ಯುಗದ ಹೊಸ ಹಾದಿ ಯುಗಾದಿ
ಅಂತ್ಯವೇ ಇರದಂತಹ ಏಕೈಕ ಹಾದಿ
ಯುಗದ ಹೊಸ ಹಾದಿ ಯುಗಾದಿ
ಎಲ್ಲವೂ ಹೊಸತು ಎಲ್ಲೆಡೆ ಹಸಿರು
ಎಳೆ ಹಸಿರಿನ ಹೊಸದಾದ ಚಿಗುರು
ವಸಂತ ಮಾಸದ ಹೊಸ ಯುಗದ
ಆದಿಯಲ್ಲಿ ಆಚರಿಸುವ ಯುಗಾದಿ
ಹಬ್ಬದ ದಿನದಂದು ಹೊಚ್ಚ ಹೊಸ ಹಸಿರುಡುಗೆಯ ತೊಟ್ಟು ನಿಂತಿರುವ
ಪ್ರಕೃತಿಮಾತೆಯ ಹುಟ್ಟು ಹಬ್ಬವನ್ನು
ಎಲ್ಲರೂ ಸಂಭ್ರಮದಿ ಆಚರಿಸೋಣ
ಕಟ್ಟುವ ಬಾಗಿಲಿಗೆ ಹಸಿರು ತೋರಣ
ಬೇಯಿಸುವ ಬೇಳೆಯ ಸಿಹಿ ಹೂರಣ
ಮಾಡುವ ಭಗವಂತನ ಪಾರಾಯಣ
ಕಾಣುವುದಾಗ ಹಬ್ಬದ ವಾತಾವರಣ
ಹೊಸ ಜೀವನಕ್ಕೆ ನಾಂದಿ ಹಾಡೋಣ
ಹೊಸತನಕ್ಕೆ ಬುನಾದಿಯ ಹಾಕೋಣ
ಬೇವು-ಬೆಲ್ಲ ಸವಿದು ತಿನ್ನೋಣ
ಕಷ್ಟ-ಸುಖ ಹಂಚಿ ಕೊಳ್ಳೋಣ
ದೇಶದ ಸಮೃದ್ಧಿಗೆ, ನೆಮ್ಮದಿಗೆ
ಎಲ್ರೂ ಒಂದಾಗಿ ಶ್ರಮಿಸೋಣ
ಒಬ್ಬಟ್ಟಲ್ಲಿ ರುಚಿಯಿದೆ ಒಗ್ಗಟ್ಟಲ್ಲಿ
ಬಲವಿದೆಯೆಂದು ತಿಳಿಯೋಣ
ಪ್ರಕೃತಿಮಾತೆಯ ಸಂರಕ್ಷಿಸುತಾ
ಅವಳ ಕೃಪೆಗೆ ಪಾತ್ರರಾಗೋಣ
ಗೀತಾಚಲಂ