ವಿಶ್ವ ವಿಸ್ಮಯ -2

–ಧೂಮಕೇತು–

ಸೂರ್ಯನನ್ನು ಪರಿಭ್ರಮಿಸುತ್ತ ತನ್ನ ಸುತ್ತಲೂ ಘನೀಕೃತ ಅನಿಲಗಳನೊಳಗೊಂಡು ಜೊತೆಗೆ ಬಾಲವು ಇರುವ ಒಂದು ಸಣ್ಣ ಕಾಯವೇ ಧೂಮಕೇತು. ಧೂಳು, ಬಂಡೆ ಮತ್ತು ಮಂಜುಗಡ್ಡೆಗಳಿಂದ ಕೂಡಿದ ಸೌರವ್ಯೂಹದ ರಚನೆಯಿಂದ ಹೆಪ್ಪುಗಟ್ಟಿದ ಅವಶೇಷಗಳೆ ಈ ಧೂಮಕೇತುಗಳು. ಧೂಮಕೇತುವಿನ ತಲೆಭಾಗದಲ್ಲಿ ಮಿಥೇನ್ ಅಮೋನಿಯಾ ಆವಿಗಳು ಮತ್ತು ನೀರು ಘನಸ್ಥಿತಿಯಲ್ಲಿರುತ್ತವೆ. ಇನ್ನು ಇವುಗಳ ಗಡ್ಡೆಗಳಲ್ಲಿ ಕಬ್ಬಿಣ್ಣ, ನಿಕೆಲ್, ಕ್ಯಾಲ್ಸಿಯಂ, ಮ್ಯಾಗ್ನಿಷಿಯಂ, ಸಿಲಿಕಾನ್, ಸೋಡಿಯಂ ಮುಂತಾದವುಗಳಿಂದ ಕೂಡಿವೆ. ಧೂಮಕೇತು ಆಕಾಶದ ನಿಹಾರಿಕೆಯ ವಸ್ತುವಾಗಿದ್ದು ಪ್ರಕಾಶಮಾನವಾದ ಹೆಪ್ಪುಗಟ್ಟುವಿಕೆಯ ನ್ಯೂಕ್ಲಿಯಸ್ ಮತ್ತು ಪ್ರಕಾಶಮಾನವಾದ ಬಾಲವನ್ನು ಹೊಂದಿದೆ. ಧೂಮಕೇತುಗಳು ಪ್ರಾಥಮಿಕವಾಗಿ ಹೆಪ್ಪು ಗಟ್ಟಿದ ಅನಿಲಗಳು, ಮಂಜುಗಡ್ಡೆ ಮತ್ತು ಧೂಳಿನಿಂದ ಕೂಡಿದೆ. ಆದರಿಂದ ಧೂಮಕೇತು ತುಂಬಾ ಉದ್ದವಾದ ಕಕ್ಷೆಯಲ್ಲಿ ಸೂರ್ಯನ ಸುತ್ತ ಬಾಹ್ಯಾಕಾಶದಲ್ಲಿ ಹಾರುವ ಒಂದು ದೊಡ್ಡ ಕೊಳಕು ಸ್ನೋ ಬಾಲ್ ಎಂದು ಹೇಳಬಹುದು.

ಹ್ಯಾಲಿ ಧೂಮಕೇತು

ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಒಮ್ಮೆ ಅಥವಾ ಎರಡು ಬಾರಿ ಮಾತ್ರ ನೋಡಬಹುದಾದೆಂದರೆ ಹ್ಯಾಲಿ ಧೂಮಕೇತು. 75 – 76 ವರ್ಷಗಳ ಅಂತರದಲ್ಲಿ ಇದನ್ನು ಕಂಡ ಚೀನಿಯರು ಮತ್ತು ಬ್ಯಾಬಿಲೋನಿಯನ್ನರು ದಾಖಲಿಸಿದ್ದಾರೆ. ಈ ನಿರ್ಧಿಷ್ಟ ಅವಧಿಯ ಧೂಮಕೇತು ಆಗಮನ ಲೆಕ್ಕ ಹಾಕಿದ ಇಂಗ್ಲೆಂಡಿನ ಖಗೋಳ ವಿಜ್ಞಾನಿ ಎಡ್ಮನ್ಡ್ ಹ್ಯಾಲಿ ಮುಂದಿನ ಅದರ ಭೇಟಿ ಬಗ್ಗೆ ಮುಂಚಿತವಾಗಿಯೇ ತಿಳಿಸಿದ್ದರು. ವಿಪರ್ಯಾಸವೆಂದರೆ 1742 ರಲ್ಲಿ ನಿಧನನಾದ ಎಡ್ಮನ್ಡ್ ಹ್ಯಾಲಿ ತನ್ನ ಜೀವಿತಾವಧಿಯಲ್ಲಿ ಒಮ್ಮೆಯೂ ಕೂಡ ಆ ಧೂಮಕೇತುವನ್ನು ನೋಡಲೇ ಇಲ್ಲ. 1758 ರಲ್ಲಿ ಪುನಃ ಕಾಣಿಸಿದ ಧೂಮಕೇತು ಹ್ಯಾಲಿ ಎಂದು ನಾಮಕರಣಗೊಂಡು ಜಗದ್ವಿಖ್ಯಾತವಾಯಿತು.

