ವೈಕುಂಟದ ಆಡುಗೆಮನೆ – ಕಾಂಚನ ಬ್ರಹ್ಮನ ಸನ್ನಿಧಿಯಲ್ಲಿ ಅನ್ನ ಯಜ್ಞ

ವೈಕುಂಟದ ಆಡುಗೆಮನೆ – ಕಾಂಚನ ಬ್ರಹ್ಮನ ಸನ್ನಿಧಿಯಲ್ಲಿ ಅನ್ನ ಯಜ್ಞ

ಭಾರತೀಯ ಸಂಸ್ಕೃತಿಯಲ್ಲಿ ಅನ್ನಕ್ಕೆ ಮಹತ್ವದ ಸ್ಥಾನ. ಅನ್ನವನ್ನು ಪ್ರರಬ್ರಹ್ಮ ಸ್ವರೂಪವೆಂದೆ ವಂದಿಸಿ ನಮಿಸಿ ಸ್ವೀಕರಿಸುವುದು ಭಾರತೀಯ ಸಂಸ್ಕೃತಿ. ದೇಶದಾದ್ಯಂತ ಇರುವ ಹಲವಾರು ಧಾರ್ಮಿಕ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಬಂದ ಭಕ್ತರು ಹಸಿದು ಹಾಗೆ ಹೋಗಬಾರದೆಂಬ ಕಾರಣಕ್ಕೆ ಭೋಜನ ಪ್ರಸಾದದ ವ್ಯವಸ್ಥೆ ಮಾಡಿರುತ್ತಾರೆ. ದೇವರ ದರ್ಶನಕ್ಕೆ ಎಷ್ಟು ಮಂದಿ ಭಕ್ತರು ಬಂದರೂ ಸರಿ ಅವರಿಗೆ ಅಚ್ಚುಕಟ್ಟಾಗಿ ಭೋಜನ ಪ್ರಸಾದ ಮಾಡಿಸಿ ಕಳಿಸುವ ಹಲವಾರು ದೇವಸ್ಥಾನಗಳಿದೆ. ಅವುಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವುದು ಭೂವೈಕುಂಟವೆಂದೇ ಪ್ರಸಿದ್ದವಾದ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿರುವ ಭೋಜನ ಶಾಲೆ.

ಕಾಂಚನ ಬ್ರಹ್ಮನ ಸನ್ನಿಧಾನದಲ್ಲಿ ನಡೆಯುವ ಅನ್ನ ದಾಸೋಹ ಅನೇಕ ಸೋಜಿಗಗಳಿಂದ ಕೂಡಿದೆ.

