ರೌದ್ರಾವರಣಂ – ಕಾದಂಬರಿ ಬಿಡುಗಡೆ

ಮೂರು ವರ್ಷಗಳ ಹಿಂದೆ ಪ್ರತಿಲಿಪಿಯಲ್ಲಿ ‘ರೌದ್ರಾವರಣಂ’ ಕಾದಂಬರಿಯ ಬರವಣಿಗೆ ಶುರುಮಾಡಿದ್ದೆ. ಹಿಂಬಾಲಕರು, ಓದುಗರು ಹೆಚ್ಚಿ ಒಳ್ಳೆಯ ಪ್ರತಿಕ್ರಿಯೆಯೂ ಬಂದವು. ಅದೇ ಸಮಯಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಯುವಬರಹಗಾರರ ಚೊಚ್ಚಲ ಕೃತಿ ಪುರಸ್ಕಾರಕ್ಕೆ ನನ್ನ ಕಚ್ಚಾ ಕಥೆಗಳು ಆಯ್ಕೆಯಾಗಿದ್ದವು. ಪುಸ್ತಕ ಕೆಲಸದಲ್ಲಿ ತೊಡಗಿದ್ದರಿಂದ ಮತ್ತು ನಾನು ಶಿವಸಂಚಾರ ರೆಪರೇಟರಿಯಲ್ಲಿ ಇದ್ದುದರಿಂದ ರೌದ್ರಾವರಣಂ ಬರವಣಿಗೆ ನಿಲ್ಲಿಸಿದ್ದೆ.

ಅದಾದಮೇಲೆ ಸಿನೆಮಾ ಕೆಲಸಗಳಲ್ಲಿ ನಿರತನಾಗಿ ಪ್ರತಿಲಿಪಿಯಲ್ಲಿ ಸಕ್ರಿಯವಾಗಿರಲು ಸಾಧ್ಯವಾಗಲಿಲ್ಲ. ಈಗ ರೌದ್ರಾವರಣಂ ಕಾದಂಬರಿ ಪುಸ್ತಕವಾಗಿ ಬಿಡುಗಡೆಗೂ ಮುನ್ನವೇ ಬಹಳಷ್ಟು ಓದುಗರನ್ನು ತಲುಪಿದೆ. ಮತ್ತು ಮೆಚ್ಚುಗೆಯ ಮಹಾಪೂರವು ಹರಿದು ಬರುತ್ತಿವೆ. ಇದೆಲ್ಲವೂ ಶರುವಾಗಿದ್ದು ಪ್ರತಿಲಿಪಿಯಿಂದಲೇ.. ಹಾಗಾಗಿ ವೇದಿಕೆಯ ಎಲ್ಲ ಬಳಕೆದಾರರಿಗೆ, ಸೃಷ್ಠಿಕರ್ತರಿಗೆ ನಾನು ಸದಾ ಋಣಿ.

13ನೆ ಮಾರ್ಚ್ ಭಾನುವಾರದಂದು ಬೆಂಗಳೂರಿನ ಪ್ರತಿಲಿಪಿ ಆಫೀಸಿನಲ್ಲಿ ಕನ್ನಡ ಅವತರಣಿಕೆಯ ಸಂಪಾದಕರಾದ ಅಕ್ಷಯ್ ಬಾಳೆಗೆರೆ ಅವರ ನೇತೃತ್ವಲ್ಲಿ ‘ಪ್ರತಿಲಿಪಿ ಆಥರ್ಸ್ ಮೀಟಿಂಗ್’ ಸೇರಲಾಗಿತ್ತು. ಮೀಟಿಂಗ್ ಕೊನೆಯಲ್ಲಿ ‘ರೌದ್ರಾವರಣಂ’ ಕೃತಿ ಸಾಂಕೇತಿಕವಾಗಿ ಬಿಡುಗಡೆಯೂ ಆಯಿತು. ಇದೇ ವೇದಿಕೆಯಲ್ಲಿ ಬರವಣಿಗೆ ಶುರುಮಾಡಿದ್ದ ನನಗೆ, ನನ್ನ ಕೃತಿ ಇದೇ ವೇದಿಕೆ ಮೇಲೆ ಬಿಡುಗಡೆಯಾಗಿದ್ದು ಹೆಚ್ಚು ಸಂತಸಕರ ವಿಷಯ. ಜೊತೆಗಿದ್ದ ಪ್ರತಿಲಿಪಿ ಬಳಕೆದಾರರಿಗೆ, ನನ್ನ ಓದುಗರಿಗೆ, ರೌದ್ರಾವರಣಂ ಕೃತಿಯ ಬರವಣಿಗೆಯಿಂದ ಪುಸ್ತಕವಾಗುವವರೆಗೆ ಸಹಕರಿಸಿದ ಎಲ್ಲರಿಗೂ ಅನಂತನ ಅನಂತಾನಂತ ಧನ್ಯವಾದಗಳು.

ಕಾರ್ಯಕ್ರಮ ತುರ್ತಾಗಿ ಆಯೋಜಿಸಿದ್ದರಿಂದ ಯಾರನ್ನೂ ಆಹ್ವಾನಿಸಲು ಸಾಧ್ಯವಾಗಿಲ್ಲ. ಹಾಗಾಗಿ ಎಲ್ಲರಲ್ಲೂ ಕ್ಷಮೆಯಿರಲಿ. ಪುಸ್ತಕದ ಅಧಿಕೃತ ಬಿಡುಗಡೆ ಸಮಾರಂಭವನ್ನು ಮುಂದಿನ ತಿಂಗಳು ಅಂದರೆ ಏಪ್ರಿಲ್ ನಲ್ಲಿ ಯೋಜಿಸಲಾಗಿದೆ. ಅದರ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ತಿಳಿಸುವೆ.

ಅವ್ವ ಪುಸ್ತಕಾಲಯ ಪ್ರಕಟಣೆಯ ಕೃತಿಗಳು ರಿಯಾಯಿತಿ ದರದಲ್ಲಿ ಲಭ್ಯವಾಗುತ್ತಿದ್ದು, ಆಸಕ್ತರು ಕೊಂಡು ಓದಬಹುದು. ಪುಸ್ತಕಗಳಿಗಾಗಿ ಸಂಪರ್ಕಿಸಿ.
ಅವ್ವ ಪುಸ್ತಕಾಲಯ: 8548948660

ಅನಂತ್ ಕುಣಿಗಲ್

Related post

Leave a Reply

Your email address will not be published. Required fields are marked *