ತುಂಕೂರ್ ಸಂಕೇತ್
ಸಣ್ಣವಳಿದ್ದಾಗ
ಪೀಟಿ ಮಾಸ್ತರರ
ವಿಶಲ್ಲಿನ ಶಿಳ್ಳೆ!
ಬೆಳೆದು ಬೆಡಗಿಯಾಗಿ
ಬಳುಕಿ ನಡೆವಾಗ
ಪಡ್ಡೆ ಹುಡುಗರ
ಕ್ಯಾತೆ ಮಾಡುವ ಶಿಳ್ಳೆ!
ಪಕ್ಕಾ ಗೃಹಿಣಿಯಾಗಿ
ಅಡುಗೆ ಕೋಣೆ ಸೇರಿದರೆ
ಕೂಗಿ ಕರೆಯುತ್ತೆ
ಅಡುಗೆಯ ಕುಕ್ಕರ್
ಶಿಳ್ಳೆ ಹಾಕಿ!
ಬಿಡದೀ ಮಾಯೇ
ವಯಸ್ಸಾದ ಮೇಲೆ
ವೃದ್ಧಾಶ್ರಮ ಸೇರಿದರೆ
ಪಕ್ಕದ ಬೆಟ್ಟದಿಂದ
ಕೂಗುತ್ತೆ ಶಿಳ್ಳೇ ಕ್ಯಾತ
ಶಿಳ್ಳೇ ಹಾಕಿ!
ತುಂಕೂರ್ ಸಂಕೇತ್