ಲೋಳೆ ಸರದ ಸದ್ಬಳಿಕೆ

ಸಸ್ಯರಾಶಿಯಲ್ಲಿ ಬಹಳ ವಿಶಿಷ್ಟ ಎನಿಸುವ ಅಲೋವೆರಾ ಎಂದು ಕರೆಯುವ ಲೋಳೆ ಸರವನ್ನು ಬಹಳಷ್ಟು ಮನೆಯ ಕುಂಡಗಳಲ್ಲಿ ಬೆಳೆಯುವುದನ್ನು ಕಾಣಬಹುದಾಗಿದೆ. ‘ಆಸ್ಫಾಡೆಲೆಸಿಯಾ’ ಎಂಬ ಸಸ್ಯ ಕುಟುಂಬಕ್ಕೆ ಸೇರಿದ ಇದು ದಕ್ಷಿಣ ಆಫ್ರಿಕಾ ದೇಶ ದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ತನ್ನ ಹೆಸರಿಗೆ ತಕ್ಕಂತೆ ಈ ಸಸ್ಯವು ರಸಭರಿತವಾಗಿದ್ದು ಅದರೊಳಗೆ ಅಂತೂ ಲೋಳೆ ತುಂಬಿರುತ್ತದೆ. ಎಲ್ಲಾ ಸಸ್ಯ ಮೂಲಿಕೆಯಂತೆ ಈ ಸಸ್ಯಕ್ಕೆ ಬೇರು ಇರುವುದೇ ಹೊರತು ಗಿಡಕ್ಕೆ ಕಾಂಡ ಎಳೆಗಳು ಇರುವುದಿಲ್ಲ.

ಇದು ನೀರು ಲಭ್ಯವಿಲ್ಲದ ಸಮಯದಲ್ಲಿ , ಎಲೆಯಲ್ಲಿರುವ ಕ್ಲೋರೋಫಿಲ್ (cholorophill) ಮಡಿದು, ರೋಡೋಕ್ಸಾನ್ಥಿನ್ (Rhodoxanthin) ಅನ್ನುವ ಕೆಂಪುಬಣ್ಣದ ಪದಾರ್ಥ ಹುಟ್ಟುತ್ತದೆ. ಇದರಿಂದ ಎಲೆಗಳು ಕೆಂಪಾಗಿ ಕಾಣಿಸುತ್ತದೆ ಮತ್ತು ನೀರು ಸಿಕ್ಕಿದಾಗ ಎಲೆಗಳಲ್ಲಿ ಕ್ಲೋರೋಪಿಲ್ ವೃದ್ಧಿ ಅಗುತ್ತದೆ. ಹೆಚ್ಚು-ಕಡಿಮೆ ಎಲ್ಲಾ ಲೋಳೆಸರ ಗಿಡಗಳು ಇಂತಹ ಲಕ್ಷಣವನ್ನು ಹೊಂದಿರುತ್ತವೆ. ಈ ಗುಣವನ್ನು ಆಪ್ಟಿಕಲ್ ಪ್ರಾಪರ್ಟಿ (optical property) ಎಂದು ಕರೆಯಲಾಗಿದೆ. ಎಲೆಗಳಂತೆ ಬೆಳೆದ ಕಾಂಡಗಳು ಹೊರಗೆ ಹಸಿರಿನಿಂದ ಕಾಣುತ್ತದೆ ಮತ್ತು ಕಾಂಡದ ಒಳಗೆ ದಪ್ಪನೆಯ ಪಾರದರ್ಶಕ ಲೋಳೆ ತುಂಬಿರುತ್ತದೆ. ಇದರಲ್ಲಿ ಸುಮಾರು 500 ಪ್ರಭೇದಗಳಿದ್ದು ಸದಾ ಹಸಿರಾಗಿರುವ ದೀರ್ಘಕಾಲಿಕ ಸಸ್ಯವಾದ ಇವು ಬಹಳ ಕಡಿಮೆ ಆರೈಕೆಯಲ್ಲಿ ಹೇರಳವಾಗಿ ಬೆಳೆಯುವ ಸಾಮರ್ಥ್ಯ ಹೊಂದಿರುತ್ತದೆ.


