ವಟವೃಕ್ಷ – ಆಲದ ಮರ
ಆಲದ ಮರವು ಹಲಸಿನ ಕುಟುಂಬಕ್ಕೆ ಸೇರಿದ (ಮೋರೇಸೀ ಕುಟುಂಬ), ಬೃಹತ್ತಾಗಿ ಬೆಳೆಯುವ ವೃಕ್ಷವಾಗಿದ್ದು ಮೊದಲಿಗೆ ಪರಾವಲಂಬಿ ಸಸ್ಯವಾಗಿ (ಎಪಿಫೈಟಿಕ್ ಅಂದರೆ ಇತರ ಮರಗಳನ್ನು ಆಶ್ರಯಿಸಿಕೊಂಡು ಬೆಳೆದು ನಂತರ ತಾನು ಸ್ವತಂತ್ರವಾಗಿ ಬೆಳೆಯುವ ಜಾತಿಯ ಸಸ್ಯ) ಜನ್ಮ ತಾಳುತ್ತದೆ.
ಎಪಿಫೈಟಿಕ್ ಅಂದರೆ ಬೇರೊಂದು ಮರದ ಮೇಲೆ ಬಿದ್ದ ಬೀಜ ಹುಟ್ಟಿ ಅಲ್ಲಿಂದ ತನ್ನ ಜೀವನ ಚಕ್ರ ಆರಂಭಿಸುತ್ತದೆ. ಇದು ಭಾರತ ದೇಶದ ರಾಷ್ಟ್ರೀಯ ವೃಕ್ಷವೂ ಆಗಿದೆ. ಹಿಂದೂ ಧರ್ಮದಲ್ಲಿ ಪೂಜ್ಯನೀಯವಾಗಿರುವ ಅಶ್ವತ್ಥ ವೃಕ್ಷವೂ(ಅರಳೀ ಮರ) ಇದೇ ಜಾತಿಗೆ ಸೇರಿದೆ. ಇದರ ಮೂಲ ಭಾರತೀಯ ಉಪಖಂಡವಾಗಿದ್ದು, ಇದು ನಿತ್ಯಹರಿದ್ವರ್ಣ ಜಾತಿಯ ಮರವಾಗಿದ್ದು, ಸದಾ ಕಾಲ ಹಸಿರಾಗಿಯೇ ಇರುತ್ತದೆ. ಇದು ಮಳೆಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಆಲದ ಮರದ ವೈಜ್ಞಾನಿಕ ಹೆಸರು ‘ಫಿಕಸ್ ಬೆಂಗಾಲನೆಸಿನ್’ ಎಂದಾಗಿದ್ದು,ಇದನ್ನು ಭಾರತೀಯ ಆಲ ಮತ್ತು ಅಂಜೂರದ ಮರ, ಸ್ಸ್ಟ್ಯಾಂಗ್ಲರ್ ಫಿಗ್’, ಅಥವಾ ‘ವಟವೃಕ್ಷ ’ ಎಂದೂ ಕರೆಯುತ್ತಾರೆ.
ಈ ಮರದ ಕೊಂಬೆಗಳು ಹರಡಿಕೊಂಡು ಕೊಂಬೆಗಳು ತಾವೇ ಹೊಸ ಬೇರುಗಳನ್ನು ಬಿಟ್ಟು ಹೊಸ ಮರಗಳಾಗುತ್ತವೆ. ಇದು ವಿಶಾಲವಾಗಿ ಹರಡಿಕೊಂಡು ಬೆಳೆಯುವ ನಾಶವಾಗದ ವೃಕ್ಷ ಎನಿಸಿಕೊಂಡಿದೆ. ಈ ಮರದಲ್ಲಿ ಹೊಸ ಬೇರು ಕೊಂಬೆಗಳಿಂದ ಬೆಳೆಯುತ್ತಾ ಹರಡಿಕೊಂಡು ಹೋಗುತ್ತದೆ. ಈಗಲೂ ಆಲದ ಮರವು ಗ್ರಾಮ ಜೀವನದ ಕೇಂದ್ರವಾಗಿದ್ದು, ಕೆಲವೆಡೆ ಈಗಲೂ ಹಳ್ಳಿಯ ಪಂಚಾಯತಿಯು ಆಲದ ಮರದ ಕೆಳಗಿನ ಕಟ್ಟೆಯಲ್ಲಿ ನಡೆಯುತ್ತದೆ.
ಈ ಮರವು ಒಮ್ಮೆ ನೆಲದ ಮೇಲೆ ಬೇರು ಬಿಟ್ಟರೆ, ಅದು ನೂರಾರು ವರ್ಷಗಳ ಕಾಲ ಬೆಳೆದು ಬದುಕುತ್ತದೆ. ಆಲದ ಮರ ಬೆಳೆದಂತೆ ಅನೇಕ ಬಿಳಲುಗಳನ್ನು ಹೊಂದಿ ವಿಸ್ತಾರವಾಗುತ್ತಾ, ಸುಮಾರು ಒಂದು ಎಕರೆಯಷ್ಟು ಸ್ಥಳವನ್ನೂ ಅದು ಆಕ್ರಮಿಸಿಕೊಳ್ಳಬಲ್ಲದು. ಮನುಷ್ಯನ ಜೀವನಕ್ಕೂ ಆಲದ ಮರಕ್ಕೂ ಅವಿನಾಭಾವ ಸಂಬಂಧವಿದ್ದು, ಇದು ಬಹುಪಯೋಗಿ ಮರವಾದ್ದರಿಂದ ಮನುಷ್ಯನ ವಂಶಾವಳಿಯನ್ನು ಆಲದ ಮರಕ್ಕೆ ಹೋಲಿಸುತ್ತಾರೆ. ಇದು ಸುಮಾರು 100 ಅಡಿ ಎತ್ತರಕ್ಕೆ ಬೆಳೆದು ಹಬ್ಬಿಕೊಂಡು ಬೆಳುಯುವುದಲ್ಲದೇ ಇದರ ಟೊಂಗೆಗಳಿಂದ ಜೋತುಬಿದ್ದ ಬಳ್ಳಿಗಳು ಟೊಂಗೆಗಳಿಗೆ ಕಂಬಗಳಂತೆ ಆಧಾರ ಕೊಟ್ಟು ಹಬ್ಬಲು ಸಹಾಯ ಮಾಡುತ್ತವೆ. ಇದರ ಎಲೆ ಆಡು, ಕುರಿ, ದನಕರುಗಳಿಗೆ ಉತ್ತಮ ಆಹಾರವೂ ಆಗಿದ್ದು, ಕಾಗದ ತಯಾರಿಕೆಗೆ ಬೇಕಾಗುವ ಪಲ್ಪನ್ನು ತಯಾರಿಸಲು ಇದೇ ಮರವನ್ನು ಬಳಸುತ್ತಾರೆ.
ಆಲದ ಹಣ್ಣು ನೋಡಲು ಅಂಜೂರದಂತಿದ್ದು, ಇವು ಕಾಪರ್ಸ್ಮಿತ್ ಬಾರ್ಬೆಟ್, ಮೈನಾ ಪಕ್ಷಿ ಮತ್ತು ಅಳಿಲುಗಳಿಗೆ ತುಂಬಾ ಪ್ರಿಯವಾದ ಆಹಾರ. ಆಲದ ಗಿಡವನ್ನು ಕುಬ್ಜವಾಗಿಸಿ (ಬೋನ್ಸಾಯ್) ಅಲಂಕಾರಿಕ ಗಿಡವಾಗಿಯೂ ಬಳಸುತ್ತಾರೆ. ಪಕ್ಷಿಗಳು ತಿಂದ ಇದರ ಹಣ್ಣಿನಲ್ಲಿದ್ದ ಬೀಜಗಳು ಅವುಗಳ ಹಿಕ್ಕೆಯ ಮೂಲಕ ಪ್ರಸರಣಗೊಂಡು ಗಿಡಗಳಾಗಿ ಮೊಳಕೆ ಒಡೆಯುವುದೂ ಇದೆ. ಈ ಗಿಡಗಳು ತಮ್ಮ ಮೂಲ ಸ್ಥಳದಿಂದ ಗಾಳಿಯಲ್ಲಿ ಬೇರುಗಳ ರೂಪದಲ್ಲಿ ಹರಡಿ ನಂತರ ನೆಲದಲ್ಲಿ ಲಂಗರು ಹಾಕಿ ಬಲಿಷ್ಠವಾಗಿ ಬೆಳೆದು ಮೂಲ ಕಾಂಡದಿಂದ ಸ್ವತಂತ್ರವಾಗುವಷ್ಟು ದಪ್ಪವಾಗಿ ಬೆಳೆಯುತ್ತವೆ. ಹಾಗಾಗಿ ಈ ಮರವನ್ನು ಸುಲಭವಾಗಿ ಕತ್ತರಿಸಿ ನಾಶ ಮಾಡಲು ಸಾದ್ಯವೇ ಇಲ್ಲ ಎನ್ನವಷ್ಟರ ಮಟ್ಟಿಗೆ ಇವು ಬೆಳೆಯುತ್ತವೆ.
ಆಲದ ಬೀಜಗಳು ಎಲ್ಲೇ ಬಿದ್ದರೂ (ಮರದ ಟೊಳ್ಳಾದ ಕಾಂಡ, ಕಟ್ಟಡಗಳ ಗೋಡೆಗಳು, ಬಂಡೆಯಲ್ಲಿ) ಇವು ಅಲ್ಲೇ ಮೊಳಕೆಯೊಡೆದು ಸೂರ್ಯನ ಬೆಳಕನ್ನು ಹುಡುಕಿಕೊಂಡು ಹೇರಳವಾಗಿ ಸೂರ್ಯನ ಬೆಳಕು ದೊರೆಯುವಷ್ಟು ಎತ್ತರದವರೆಗೆ ವೇಗವಾಗಿ ಏರುತ್ತಾ ಬೆಳೆದು ನಂತರ ವಿಶಾಲವಾಗಿ ಹರಡಿ ಬೆಳೆಯುತ್ತವೆ. ಆದ್ದರಿಂದ ಈ ಮರದ ಎತ್ತರವು ಸೂರ್ಯನ ಬೆಳಕಿನ ಲಭ್ಯತೆಯ ಆಧಾರದಲ್ಲಿ ವ್ಯತ್ಯಾಸವಾಗಬಹುದು. ಸಾಮಾನ್ಯವಾಗಿ, ಈ ಮರದ ಕೊಂಬೆಗಳು ಮರದ ಎತ್ತರಕ್ಕಿಂತ ಹೆಚ್ಚು ಅಗಲವಾಗಿ ವಿಸ್ತರಿಸಿ ಬೆಳೆಯುತ್ತದೆ.
ಆಲದ ಮರ ಔಷದಿಗಳ ಆಗರ
ಆಲದ ಮರ ಹಲವು ಔಷಧೀಯ ಗುಣಗಳನ್ನು ಹೊಂದಿದ್ದು, ಇದರಲ್ಲಿ ಅಂಥೋಸಯಾನಿಡಿನ್, ಕಿಟೋನ್, ಫಿನಲ್, ಟ್ಯಾನಿನ್, ಸ್ಟೆರಾಲ್, ಫ್ಲೆವನಾಯ್ಡ್ ಅಂಶ ಹೇರಳವಾಗಿದ್ದು, ಇದರ ಎಲೆಗಳಲ್ಲಿ ಪ್ರೊಟೀನ್, ಫೈಬರ್, ಕ್ಯಾಲ್ಸಿಯಂ ಮತ್ತು ರಂಜಕದ ಅಂಶ ಹೆಚ್ಚಿದೆ. ಆಲದ ಮರದ ಹಾಲನ್ನು ಹಲ್ಲುನೋವಿನ ಶಮನಕ್ಕೆ ಮತ್ತು ಗಂಟುಕಟ್ಟಿದ ಹುಣ್ಣುಗಳಿಗೆ, ದೇಹದಲ್ಲಿ ಊತವುಂಟಾಗಿದ್ದರೆ ಊತದ ಭಾಗಕ್ಕೆ ಈ ಮರದ ಎಲೆಯ ರಸವನ್ನು ಲೇಪವಾಗಿ ಬಳಸುತ್ತಾರೆ. ಇದರ ಎಲೆಯ ಚಿಗುರಿನ ಕಷಾಯವನ್ನು ಭೇದಿಗೆ, ಇದರ ಹಾಲನ್ನು ಸಂಧಿವಾತಕ್ಕೆ ಔಷಧವಾಗಿ ಉಪಯೋಗಿಸುತ್ತಾರೆ.
