ವೈವಿಧ್ಯಮಯ ರಂಗ ಪ್ರತಿಭೆ ಗಗನ್

ರಂಗಭೂಮಿ, ಕಿರುತೆರೆ ಮತ್ತು ಚಲನಚಿತ್ರಗಳಲ್ಲಿ ನಟ ಹಾಗೂ ಕಂಠದಾನ ಕಲಾವಿದನಾಗಿ ಗುರುತಿಸಿಕೊಂಡವರು ಗಗನ್ ಆರ್ ಗೋಡ್ಗಲ್

ರಂಗಭೂಮಿಯ ಚಟುವಟಿಯಲ್ಲಿ ಏನೋ ಒಂದು ಸೆಳೆತವಿದೆ. ಅದು ಒಂಥರ ಗುರುತ್ವಾಕರ್ಷಣೆ. ಈ ರಂಗಭೂಮಿಯತ್ತ ಸಾಗಲು ಹಲವು ಮಾರ್ಗಗಳಿವೆ. ಆದರೆ ಹೊರ ಬರಲು ದಾರಿಯೇ ಇಲ್ಲ. ಅಲ್ಲೇ ಇದ್ದು ಬಿಡುತ್ತಾರೆ. ಅಲ್ಲಿ ಗೊತ್ತೋ ಗೊತ್ತಿಲ್ಲದೆಯೋ ಕಷ್ಟಗಳು ಬಂದರೂ ಅವು ಕಷ್ಟವೆನಿಸದು. ಅಕ್ಕ-ಪಕ್ಕದ ದೂರದರ್ಶನ, ಸಿನಿಮಾಗಳತ್ತ ಹೆಜ್ಜೆ ಇಟ್ಟರೂ ಮೂಲ ಬೇರು ರಂಗಭೂಮಿಯಲ್ಲೇ ಇರುತ್ತೆ.

ತುಮಕೂರು ಜಿಲ್ಲೆಯ ಮೂಲದ ರಂಗಕರ್ಮಿ ಗಗನ್ ಆರ್ ಗೋಡ್ಗಲ್ ಎಂ.ಬಿ.ಎ ಸ್ನಾತಕೋತ್ತರ ಪದವೀಧರರಾಗಿದ್ದರೂ, ಕಲೆಯನ್ನೇ ವೃತ್ತಿಯಾಗಿಸಿಕೊಳ್ಳಬೇಕೆಂದು ನಿರ್ಧರಿಸಿ ನೀನಾಸಂನಲ್ಲಿ ತರಬೇತು ಪಡೆದಿದ್ದಾರೆ. ಕಳೆದ ವರ್ಷ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ ಆಯೋಜಿಸಿದ್ದ ಥಿಯೇಟರ್ ಅಪ್ರಿಸಿಯೇಷನ್ ಕೋರ್ಸ್ ಸೇರಿದಂತೆ ಸಾಕಷ್ಟು ರಂಗ ಕಾರ್ಯಾಗಾರಗಳಲ್ಲಿ ಭಾಗವಹಿಸಿ ತರಬೇತಿಯನ್ನು ಪಡೆದಿದ್ದಾರೆ. ಇದೀಗ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್-(ಥಿಯೇಟರ್) ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೇ ದಾಕ್ಷಾಯಣಿ ಭಟ್ ಅವರ ದೃಶ್ಯ ರಂಗ ತಂಡದಲ್ಲಿ ಅತಿಥಿ ಕಲಾವಿದನಾಗಿ ಕೆಲಸ ಮಾಡುತ್ತಿದ್ದಾರೆ.

