ರಿಬ್ಬನ್ ಈಲ್ ಮೀನುಗಳು
ಸಾಮಾನ್ಯವಾಗಿ ಈಲ್ ಮೀನು ಮತ್ತು ಸಮುದ್ರದ ಹಾವು ಇವುಗಳನ್ನ ಗುರುತಿಸುವಾಗ ಕೊಂಚ ಗೊಂದಲ ಉಂಟಾಗುವ ಸಾಧ್ಯತೆ ಇದೆ..
ಉದ್ದನೆಯ ತೆಳುವಾದ ರಿಬ್ಬನ್ ನಂತೆ ಬಳಕಾಡುವ ದೇಹ ಹೊಂದಿರುವ ಈ ಈಲ್ ಮೀನುಗಳಿಗೆ ಮುಖ್ಯವಾಗಿ ಹಾವುಗಳಂತೆ ಮೈಮೇಲೆ ಪೊರೆಗಳ ಚಿಪ್ಪುಗಳು ಇರುವುದಿಲ್ಲ( Scales). ಇವುಗಳಿಗೆ ಇತರೇ ಮೀನುಗಳಂತೆಯೇ ಈಜುರೆಕ್ಕೆಗಳು ಇರುತ್ತವೆ. ಸಮುದ್ರದ ಹಾವುಗಳಲ್ಲಿ ಈಜುರೆಕ್ಕೆ ಕಂಡುರುವುದಿಲ್ಲ. ಸಮುದ್ರದಲ್ಲಿ ರಿಬ್ಬನ್ ಈಲ್ ಗಳು ಹೆಚ್ಚಾಗಿ ಕೋರಲ್ ರೀಪ್ (ಸಮುದ್ರದ ಹವಳದ ಬಂಡೆಗಳು) ಹತ್ತಿರ ಕಂಡುಬರುತ್ತವೆ. ಸರಿಸುಮಾರು ಇಪ್ಪತ್ತು ವರ್ಷಗಳ ಕಾಲ ಬದುಕುವ ಈ ರಿಬ್ಬನ್ ಈಲ್ ಗಳು ಕೋರಲ್ ರೀಪ್ ಗಳ ಅಚ್ಚರಿಯ ಜೀವವೈವಿಧ್ಯಗಳು.
ಕೆಲವೊಂದು ಈಲ್ ಮೀನುಗಳು ಸಿಹಿನೀರಿನ ನದಿ ಹಳ್ಳ ಕೊಳ್ಳ ಸರೋವರಗಳಲ್ಲಿಯೂ ಕಂಡುಬರುತ್ತವೆ.
ಇವುಗಳಲ್ಲಿ ಸಾಕಷ್ಟು ಪ್ರಜಾತಿಗಳು ಇವೆ, ಕೆಲವೊಂದು ಮಧ್ಯಮ ಪ್ರಮಾಣದ ವಿಷಕಾರಿ ಈಲ್ ಗಳು ಸಹ ಇವೆ. ರಿಬ್ಬನ್ ಈಲ್ ಗಳ ತಲೆಯ ಮುಂಬಾಗದಿಂದ ಉದ್ದನೆಯ ಮೂಗಿನ ಹೊಳ್ಳೆಗಳು ಹೊರಚಾಚಿರುತ್ತವೆ. ಭೇಟೆ ನೀರಲ್ಲಿ ಸಂಚರಿಸುವಾಗ ಉಂಟಾಗುವ ಸೂಕ್ಷ್ಮ ಕಂಪನಗಳನ್ನ ಈ ಹೊಳ್ಳೆಗಳಿಂದ ಗುರುತಿಸಿ ಭೇಟೆಯಾಡುತ್ತವೆ. ಸಮುದ್ರದ ಇತರೇ ಸಣ್ಣಪುಟ್ಟ ಮೀನುಗಳು ಸೀಗಡಿಗಳು ಇವುಗಳ ಮುಖ್ಯ ಆಹಾರ ..
ಕೆಲವೊಂದು ಈಲ್ ಗಳು 600 ವೋಲ್ಟ್ ವರೆಗೂ ಎಲೆಕ್ಟ್ರಿಕ್ ಕರೆಂಟ್ ಹೊಮ್ಮಿಸಬಲ್ಲವು .ಇವುಗಳನ್ನ ಎಲೆಕ್ಟ್ರಿಕ್ ಈಲ್ ಎಂದೇ ಕರೆಯುತ್ತಾರೆ.
ಬೇಟೆಯಲ್ಲದೆ ತನ್ನ ಮೇಲೆ ದಾಳಿ ಮಾಡುವ ಇತರೆ ಜೀವಿಗಳನ್ನು ಸಹ ಈ ಈಲ್ ಮೀನುಗಳು ತನ್ನಲ್ಲಿನ ವಿದ್ಯುತ್ ಪ್ರವಹಿಸಿಸಿ ತನನ್ನು ತಾನು ಕಾಪಾಡಿಕೊಳ್ಳುತ್ತದೆ. 2021 ರಲ್ಲಿ ಒಂದು ವಿಡಿಯೋ ವೈರಲ್ ಹಾಗಿತ್ತು, ತನ್ನ ಮೇಲೆ ದಾಳಿ ಮಾಡಿದ ಒಂದು ಮೊಸಳೆಯನ್ನು ಈಲ್ ಮೀನೊಂದು ವಿದ್ಯುತ್ ಪ್ರವಹಿಸಿಸಿ ಕೊಂದು ತಾನು ಕೂಡ ಸತ್ತು ಹೋಗಿತ್ತು.
ಈಲ್ ಮೀನುಗಳು ಹುಟ್ಟುವಾಗ ಗಂಡಾಗಿಯೇ ಹುಟ್ಟುತ್ತವೆ. ವಯಸ್ಕವಿದ್ದಾಗ ಸಹಜವಾಗಿ ಗಂಡಿನಂತೆಯೇ ಸಂತಾನೋಬಿವೃದ್ದಿ ನಡೆಸುವ ಈ ಈಲ್ ಗಳು ಮಧ್ಯವಯಸ್ಸು ತಲುಪುತ್ತಿದ್ದಂತೆಯೇ ಗರ್ಭಕೋಶಗಳನ್ನ ಬೆಳೆಸಿಕೊಂಡು ಹೆಣ್ಣಾಗಿ ಪರಿವರ್ತನೆಯಾಗಿ ಮೊಟ್ಟೆ ಇಡಲು ಆರಂಬಿಸುತ್ತವೆ. ಇದು ಪ್ರಕೃತಿಯ ವೈಚಿತ್ರ್ಯವಲ್ಲದೆ ಮತ್ತಿನೇನಲ್ಲ!
ಮೃತ್ಯುಂಜಯ ನ.ರಾ