ಅಮ್ಮ ಅಮ್ಮ ಕೇಳಮ್ಮ
ಕುಂಟಾಬಿಲ್ಲೆ ಬೋರಮ್ಮ
ಕಣ್ಣಾ ಮುಚ್ಚಾಲೆ ಬೋರಮ್ಮ
ಮೊಬೈಲ್ ಗೇಮ ಬೇಕಮ್ಮ!
ನನಗೂ ಮೊಬೈಲ್ ಕೊಡಿಸಮ್ಮ
ಸ್ಮಾರ್ಟ್ ಫೋನೇ ಕೊಡಿಸಮ್ಮ
ಅಪ್ಪಗೆ ನೀನೇ ಹೇಳಮ್ಮ
ದೊಡ್ಡ ಸೈಜೇ ಕೊಡಿಸಮ್ಮ!
ಆನ್ ಲೈನ್ ತರಗತಿ ಸೇರುವೆನು
ದಿನವೂ ಪಾಠವ ಕೇಳುವೆನು
ಹೋಮ್ ವರ್ಕ್ ಕೂಡ ಮಾಡುವೆನು
ಗುರುಗಳ ಮೆಚ್ಚುಗೆ ಪಡೆಯುವೆನು!
ಗೂಗಲ್ ನಿಂದ ಕಲಿಯುವೆನು
ತಿಳಿಯದ ಮಾಹಿತಿ ತಿಳಿಯುವೆನು
ಜೂಮ್ ಮೀಟಲಿ ಸೇರುವೆನು
ವಿಚಾರ ವಿನಿಮಯ ಮಾಡುವೆನು
ಯು ಟ್ಯೂಬನು ನಾನು ಬಳಸುವೆನು
ವಿಡಿಯೋ ಕೂಡ ಮಾಡುವೆನು
ನನ್ನದೇ ಚಾನಲ್ ಮಾಡುವೆನು
ನನ್ನಯ ವಿಚಾರ ಹಂಚುವೆನು!
ವಾಟ್ಸಪ್ ಗ್ರೂಪನು ಮಾಡುವೆನು
ಗೆಳೆಯರ ನಾನು ಪಡೆಯುವೆನು
ಗೇಮನು ನಾನು ಆಡುವೆನು
ಗೆಲ್ಲುತ ಗೆಲ್ಲುತ ಬೀಗುವೆನು!
ಪರಮೇಶ್ವರಪ್ಪ ಕುದರಿ
ಚಿತ್ರದುರ್ಗ