ಈ ಕಲಾವಿದರ ಕಲಾ ಪಯಣದ ಗಾಥೆಗಳನ್ನು ಅವರ ಮಾತಲ್ಲೇ ತಿಳಿಯೋಣ:

“ಇಲ್ಲಿಯವರೆಗೂ ಸುಮಾರು 16 ವರ್ಷಗಳಿಂದ ರಂಗಭೂಮಿಯಲ್ಲಿದ್ದೇನೆ. ಖ್ಯಾತ ಸಾಹಿತಿಗಳಾದ ಡಿ.ಆರ್.ನಾಗರಾಜ್ ಅವರ ಶ್ರೀಮತಿಯವರಾದ, ನಮ್ಮ ಶಾಲೆಯ ಶಿಕ್ಷಕಿಯವರಾಗಿದ್ದ ಸಿ.ಎನ್.ಗಿರಿಜಮ್ಮ ಅವರು ನನ್ನನ್ನು ರಂಗಭೂಮಿಗೆ ಪರಿಚಯಿಸಿದವರು. ಶಾಲಾ ದಿನಗಳಲ್ಲಿ ‘ಮಾಮಾ ಮೋಶಿ’, ‘ಗಾಂಪರ ಗುಂಪು’, ‘ಕಣ್ಣಿಗೆ ಮಣ್ಣು’ ಗಳಲ್ಲಿ ಅಭಿನಯಿಸಿದ್ದೆ.
ಸುಮಾರು 26ಕ್ಕೂ ಹೆಚ್ಚು ಹವ್ಯಾಸಿ ಮತ್ತು ವೃತ್ತಿಪರ ತಂಡಗಳಲ್ಲಿ 60ಕ್ಕೂ ಹೆಚ್ಚು ನಾಟಕಗಳಲ್ಲಿ ಭಾಗವಹಿಸಿದ್ದೇನೆ. 450ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ನಟನಾಗಿ, ನಟನೆಯ ಜೊತೆ ರಂಗದ ಹಿಂದಿನ ಕೆಲಸಗಳಲ್ಲಿಯೂ ಪಾಲ್ಗೊಂಡಿದ್ದೇನೆ. 2015 ರಲ್ಲಿ ವಿಜಯ ಕರ್ನಾಟಕ ನಾಟಕೋತ್ಸವದಲ್ಲಿ ಒಂದು ಕಿರು ನಾಟಕವನ್ನೂ ನಿರ್ದೇಶಿಸಿರುತ್ತೇನೆ.
‘ಗಾಂಧೀ – ೧೫೦’ – ನಟ ಹಾಗೂ ತಂತ್ರಜ್ಞನಾಗಿ ಕೆಲಸ 2018 -19 ರಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಸ್ತುತ ಪಡಿಸಿದ ‘ಗಾಂಧೀ – ೧೫೦ : ಒಂದು ರಂಗಪಯಣ’ ಎಂಬ ಅಭಿಯಾನದ ‘ಪಾಪು ಬಾಪು’ ನಾಟಕದಲ್ಲಿ ನಟ ಹಾಗು ತಂತ್ರಜ್ಞನಾಗಿ ಕೆಲಸ. ಈ ನಾಟಕವು ರಾಜ್ಯಾದ್ಯಂತ ತಿರುಗಾಟ ಮಾಡಿ 1000 ಕ್ಕೂ ಹೆಚ್ಚು ಪ್ರದರ್ಶಗಳನ್ನು ಕಂಡಿತ್ತು”.

ಅಭಿನಯಿಸಿರುವ ಪ್ರಮುಖ ನಾಟಕಗಳು:
ಮಾಮಾ ಮೋಶಿ, ಬೋಗಿ, ಉಂಡಾಡಿ ಗುಂಡ, ಚಮ್ಮಾರನ ಚಾಲೂಕಿ ಹೆಂಡತಿ, ಶ್ರದ್ಧಾ, ಗುಮ್ಮ ಬಂದ ಗುಮ್ಮ, ಕಾಡ್ಮನ್ಸ, ನೂರ್ ಜಹಾನ್, ಚಿರೆಬಂದೀ ವಾಡೆ, ಅಂದಿನ ರಾಮನ ಮುಂದಿನ ಕಥೆ, ಹಾನುಷ್ ಮತ್ತು ವಿದಿಶೆಯ ವಿದೂಷಕ.

