ಮೋಹ

ಈ ನನ್ನ ಹೃದಯದಲ್ಲಿ ನಿನ್ನ

ನೆನಪಿನ ಪ್ರತಿಬಿಂಬಗಳು

ಹಾದು ಹೋಗುವಾಗ ನನ್ನ

ಹೃದಯದ ಬಡಿತದ ಪ್ರತಿ ಮಿಡಿತವು

ನಿನ್ನೆಸರ ಜಪಿಸುತಿದೆ

ನಾನು ಒಂಟಿಯಾದರು ಒಂಟಿಯಲ್ಲ

ನನ್ನ ಜೊತೆ ಮತ್ತೊಂದು ಆತ್ಮವಿದೆ

ಈ ನನ್ನ ಪ್ರೀತಿ ಪ್ರೀತಿಯಲ್ಲ, ಆದರೂ ಅರ್ಥವಿದೆ,

ಈ ಪ್ರಪಂಚ ಸುಂದರವಿದ್ದರೂ

ಇಲ್ಲಿ ದೋಷವಿದೇ ಆದರೆ ನನಗೆ ಕಾಡುವುದಿಷ್ಟೇ

ಈ ಹೆಣ್ಣು ಎನ್ನುವ ಮನಸ್ಸಿನಲ್ಲಿ ಏನಿದೆ ?

ಈ ನನ್ನ ಪ್ರೀತಿ ಶುದ್ಧವಾಗಿಯೂ ನಿಸ್ವಾರ್ಥದಿಂದಲು

ಕೂಡಿದೆ ಎಂದು ನಾ ಹೇಳಲಾರೆ. ಅದಕ್ಕೆ ನನ್ನ

ಆತ್ಮ ಒಪ್ಪುವುದಿಲ್ಲ!

ನಾನು ನಿನ್ನನ್ನು ಪ್ರೀತಿಸುತ್ತೇನೆಂದು

ಯಾವತ್ತೂ ಹೇಳುವುದಿಲ್ಲ

ಯಾಕೆಂದರೆ ಪ್ರೀತಿಯಲ್ಲಿ ಸತ್ಯತೆ ಇರಬೇಕು

ಪ್ರೀತಿಗೆ ದೃಷ್ಟಿಯು ಇಲ್ಲ ಆಕಾರವು ಮೊದಲೇ ಇಲ್ಲ

ಆದರೆ ಪ್ರೀತಿ ಮಾತ್ರ ಅತ್ಯಧ್ಬುತ

ಪ್ರೀತಿ ಮತ್ತೆ ಮೋಹ ಇವೆರಡಕ್ಕೂ

ಅಂತರವು ಇದೆ ಸಂಬಂಧವು ಇದೆ.

ಪ್ರೀತಿಸಲಾರದ ನಾನು ನಿನ್ನನ್ನು ಮೋಹಿಸುತ್ತೇನೆ

ಬರಿ ನೋಯಿಸುತ್ತೇನೆ………

ವಿ ಶಿವಪ್ರಕಾಶ್

ಮಂಡ್ಯ – ಕಲ್ಲಹಳ್ಳಿ

Related post