ಲತಾ ಮಂಗೇಶ್ಕರಳಿಗೆ
ಭೂಮಿಗೆ ಬಂದ
ಶಾಪಗ್ರಸ್ತ ಕಿನ್ನರಿ
ನಂದಾ ದೀಪದ ನಗೆಯ
ಶ್ವೇತ ವಸ್ತ್ರದ ಶಾರದೆ
ಲತಾ ನಿನಗೆ ನೂರು ವಂದನೆ
ಶಬ್ದಜಾಲದ ನಿಶ್ಶಬ್ದದ
ನಡುವೆ ನೂರು ಬಣ್ಣದ ಶಬ್ದ
ಚಿತ್ರಗಳ ರಾಗ ರಂಗೋಲಿಯ
ರಚಿಸಿ ರಂಜಿಸುವ
ಮೋಹಕ ಮೋಡಿಯ ಮಾಟಗಾತಿ
ಲತಾ ನಿನಗೆ ನೂರು ವಂದನೆ
ಕವಿಯ ಭಾವದ ಹೂವು
ವಿರಹದುರಿಗಳ ನೋವು
ಮಿಲನದಿರುಳಿನ ಕಾವು
ಎಲ್ಲ ಭಾವಗಳ ಹೂಬನದಲ್ಲಿ
ನೂರು ಬಣ್ಣಗಳ ಹೂಗಳರಳಿಸಿದ ತೋಟಗಾತಿ
ಲತಾ ನಿನಗೆ ನೂರು ವಂದನೆ
ನಿನ್ನಿಂದ ಕೋಗಿಲೆಯೋ
ಕೋಗಿಲೆಯಿಂದ ನೀನೋ ತಿಳಿಯದೆ
ಹಾವುಗಳೂ ತಲೆದೂಗುವಂತೆ
ಮಾಡುವ ಶ್ರೀ ಕಂಠ ಕೀರ್ತಿ
ಲತಾ ನಿನಗೆ ನೂರು ವಂದನೆ

ಡಿ ಎನ್ ಸುರೇಶ್
ಹವ್ಯಾಸಿ ಪತ್ರಕರ್ತರು