ಶ್ರೀಮತಿ ಆಶಾ ರಘು ರವರ “ಆವರ್ತ” ಮರುಮುದ್ರಣ

“ಆವರ್ತ” ಕಾದಂಬರಿ ಮೂರನೇ ಮುದ್ರಣ”

ಪ್ರತಿಭಾನ್ವಿತ ಕಾದಂಬರಿಕಾರ್ತಿ ಶ್ರೀಮತಿ ಆಶಾ ರಘು ರವರ “ಆವರ್ತ” ಕಾದಂಬರಿ ಮೂರನೇ ಮುದ್ರಣಗೊಳ್ಳುತ್ತಿದೆ. ಮೊದಲ ಮುದ್ರಣದಲ್ಲಿಯೇ “ಆವರ್ತ” ಕಾದಂಬರಿಯು 2015 ರ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಮೂರನೇ ಮುದ್ರಣವನ್ನು ಶ್ರೀ ರಘುವೀರ್ ಸಮರ್ಥ್ ರವರು ತಮ್ಮ “ಸಾಹಿತ್ಯಲೋಕ ಪಬ್ಲಿಕೇಷನ್” ಮೂಲಕ ಹೊರತರುತ್ತಿದ್ದಾರೆ.

’ಆವರ್ತ’ ಕಾದಂಬರಿಯ ಮೂರನೆ ಮುದ್ರಣದೊಂದಿಗೆ ’ಆವರ್ತ-ಮಂಥನ’ ಎಂಬ ಕಾದಂಬರಿಯ ಕುರಿತ ಅಭಿಪ್ರಾಯಗಳ ಸಂಗ್ರಹವೂ ಪ್ರಕಟಗೊಳ್ಳುತ್ತಿದೆ. ಇದು ‘ಆವರ್ತ’ ಕಾದಂಬರಿಯ ಕುರಿತ ವಿವಿಧ ಲೇಖಕರ, ಪತ್ರಿಕೆಗಳ ಹಾಗೂ ಓದುