ವಾರಾಂತ್ಯದ ದಿನ – ಸೋಮಾರೀದಿನ

ವಾರಾಂತ್ಯದ ದಿನ – ಸೋಮಾರೀದಿನ

ನೀ ಇದ ತಿಳಿಯೋ ಮನುಜ
ರಜಾ ಬಯಸುವುದು ಸಹಜ|
ಸೋಮವಾರದಿಂದ ಶನಿವಾರದವರೆಗೆ
ವಾಲುವರು ಕೆಲಸದ ಕಡೆಗೆ||. ||೧||

ಭಾನುವಾರವಾದರೂ ಒಮ್ಮೆ
ಕೆಲಸ ಮಾಡದಿರೋಣ ಒಮ್ಮೆ|
ದಿನಂಪ್ರತಿ ಸೂರ್ಯೋದಯದಲೆದ್ದು
ನಿತ್ಯ ಕರ್ಮವ ಮುಗಿಸುವರು ಪೆದ್ದು||. ||೨||

ವಾರದ ಆರು ದಿನವು ಸಾಮಾನ್ಯ ತಿನಿಸು
ಭಾನುವಾರ ಮಾಡುವರು ವಿಶೇಷ ತಿನಿಸು|
ಸಸ್ಯಾಹಾರವ ಕೆಲವರು ತಿಂದರೇ
ಮಾಂಸ ಮೀನು ಮೊಟ್ಟೆಯ ತಿನ್ನುವರೇ||. ||೩||

ಪ್ರತಿನಿತ್ಯ ಕೆಲಸಕ್ಕಾಗೀ ಏಳುವರು
ಮುಂಜಾವಿನ ಗಂಟೆ ಆರು|
ವಾರಾಂತ್ಯದ ದಿನದೀ ತಡವಾಗೀ
ಹಾಲು ಪತ್ರಿಕೆಗಳ ಪಡೆವರು ತಡವಾಗೀ||. ||೪||

ವಾರಾಂತ್ಯವೆಂದರೇ ಆಗುವರು ಸೋಮಾರೀ
ಪೂಜೇಪುರಸ್ಕಾರವಿಲ್ಲದೆ ಬರೀ|
ನಮ್ಮ ನಾಗಶಯನನ ಅರ್ಚಿಸುವರೇ
ಬರಿದೇ ಕೈಮುಗಿದು ಭಜಿಸುವರೇ||. ||೫||

ನಾಗರಾಜು.ಹ
ಬೆಂಗಳೂರು

Related post

Leave a Reply

Your email address will not be published. Required fields are marked *