ಮೌನ – ಮಾತು

ಮೌನ – ಮಾತು

ನಿನ್ನ ಮೌನವಿಂದು
ಹೆಬ್ಬಂಡೆಯಂದದಲಿ
ಎನ್ನ ಮನದ ಮೇಲೆ
ತಾ ಕುಳಿತು ನನಗೆ
ಉಸಿರುಗಟ್ಟಿಸುತಿದೆ
ನಿನ್ನ ಮಾತಿನಿಂದದನು
ಅತ್ತ ಸರಿಸಲಾರೆಯಾ ?

ನಿನ್ನ ಸುಡು ಮೌನ
ನನ್ನೊಡಲ ತುಂಬ
ಹರಡುತ್ತ ಉರಿವ,
ಅಗ್ನಿಯಂದದಿ ತಾ
ಧಗಧಗಿಸುತ್ತಲಿದೆ
ನಿನ್ನ ಸವಿಮಾತಿನ
ಮಳೆಯಿಂದಲದನು
ತಣಿಸಲಾರೆಯಾ ?

ನಿನ್ನ ಮೌನವ್ರತವ
ಕಂಡು ಮೂಕವಾಗಿ
ಕೊರಗಿ, ಸೊರಗುತ್ತ
ಮಂಕಾಗಿ ಕುಳಿತ
ನನ್ನ ಸವಿಮನಕೆ ನಿನ್ನ
ಸಿಹಿ ಮಾತಿನ ಅಮೃತ
ಸೇಚನವಿತ್ತು ಮತ್ತೆ
ನೀನದ ನಗಿಸಲಾರೆಯಾ ?

ಶ್ರೀವಲ್ಲಿ ಮಂಜುನಾಥ

Related post

1 Comment

  • 👌

Leave a Reply

Your email address will not be published. Required fields are marked *