ವಿಕೃತವೇಕೆ

ವಿಕೃತವೇಕೆ

ಚುಚ್ಚು ಮಾತಿನ
ಮುಳ್ಳ ಕೊನೆಯಿಂದ
ಎದೆಗೂಡಲವಿತ
ಮನವನೇಕೆ ತಿವಿಯುವಿರಿ ?

ಕೊಂಕು ನುಡಿಯೆಂಬ
ವಿಷದ ಬಾಣಕೆ
ಸವಿ ಮನವನೇಕೆ
ಗುರಿಯಾಗಿಸುವಿರಿ ?

ಹೆರವರ ಮನವ
ಘಾಸಿಗೊಳಿಸುತ,
ಅದೆಂತು ನೀವು
ಸಂತಸ ಪಡೆಯುವಿರಿ ?

ನಿಮ್ಮಿಂದಾಗುವುದಾದರೆ
ಶುಭ ನುಡಿಯಿರಿ,
ಇಲ್ಲವಾದಲ್ಲಿ ಬಾಯಿ
ಮುಚ್ಚಿಕೊಂಡಿರಿ !!

ಶ್ರೀವಲ್ಲಿ ಮಂಜುನಾಥ

Related post

Leave a Reply

Your email address will not be published. Required fields are marked *