ಲೋಳೆ ಸರದ ಉಪಯೋಗಕ್ಕೆ ಬಂದರೆ ಇಂದಿನ ಮಾರುಕಟ್ಟೆಯಲ್ಲಿ ಲೋಳೆ ಸರದ ಕ್ರೀಮ್, ಲೋಷನ್, ಜ್ಯೂಸ್ ಗಳು ದೊರೆಯುತ್ತದೆ. ಇದನ್ನು ಆಯುರ್ವೇದ ಔಷದಿಯ ತಯಾರಿಕೆಯಲ್ಲಿ ಸಹ ಬಳಸಲಾಗುತ್ತದೆ. ಜೀರ್ಣ ಕ್ರಿಯೆಯನ್ನು ವೃದ್ಧಿಸುವಲ್ಲಿ ಸಹಕಾರಿಯಾಗಿರುವ ಲೋಳೆ ಸರದ ಲೋಳೆಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಲಾಗುತ್ತದೆ. ಇದರ ಲೋಳೆಯನ್ನು ಮುಖಕೆ ಲೇಪಿಸುವುದರಿಂದ ಚರ್ಮದ ಕಾಂತಿಯು ಹೆಚ್ಚಾಗುವುದು, ಚರ್ಮ ರೋಗಗಳಿಗೆ ಧೀರ್ಘಕಾಲ ಲೋಳೆಯನ್ನು ಲೇಪಿಸುವುದರಿಂದ ರೋಗವು ಮಾಯುವ ಸಾಮರ್ಥ್ಯ ಹೆಚ್ಚು.


ನುಣುಪಾದ ರೇಶಿಮೆಯಂತಹ ಉದ್ದನೆಯ ಕೂದಲನ್ನು ನಮ್ಮದಾಗಿಸಿಕೊಳ್ಳಲು ಸಹ ಲೋಳೆ ಸರವನ್ನು ಕೂದಲಿಗೆ ಹಚ್ಚಬಹುದು.ಅಲ್ಲದೆ ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರಮಾಡಿಯು ಉಪಯೋಗಿಸಲಾಗುತ್ತದೆ.
ಹೆಣ್ಣು ಮಕ್ಕಳಲ್ಲಿ ಕಾಣುವ ಬಿಳಿ ಸೆರಗು, ಮುಟ್ಟಿನ ಸಮಸ್ಯೆಗಳಿದ್ದಲ್ಲಿ ಲೋಳೆ ಸರವನ್ನು ಸತತವಾಗಿ ಜೇನಿನ ಜೊತೆ ಸೇವಿಸಿದರೆ ಸಮಸ್ಯೆಗಳು ದೂರವಾಗುವುದು. ದಂತಕ್ಷಯ ನಿವಾರಣೆ, ಊತ ಕಡಿಮೆ ಮಾಡಲು, ಸುತ್ತ ಗಾಯಗಳನ್ನು ಅದರ ಕಲೆಗಳನ್ನು ನಿವಾರಿಸಲು ಲೋಳೆ ರಸವನ್ನು ಬಳಸಲಾಗುತ್ತದೆ.
ಲೋಳೆ ಸರದ ಸದ್ಬಳಿಕೆಯನ್ನು ಮಾಡುವುದರಿಂದ ಬಹಳಷ್ಟು ವ್ಯಾಧಿಗಳಿಗೆ ನಾವೇ ಪರಿಹಾರವನ್ನು ಕಂಡುಕೊಳ್ಳಬಹುದು ಅಲ್ಲವೇ.

ಶಿಲ್ಪ

Related post

Leave a Reply

Your email address will not be published. Required fields are marked *