ಭಾರತದಲ್ಲಿ ಪ್ರತಿದಿನ ಅತಿ ಹೆಚ್ಚು ಭಕ್ತರು ಬೇಟಿಕೊಡುವ ದೇಗುಲ ತಿರುಪತಿ. ಇಲ್ಲಿಗೆ ಪ್ರತಿದಿನವೂ ಸುಮಾರು 70 ರಿಂದ 80 ಸಾವಿರ ಜನ ಭಕ್ತರು ಭೇಟಿ ಕೊಡುತ್ತಾರೆ. ಹೀಗೆ ಬಂದವರೆಲ್ಲರಿಗೂ ಅಚ್ಚುಕಟ್ಟಾಗಿ ಭೋಜನ ವ್ಯವಸ್ಥೆ ಇದೆ. ಈಲ್ಲಿ 1984 ರಲ್ಲಿ ಮೊದಲಿಗೆ ಭಕ್ತರಿಗೆ ಭೋಜನದ ವ್ಯವಸ್ಥೆಯನ್ನು ಪ್ರಾರಂಭಿಸಲಾಯಿತಾದರೂ ರಾಜರ ಕಾಲದಲ್ಲಿ ಇಲ್ಲಿ ಬರುವ ಭಕ್ತರಿಗೆ ಸಕ್ಕರೆ ಪೊಂಗಲ್, ಪುಳಿಯೋಗರೆ ಹಾಗೂ ಮೊಸರನ್ನ ಕೊಡುವ ವ್ಯವಸ್ಥೆ ಇತ್ತು. ಸಾಮಾನ್ಯ ದಿನಗಳಲ್ಲಿ ಸುಮಾರು 1,50,000 ಮಂದಿ ಭಕ್ತರು ಇಲ್ಲಿ ಪ್ರಸಾದ ಭೋಜನ ಮಾಡುತ್ತಾರೆಂದರೆ ನಿಮಗೆ ಅಶ್ಚರ್ಯವಾಗಬಹುದು ಬ್ರಹ್ಮೋತ್ಸವದ ದಿನಗಳಲ್ಲಿ ಈ ಸಂಖ್ಯೆ ಹತ್ತು ಲಕ್ಷವನ್ನು ದಾಟುತ್ತದೆ. ದೇವಸ್ಥಾನಕ್ಕೆ ಬರುವ ಭಕ್ತರು ಹಸಿದ ಹೊಟ್ಟೆಯಲ್ಲಿ ಹಿಂದಿರುಗಬಾರದೆಂದು ಆಗಿನ ಮುಖ್ಯಮಂತಿ ಎನ್.ಟಿ ರಾಮರಾವ್ ಪ್ರಾರಂಭಿಸಿದ ಮಹತ್ವಾಕಾಂಕ್ಷಿ ಯೋಜನೆ. 1985 ರಲ್ಲಿ ಬೆಂಗಳೂರು ಮೂಲದ ಭಕ್ತರೊಬ್ಬರು ಕೊಟ್ಟ ಆರು ಲಕ್ಷ ಮೂಲ ಹಣದಿಂದ ಪ್ರಾರಂಭವಾದ ಅನ್ನ ದಾಸೋಹ.

ಸಂಖ್ಯಾ ಸೋಜಿಗ

ಪ್ರತಿದಿನ ಇಲ್ಲಿ ಬೇಯುವ ಅಕ್ಕಿ; 12 ರಿಂದ 13 ಟನ್ ತಿರುಮಲದಲ್ಲಿ 2-3 ಟನ್
ತಿರುಪತಿಯಲ್ಲಿರುವ ಟಿಟಿಡಿ ದೇವಸ್ಥಾನಗಳಲ್ಲಿ ಸಾಂಭಾರ್ ಹಾಗೂ ರಸಂಗೆ ಉಪಯೋಗಿಸುವ ತೊಗರಿಬೇಳೆ: 2 ರಿಂದ 3 ಟನ್
ತರಕಾರಿ: 6 ರಿಂದ 7 ಟನ್ ನಷ್ಟು ತರಕಾರಿ (ಬ್ರಹ್ಮೋತ್ಸವ ಸಮಯದಲ್ಲಿ 25 ಟನ್)
ಅಡುಗೆ ಎಣ್ಣೆ; 800 ಲೀಟರ್
1000 ಕ್ಕಿಂತ ಅಧಿಕ ತೆಂಗಿನಕಾಯಿ

ಅಡುಗೆ ಮನೆಯಲ್ಲಿ ಕೆಲಸ ಮಾಡುವ ಓಟ್ಟು ಬಾಣಸಿಗರು ಹಾಗೂ ಕೆಲಸಗಾರರು ಸುಮಾರು 600

ನಿತ್ಯ 1,50,000 ಭಕ್ತರಿಗೆ ಅನ್ನ ಸಂತರ್ಪಣೆ, ವಾರಾಂತ್ಯದಲ್ಲಿ ಸುಮಾರು 2,00,000 ಜನರಿಗೆ ಅನ್ನ ಸಂತರ್ಪಣೆ

