ಶಿವಾನಂದ ತಗಡೂರು – ಕೋವಿಡ್ ಕಥೆಗಳು – ಕೃತಿ ಲೋಕಾರ್ಪಣೆ

ಕನ್ನಡದ ಖ್ಯಾತ ಪತ್ರಕರ್ತರಾದ ಶ್ರೀ ಶಿವಾನಂದ ತಗಡೂರು ರವರ “ಕೋವಿಡ್ ಕಥೆಗಳು ಕಳೆದ ವಾರ ಫೆಬ್ರವರಿ 4 ರಂದು ಲೋಕಾರ್ಪಣೆಯಾಗಿದ್ದು ಕೃತಿಯನ್ನು ಬಹುರೂಪಿ ಪ್ರಕಾಶನವು ಹೊರತಂದಿದೆ.

ಜಯದೇವ ಆಸ್ಪತ್ರೆಯ ನಿರ್ದೇಶಕರಾದ ಡಾ. ಸಿ. ಎನ್. ಮಂಜುನಾಥ್ ರವರು ಕೃತಿಯನ್ನು ಬಿಡುಗಡೆ ಮಾಡಿ “ಪ್ರಕೃತಿಯ ವಿರುದ್ಧ ಹೋದರೆ ಏನಾಗುತ್ತದೆ ಎನ್ನುವುದಕ್ಕೆ ಕರೋನ ಒಂದು ಮಹತ್ವದ ಉದಾಹರಣೆಯಾಗಿದೆ, ತಿನ್ನಬಾರದ್ದನ್ನು ತಿಂದರೆ, ಮಾಡಬಾರದ್ದನ್ನು ಮಾಡಿದರೆ ಪ್ರಕೃತಿ ಸೇಡು ತೀರಿಸಿಕೊಳ್ಳುವ ಬಗೆ ಇದು, ಶಿವಾನಂದ ತಗಡೂರು ಅವರು ಪತ್ರಕರ್ತ ಕುಟುಂಬಗಳಿಗೆ ಬೆಂಬಲವಾಗಿ ನಿಂತದ್ದೇ ಅಲ್ಲದೆ ಅವರ ಕುಟುಂಬದ ಕಣ್ಣೀರ ಕಥೆಗಳನ್ನು ದಾಖಲಿಸಿರುವುದು ಅಭಿನಂದನೀಯ. ಇದರಿಂದಾಗಿ ಒಂದು ಸಂಘ ಮನಸ್ಸು ಮಾಡಿದರೆ ಇಂತಹ ರಚನಾತ್ಮಕ ಕಾರ್ಯ ಮಾಡಬಹುದು ಎಂದೂ ಗೊತ್ತಾಗುತ್ತದೆ” ಎಂದು ಅಭಿಪ್ರಾಯಪಟ್ಟರು.

ಇನ್ನು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಾಜಿ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರು “ಕೋವಿಡ್ ನಮ್ಮ ಸರಕಾರ ಎದುರಿಸಿದ ಮಹಾ ಸಮಸ್ಯೆಯಾಗಿತ್ತು. ಪ್ರತಿಯೊಬ್ಬರ ಬದುಕನ್ನು ಕೋವಿಡ್ ಅಲುಗಾಡಿಸಿದೆ. ಇಂತಹ ಸಂದರ್ಭದಲ್ಲಿ ಶಿವಾನಂದ ತಗಡೂರು ರವರು ಈ ಮಾರಣಾಂತಿಕ ರೋಗದಿಂದ ಸಾವನ್ನಪ್ಪಿದ ಕುಟುಂಬಗಳ ಪರವಾಗಿ ನಿಂತದ್ದು ಶ್ಲಾಘನೀಯ. ಅವರ ದೃಢ ಹೋರಾಟದಿಂದಾಗಿ ಅನೇಕ ಕುಟುಂಬಗಳು ನೆಮ್ಮದಿ ಕಂಡಿವೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಶ್ವವಾಣಿ ಸಂಪಾದಕರಾದ ಶ್ರೀ ವಿಶ್ವೇಶ್ವರ ಭಟ್ಟರು, ವಿಜಯವಾಣಿಯ ಸಂಪಾದಕರಾದ ಶ್ರೀ ಕೆ ಎನ್ ಚನ್ನೇಗೌಡರು, ಬಹುರೂಪಿಯ ಶ್ರೀ ಜಿ. ಎನ್. ಮೋಹನ್ ಇನ್ನು ಮುಂತಾದ ಸಾಹಿತಿ ಗಣ್ಯರು ಕೃತಿಯ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿ ಸಂತಸ ಹಂಚಿಕೊಂಡರು.

ಪುಸ್ತಕ ಕೊಳ್ಳಲು ಮೊಬೈಲ್ ಸಂಖ್ಯೆ 7019182729 ಗೆ ಸಂಪರ್ಕಿಸಿ.

ಸಾಹಿತ್ಯಮೈತ್ರಿ ತಂಡ

Related post

Leave a Reply

Your email address will not be published. Required fields are marked *