ಪ್ರಮುಖ ರಂಗ ತಂಡಗಳು:
ಪ್ರ.ಕ.ಸಂ, ಗ್ರೀನ್ ರೂಮ್ ಕ್ಲಬ್, ಸಾತ್ವಿಕ, ರಂಗಪಯಣ, ರಂಗವರ್ತುಲ, ರಂಗಶಂಕರ (ರೆಪೆರ್ಟ್ರಿ), ಮನೋರಂಗ ಮತ್ತು ದೃಶ್ಯ
ರಂಗ ತಂಡಗಳು.

ಕಂಠದಾನ ಕಲಾವಿದ:
ಚಿಂಟು ಟಿ.ವಿಯ ಸ್ಪೈಡರ್ ಮ್ಯಾನ್ ಕಾರ್ಟೂನ್ ನಲ್ಲಿ ಸ್ಪೈಡರ್ ಮ್ಯಾನ್ ಪಾತ್ರಕ್ಕೆ ಕಂಠದಾನ ಕಲಾವಿದನಾಗಿ ಕೆಲಸ ಮಾಡಲು ಶುರು ಮಾಡಿ ಮುಂದೆ ಕನ್ನಡ ಚಿತ್ರಗಳಾದ ಜಾಲಿಬಾಯ್, ಜಟ್ಟಾ, ವಿಶಲ್, ರಾಜಹುಲಿ, ಅಮರಾವತಿ , ಮೊಜೊ, ‘ಬಾಹುಬಲಿ’ (ದಿ ಬಿಗಿನಿಂಗ್), ‘ಪದ್ಮಾವತ್’, ‘ವಡಾ ಚೆನ್ನೈ’ ಮತ್ತು ‘ಆಕ್ಷನ್’ ಚಲನಚಿತ್ರಗಳಿಗೆ ಕಂಠದಾನ ಕಲಾವಿದನಾಗಿದ್ದೇನೆ.

ಕಳೆದ ಒಂದು ವರ್ಷದಿಂದ ಹಿಂದಿ ಧಾರಾವಾಹಿ ‘ಉತ್ತರನ್’ನ ಕನ್ನಡ ಅವತರ್ಣಿಕೆಯಾದ ‘ಮುದ್ದು ಬಂಗಾರ’ ಧಾರಾವಾಹಿಯ ಮುಖ್ಯಪಾತ್ರ ‘ವೀರ್’ ಪಾತ್ರಕ್ಕೆ ಕಂಠದಾನ ಮಾಡುತ್ತಿದ್ದೇನೆ. ಗಿರೀಶ್ ಕಾರ್ನಾಡ್ ಅವರ ‘ಅಂಜು ಮಲ್ಲಿಗೆ’ ನಾಟಕದ ಆಡಿಯೋ ಬುಕ್ ನಲ್ಲಿ ಡೇವಿಡ್ ಪಾತ್ರಕ್ಕೆ ಧ್ವನಿಯಾಗಿದ್ದೆ.

ಚಲನಚಿತ್ರಗಳಲ್ಲಿ ನಟನೆ:
2014 ರಲ್ಲಿ ‘ಮಿ. ಜೋ ಬಿ. ಕಾರ್ವಾಲ್ಹೋ’ ಬಾಲಿವುಡ್ ಚಿತ್ರದ ಮೂಲಕ ಚಲನಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದೆ. ಅದೇ ವರ್ಷ ‘ಹುಚ್ಚುಡುಗ್ರು’ ಕನ್ನಡ ಚಿತ್ರದಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದೆ.
ಟೋರಾ ಟೋರಾ’ದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದೆ. ನಂತರ 2020ರ ಬೆಂಗಳೂರು ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ನಲ್ಲಿ ಪ್ರದರ್ಶನಗೊಂಡಿದ್ದ ‘ಬ್ರಾಹ್ಮಿ’ ಸಿನೆಮಾದಲ್ಲಿ ಒಂದು ಕ್ಯಾಮಿಯೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ.
ಬೆಂಗಳೂರಿನ ಪ್ರಭಾತ್ ಆಡಿಟೋರಿಮ್ಸ್ ಪ್ರೈ. ಲಿ. ಸಂಸ್ಥೆಯಲ್ಲಿ ಕೆಲವು ತಿಂಗಳುಗಳ ಕಾಲ ಪ್ರೋಗ್ರಾಮ್ ಕೋ ಆರ್ಡಿನೇಟರ್ ಆಗಿ ಕೆಲಸ ಮಾಡಿರುವ ಅನುಭವವನ್ನೂ ಕೂಡ ಹೊಂದಿದ್ದೇನೆ.