ಎಡ್ಮನ್ಡ್ ಹ್ಯಾಲಿ

ಎಡ್ಮನ್ಡ್ ಹ್ಯಾಲಿ ಧೂಮಕೇತುವಿನ ನಿರ್ಧಿಷ್ಟ ಅವಧಿಯ ಲೆಕ್ಕಾಚಾರವನ್ನು ಸಾಭೀತುಪಡಿಸುವುದ್ದಕ್ಕೂ 105 ವರ್ಷಗಳ ಮುಂಚೆಯೇ ವಿಲಿಯಂ ಶೇಕ್ಸ್ಪಿಯರ್ ತನ್ನ ಜೂಲಿಯಸ್ ಸೀಸರ್ ನಾಟಕದಲ್ಲಿ ಇದರ ಉಲ್ಲೇಖ ಮಾಡಿದ್ದಾರೆ. 1301 ರಲ್ಲಿ ಇಟಲಿ ಚಿತ್ರಕಾರ ಗಿಯಿಟ್ಟೋಣ “ಸ್ಟಾರ್ ಆಫ್ ಬೆಥ್ಲಹೆಮ್” ಕೃತಿಗೆ ಪ್ರೇರಣೆ ಈ ಧೂಮಕೇತು ಎಂದು ಬ್ರಿಟಾನಿಕಾ ವಿಶ್ವಕೋಶ ದಾಖಲಿಸಿದೆ. ಶೇಕ್ಸ್ಪಿಯರ್ ಕೃತಿಯಲ್ಲಿ ಧೂಮಕೇತುವಿನ ಪ್ರಸ್ತಾಪವಾದ ನಂತರ ಖಗೋಳ ವಿದ್ಯಾಮಾನದ ಅಧ್ಯಯನ ಬಹು ವೇಗದಿಂದ ಬೆಳೆಯಿತು. 1910 ಮತ್ತು 1986 ಹ್ಯಾಲಿ ಧೂಮಕೇತು ಹಲವು ಅಧ್ಯಯನಗಳಿಗೆ ತೆರೆದುಕೊಂಡಿತು.

1986 ರಲ್ಲಿ ಮೊದಲ ಬಾರಿಗೆ ಬಾಹ್ಯಾಕಾಶ ನೌಕೆಯಿಂದ ಧೂಮಕೇತುವಿನ ಸಮೀಪದ ದರ್ಶನವಾಯಿತು. 390 ಲಕ್ಷ ಮೈಲಿಗಳಷ್ಟು ಹತ್ತಿರ ಬಂದಿದ್ದ ಹ್ಯಾಲಿ ಧೂಮಕೇತುವಿನ ಬಳಿಗೆ ವೇಗಾ 1 ಮತ್ತು ವೇಗಾ 2 ಹೆಸರಿನ ವಿಶೇಷ ನೌಕೆಗಳನ್ನು ಅಂದಿನ ಸೋವಿಯೆತ್ ಯೂನಿಯನ್ ಮತ್ತು ಫ್ರಾನ್ಸ್ ಜಂಟಿಯಾಗಿ ಕಳುಹಿಸಿದವು. ಧೂಮಕೇತುವಿನ ಹೃದಯಭಾಗವೆಂದೇ ಹೆಸರಾದ ನ್ಯೂಕ್ಲಿಯಸ್ ನ ಸ್ಪಷ್ಟ ಮೊದಲ ಬಾರಿಗೆ ದೊರೆಯಿತು.

ಹ್ಯಾಲಿ ಬರುತ್ತಿರುವಾಗಲೇ ಬಹಳ ಉತ್ಸುಕವಾಗಿ ಅಮೆರಿಕಾದ ನಾಸಾ ಸಂಸ್ಥೆ ಖಗೋಳ ವಿಜ್ಞಾನಿಗಳನ್ನು ಹೊತ್ತು ಎಸ್ ಟಿ ಎಸ್ 51 L ಚಾಲೆಂಜರ್ ಎಂಬ ಬಾಹ್ಯಾಕಾಶ ನೌಕೆಯ ಮೂಲಕ ಹ್ಯಾಲಿ ಧೂಮಕೇತುವಿನ ಕಕ್ಷೆಯತ್ತ ಧಾವಿಸುವ ಯೋಜನೆ ಹಾಕಿಕೊಂಡಿತು. 1986 ರ ಜನವರಿ 18 ರಂದು ಉಡ್ಡಯನವಾದ ಎರಡು ನಿಮಿಷದಲ್ಲಿಯೇ ಸ್ಪೋಟಗೊಂಡು ದಾರುಣ ಅಂತ್ಯಕಂಡಿತು. ಪುನಃ 2061 ರಲ್ಲಿ ಹ್ಯಾಲಿ ಧೂಮಕೇತುವಿನ ನಿರೀಕ್ಷೆಯಿದೆ. ಆಗ 1986 ರಲ್ಲಿ ಕಂಡದ್ದಕ್ಕಿಂತ ಹೆಚ್ಚು ಪ್ರಕಾಶಮಾನವಾಗಿ ಸೂರ್ಯ ಮತ್ತು ಭೂಮಿಯ ಒಂದೇ ಬದಿಯಲ್ಲಿ ಹಾದು ಹೋಗುವುದನ್ನು ಕಾಣಬಹುದಾಗಿದೆ.

ಕನಸು

Related post

Leave a Reply

Your email address will not be published. Required fields are marked *