ರಸ್ತೆಯ ಹೂ

ಬದುಕು ತುಂಬಾ ದೊಡ್ಡದು
ಶ್ಯಾನೇ ಟಾಪು ಬೇರೆ
ಸೂರಿದೆಯಲ್ಲ ಬದುಕಿಗೆ!
ಅಂತ ಯಾರೋ ಅಂದರೆ
ಬಾ ಗುರು ಸ್ವಲ್ಪ ಇಡಿದುಕೋ
ಈ ನನ್ನ ಏಕಾಂತವನ್ನು
ಅದರೊಳಗಿನ ಕನಸುಗಳನ್ನು…

ಈ ಕನಸುಗಳೋ
ರಸ್ತೆಯಲ್ಲಿ ಬಿದ್ದ ಹೂವಂತೆ
ಮುಡಿಯಬೇಕೋ?
ದೇವರ ಮುಡಿಗೆ ಅರ್ಪಿಸಬೇಕೋ?
ಬೇಡ ಅಂತಾದು ಹೋದರೆ
ತುಳಿದಷ್ಟೇ ಕೆಟ್ಟದ್ದು
ಏನ್ಮಾಡ್ಲಿ…

ಕು ಶಿ ಚಂದ್ರಶೇಖರ್

Related post

Leave a Reply

Your email address will not be published. Required fields are marked *