ನನ್ನ ಮುಂಬರುವ ಚಿತ್ರಗಳು:
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’. ನಿತಿನ್ ಕೃಷ್ಣಮೂರ್ತಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ, 2021 ರ ಅಂತ್ಯದ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.
ವೀರನಾರಾಯಣ ಅವರ ನಿರ್ದೇಶನದ ‘ಟಾರ್ಚು’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ.

ಶ್ರೀ ಗಗನ್ ಆರ್ ಗೋಡ್ಗಲ್ ರವರು ಮುಂಬರುವ ದಿನಗಳಲ್ಲಿ ತಮ್ಮ ವಿವಿಧ ಅಮೂಲ್ಯ ಪ್ರತಿಭೆಗಳಿಂದ ರಂಗಭೂಮಿ ಹಾಗು ಚಿತ್ರರಂಗದಲ್ಲಿ ಮುತ್ತಿನಂತೆ ಪ್ರಕಾಶಿಸಲಿ ಎಂದು ಸಾಹಿತ್ಯಮೈತ್ರಿ ಬಳಗ ಹಾರೈಸುತ್ತದೆ.

ನಿರೂಪಣೆ ಹಾಗೂ ಪರಿಚಯ

ತುಂಕೂರ್ ಸಂಕೇತ್

Related post

5 Comments

  • ಶ್ರೀ ಗಗನ ಒಬ್ಬ ಸಮರ್ಥ ನಟ, ಇತ್ತೀಚೆಗೆ ಅವರ ಸಂಪರ್ಕ ನನಗೆ ದೊರೆತದ್ದು. ಸ್ನೇಹಮಯಿ, ಶಾಂತ ಸ್ವಭಾವ, ಶಿಸ್ತು ಹಾಗೂ ಪಾತ್ರಗಳ ಅರಿತು ನಟನೆ. ಈ ಎಲ್ಲ ಗುಣಗಳನ್ನು ಹೊಂದಿದ ಸಮರ್ಥ ರಂಗಕರ್ಮಿ. ಕನ್ನಡ ರಂಗಭೂಮಿ, ಸಿನೆಮಾ ಹಾಗೂ ಟಿವಿ ಮಾಧ್ಯಮಗಳಿಂದ ಇವರಲ್ಲಿರುವ ನಟ/ನಟನಾ ಸಾಮರ್ಥ್ಯ ಕನ್ನಡಿಗರಿಗೆ ಇನ್ನೂ ಹೆಚ್ಚು ಹೆಚ್ಚು ದೊರೆಯಲಿ. ಅವರಿಗೆ ಉಜ್ವಲ ಭವಿಷ್ಯ ದೊರೆಯಲಿ ಎಂದು ಪ್ರಾರ್ಥಿಸುತ್ತೇವೆ.

  • Excellent Sir
    Nicely presented.

  • Very nice to this web page, and very detailed information about your professional time. Very nice informative. Have a good time.

  • Very nice to this web page, and very detailed information about your professional time. Very nice informative. Have a good time.

  • Thank you for your valuable feedback

Leave a Reply

Your email address will not be published. Required fields are marked *