ಬ್ರಹ್ಮೋತ್ಸವ ಸಂದರ್ಭದಲ್ಲಿ : ಸುಮಾರು 17 ಲಕ್ಷ ಭಕ್ತರಿಗೆ ಭೋಜನ ವ್ಯವಸ್ಥೆ
ಇದಲ್ಲದೇ ದರ್ಶನಕ್ಕೆ ಕಾದು ನಿಂತ ಭಕ್ತರಿಗೆ 15 ರಿಂದ 20 ಸಾವಿರ ಭಕ್ತರಿಗೆ ಅವರಿದ್ದ ಸ್ಥಳದಲ್ಲೇ ಮೊಸರನ್ನ ಪುಳಿಯೋಗರೆ ಸರಭರಾಜು
ದರ್ಶನಕ್ಕೆ ಸರದಿಯಲ್ಲಿ ನಿಂತ ಭಕ್ತರಿಗೆ ಕೊಡಲು ದಿನವೂ 10 ಸಾವಿರ ಲೀಟರ್ ಹಾಲನ್ನು ಸರಭರಾಜು ಮಾಡಲಾಗುತ್ತದೆ.

ತಿಂಡಿಯ ಸಮಯ : ಬೆಳಗ್ಗೆ 9 ರಿಂದ 10:30
ಮಧ್ಯಾಹ್ನ ಊಟದ ಸಮಯ: ಬೆಳಗ್ಗೆ 10:30 ರಿಂದ ಸಂಜೆ 4 ರವರೆಗೆ
ರಾತ್ರಿ ಊಟದ ಸಮಯ: ಸಂಜೆ 5 ರಿಂದ 10:30 ರವರೆಗೆ

ಒಂದು ದಿನದ ತಿಂಡಿ ಊಟದ ಖರ್ಚು: ಸುಮಾರು 30 ಲಕ್ಷ ರೂಪಾಯಿಗಳು

ಭೋಜನದಲ್ಲೇನಿರುತ್ತೆ?

ತಿಂಡಿಗೆ, ಉಪ್ಪಿಟ್ಟು, ಪೊಂಗಲ್ ಹಾಗೂ ಶಾವಿಗೆ ಉಪ್ಪಿಟ್ಟು ಹಾಗೂ ಕಾಯಿ ಚಟ್ನಿ
ಊಟಕ್ಕೆ: ನಿತ್ಯ ಸಕ್ಕರೆ ಪೊಂಗಲ್, ಒಂದು ಪಲ್ಯ, ಚಟ್ನಿ, ಅನ್ನ, ತಿಳಿಸಾರು, ಸಾಂಬಾರು ಹಾಗೂ ಮಜ್ಜಿಗೆ
ಬಾಳೆ ಎಲೆ ಹಾಗೂ ಮುತ್ತುಗದ ಎಲೆಯಯಲ್ಲಿ ಊಟ ಬಡಿಸುವ ವ್ಯವಸ್ಥೆ. ನೀರಿಗೆ ಲೋಟ.
ರುಚಿ ಶುಚಿಗೆ ಮಹತ್ವ ಕೊಡುವಂತೆ ಭೋಜನ ಪ್ರಸಾದಕ್ಕೆ ಬರುವ ಭಕ್ತರನ್ನು ಉಪಚರಿಸುವ ಸ್ವಯಂಸೇವಕರ ಗುಣವು ಮೆಚ್ಚುವಂತಹದ್ದು. ಶಾಂತ ರೀತಿಯಿಂದ ಊಟ ಬಡಿಸುತ್ತಾರೆ

ಅನ್ನ ಹಾಗೂ ತರಕಾರಿ ಬೇಯೀಸಲು ಸುಮಾರು 20 ಸ್ಟೀಮ್ ಬಾಯ್ಲರ್ ಗಳ ಉಪಯೋಗ
2ಸಾವಿರ ಲೀಟರ್ ಬೇಯಿಸುವ ಹತ್ತು ಬಾಯ್ಲರ್ ಗಳಲ್ಲಿ ಅನ್ನ ಹಾಗೂ 1000 ಲೀ ಸಾಮರ್ಥ್ಯದ ಹತ್ತು ಬಾಯ್ಲರ್ ಗಳಲ್ಲಿ ಪೊಂಗಲ್, ರಸಂ ಹಾಗೂ ಸಾಂಬಾರು ತಯಾರಿಕೆಗೆ ಬಳಸಲಾಗುತ್ತದೆ.

