ಬಗೆಗಿನ ನಿಮ್ಮ ಪ್ರಶ್ನೆಗಳು ಹಾಗು ಅನಿಸಿಕೆಗಳನ್ನು ಕಾಮೆಂಟ್ ರೂಪದಲ್ಲಿ ಹಂಚಿಕೊಳ್ಳಿ ಹಾಗು ಅದರ ಉಪಯೋಗಗಳನ್ನು ಪಡೆದುಕೊಳ್ಳಿ.
ಶಿಲ್ಪ