ಆಲದ ಬೇರನ್ನು ಜಜ್ಜಿ ಅದರಿಂದ ಹಲ್ಲುಜ್ಜಿದರೆ ಹಲ್ಲು ನೋವು, ಒಸಡುನೋವಿನ ಸಮಸ್ಯೆ ಕಮ್ಮಿಯಾಗುತ್ತದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್, ಆಂಟಿ ಮೈಕ್ರೋಬಿಯಲ್ ಗುಣವಿರುವುದರಿಂದ ಇವು ಹಲ್ಲು ಮತ್ತು ಒಸಡುಗಳ ಸಮಸ್ಯೆಯನ್ನು ದೂರಮಾಡುತ್ತದೆ. ಚರ್ಮದಲ್ಲಿ ಉಂಟಾಗುವ ಉರಿ ಗುಳ್ಳೆಗಳಿಗೆ ಆಲದ ಎಲೆಯನ್ನು ಜಜ್ಜಿ ಅದರ ರಸವನ್ನು ಗುಳ್ಳೆಗಳ ಮೇಲೆ ಮಾಲಿಶ್ ಮಾಡಿದರೆ ಉರಿಗುಳ್ಳೆ ವಾಸಿಯಾಗುತ್ತದೆ. ಆಲದ ಬೇರನ್ನು ಜಜ್ಜಿ ಲೇಪವನ್ನೂ ಚರ್ಮಕ್ಕೆ ಹಚ್ಚಬಹುದು. ಇದರಿಂದಲೂ ಚರ್ಮದ ಆರೋಗ್ಯ ವೃದ್ಧಿಯಾಗುತ್ತದೆ. ಆಲದ ಮರದಲ್ಲಿ ಆಂಟಿ ಮೈಕ್ರೋಬಿಯಲ್, ಬ್ಯಾಕ್ಟೀರಿಯ ವಿನಾಶಕ ಮತ್ತು ಆಂಟಿ ಇನ್ಫ್ಲೇಮಟರಿ ಗುಣ ಇರುವುದರಿಂದ ಇದರ ಎಲೆಗಳು ನೋವು ಶಮನ ಮಾಡುತ್ತದೆ.ಆಲದ ಎಲೆಯಲ್ಲಿ ಗಂಟು ನೋವು ನಿವಾರಿಸುವ ಗುಣವಿರುವುದರಿಂದ ಇದರ ಎಲೆಯನ್ನು ಜಜ್ಜಿ ಅದರ ರಸ ತೆಗೆದು ನೋವು, ಬಾವು ಇರುವ ಜಾಗಕ್ಕೆ ಹಚ್ಚಿ, ಮಾಲಿಶ್ ಮಾಡಿದರೆ ನೋವು ಮತ್ತು ಬಾವು ಕಮ್ಮಿಯಾಗುತ್ತದೆ. ಇದರಲ್ಲಿ ಆಂಟಿ ಇನ್ ಫ್ಲೇಮಟರಿ ಗುಣವಿರುವುದರಿಂದ ನೋವು ಮತ್ತು ಬಾವು ಶೀಘ್ರ ವಾಸಿಯಾಗುತ್ತದೆ. ಚರ್ಮದಲ್ಲಿ ತುರಿಕೆ ಉಂಟಾದರೆ ಆಲದ ಎಲೆ ಅಥವಾ ತೊಗಟೆಯನ್ನು ತೆಗೆದು ಚೆನ್ನಾಗಿ ಜಜ್ಜಿ ರಸ ತೆಗೆದು ತುರಿಕೆಯ ಜಾಗಕ್ಕೆ ಹಚ್ಚಿದರೆ ತುರಿಕೆ ಕಡಿಮೆಯಾಗುತ್ತದೆ. ಇದರಲ್ಲಿರುವ ಆಂಟಿ ಮೈಕ್ರೋಬಿಯಲ್ ಗುಣ ತುರಿಕೆ ನಿವಾರಿಸುತ್ತದೆ. ಆಲವು ಪರಾಗಸ್ಪರ್ಶಗೊಂಡು ಬೀಜಗಟ್ಟಲು ಅದಕ್ಕೆ ಪುಟ್ಟ ಹುಳುವೊಂದರ ಸಹಾಯ ಅತ್ಯಗತ್ಯ. ಎಲ್ಲಾ ಫೈಕಸ್ ಗಳಂತೆ ಆಲವೂ ಒಂದು ಕಣಜ ಹುಳುವನ್ನು ಅವಲಂಬಿಸಿದೆ. ಈ ಅವಲಂಬನೆಯು ಕೇವಲ ಒಂದು ನಿರ್ದಿಷ್ಟ ಕಣಜದ ಪ್ರಭೇದದೊಂದಿಗೆ ಮಾತ್ರವೇ ಇರುತ್ತದೆ. ಆಲದೊಂದಿಗೆ ಲಕ್ಷಾಂತರ ವರ್ಷಗಳಿಂದ ಸಹಚರ್ಯ ಬೆಳೆಸಿರುವ ಈ ಹುಳುವಿನ ಪ್ರಭೇದದ ಹೆಸರು ‘ಯುಪ್ರಿಸ್ಟಿನ ಮಸೊನಿ” ಎಂದು. ಯುಪ್ರಿಸ್ಟಿನ ಜಾತಿಯ ಈ ಹುಳುಗಳು ಇಂಡೋ-ಆಸ್ಟ್ರೇಲಿಯಾ ಮೂಲದವು. ಇವೆರಡೂ ಒಂದೇ ಭೌಗೋಳಿಕ ವ್ಯಾಪ್ತಿಯಲ್ಲಿ ಹುಟ್ಟಿವೆ. ಎಕರೆಗಟ್ಟಲೆ ವಿಸ್ತಾರವಾಗಿ ಬೆಳೆಯಬಲ್ಲ, ಬೃಹತ್ ಗಾತ್ರದ ಗಿಡಮರಗಳನ್ನೂ, ಬೆಟ್ಟವನ್ನೂ ಭೇಧಿಸಿ ಬೇರಿಳಿಸಬಲ್ಲ ಆಲವು ಕೇವಲ ಒಂದುವರೆ ಮಿ.ಮೀ. ಗಾತ್ರದ ಈ ಹುಳುವಿನಿಂದ ತನ್ನ ಜೀವನವನ್ನು ಕಾಪಾಡಿಕೊಳ್ಳಬೇಕಿದೆ. ಯುಪ್ರಿಸ್ಟಿನ ಮಸೊನಿಯ ಹೆಣ್ಣು 1.8 ಮಿ.ಮೀ ಉದ್ದ ಇದ್ದರೆ, ಗಂಡು 1.3 ಮಿ.ಮೀ ಮಾತ್ರ ಇರುತ್ತವೆ. ಆಲ ಮತ್ತು ಈ ಹುಳುಗಳು ಒಂದಕ್ಕೊAದು 5-10 ಲಕ್ಷಪಟ್ಟು ಗಾತ್ರದ ವ್ಯತ್ಯಾಸವಿದೆ. ಅಷ್ಟಿದ್ದರೂ ಇವರಡೂ ಒಂದನ್ನೊಂದು ಬಿಟ್ಟು ಬದುಕೇ ಇಲ್ಲದಂತೆ ಬದುಕುತ್ತವೆ.
ತನ್ನ ದೊಡ್ಡ ದೊಡ್ಡ ರೆಂಬೆಗಳ ಮೂಲಕ ಜಗತ್ತನ್ನೇ ತನ್ನತ್ತ ಸೆಳೆದುಕೊಳ್ಳುವ ತಾಕತ್ತು ಈ ವೃಕ್ಷಕ್ಕಿದೆ. ಹಾಗಂತ ಇದು ಕೇವಲ ದೊಡ್ಡ ವೃಕ್ಷ ಎಂಬ ಕಾರಣಕ್ಕಾಗಲೀ ಅಥವಾ ರಾಷ್ಟಿçÃಯ ವೃಕ್ಷ ಎಂಬ ಕಾರಣಕ್ಕಾಗಲೀ ಮಾತ್ರ ಇದು ಪ್ರಾಶಸ್ತö್ಯ ಪಡೆದಿರುವುದಲ್ಲ. ಅದರೊಂದಿಗೆ ಅತ್ಯದ್ಭುತವಾದ ಔಷಧೀಯ ಗುಣಗಳನ್ನೂ ಹೊಂದಿರುವುದರಿಂದ ಇದನ್ನು ಬಹೂಪಯೋಗಿ ಮತ್ತು ಪವಾಡದ ಮರವೆಂದೂ ಹೇಳಬಹುದು.
ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160