ಹೆಚ್ಚಾಗಿ ಬಳಸುವ ತರಕಾರಿ.
ಬೂದುಗುಂಬಳಕಾಯಿ, ಸಿಹಿಕುಂಬಳಕಾಯಿ, ಬಿನ್ಸ್, ಸೊಪ್ಪು, ಕೊಸುಗೆಡ್ಡೆ, ಟೋಮೆಟೊ ಹೆಚ್ಚಾಗಿ ಬಳಸುವ ತರಕಾರಿ
ಪ್ರತಿದಿನ ದಾನಿಗಳು ತರಕಾರಿಗಳನ್ನು ದಾನವಾಗಿ ಕಳಿಸುತ್ತಾರೆ

ತರಕಾರಿ ಸರಬರಾಜು
ಬೆಂಗಳೂರು, ಕೃಷ್ಣಗಿರಿ ಹಾಗೂ ಚೆನ್ನೈನಿಂದ 2 ಎರ್ ಕಂಡಿಷನ್ಡ್ ವಾಹನದಲ್ಲಿ ತರಕಾರಿ ಸರಬರಾಜು

ದಾನಿಗಳೂ ಕೊಟ್ಟಿರುವ ಸುಮಾರು 591 ಕೋಟಿ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದು ಅದರಿಂದ ಬರುವ ಬಡ್ಡಿ ಹಣದಲ್ಲಿ ಅನ್ನಪ್ರಸಾದ ಛತ್ರದ ನಿರ್ವಹಣೆ

ಎರಡು ಮಹಡಿ ಕಟ್ಟಡದ ನೆಲ ಹಾಗೂ ಮೊದಲ ಮಹಡಿಯಲ್ಲಿ ಒಟ್ಟಿಗೆ 8000 ಮಂದಿ ಕುಳಿತು ಊಟ ಮಾಡುವ ವ್ಯವಸ್ಥೆ

ಅನ್ನದಾಸೋಹ ಪ್ರಾರಂಭವಾದಾಗಿನಿಂದ ಇದುವರೆಗೂ ಭೋಜನ ಮಾಡಿದ ಭಕ್ತರ ಸಂಖ್ಯೆ ಸುಮಾರು 700 ಕೋಟಿ

ಪ್ರತಿವರ್ಷ ಅನ್ನದಾಸೋಹಕ್ಕೆ ತಗುಲುವ ವೆಚ್ಚ ಸುಮಾರು 1000 ಕೋಟಿ
ಶ್ರೀ ವೆಂಕಟೇಶ್ವರ ಅನ್ನ ಪ್ರಸಾದ ಟ್ರಸ್ಟ ಮೂಲಕ ಅನ್ನ ಪ್ರಸಾದ ನಿಲಯಂ ನ ನಿರ್ವಹಣೆ

ಇಲ್ಲಿ ಬರುವ ಭಕ್ತರು ಖಾಲಿ ಹೊಟ್ಟೆಯಲ್ಲಿ ಹಿಂದಿರುಗಬಾರದು, ಪ್ರತಿಯೊಬ್ಬರು ಊಟ ಮಾಡಿ ಹೋಗಬೇಕೆಂಬುದೇ ಟಿಟಿಡಿ ಯ ಆಶಯ.

ಡಾ. ಪ್ರಕಾಶ್ ಕೆ.ನಾಡಿಗ್

Related post

Leave a Reply

Your email address will not be published. Required fields are marked *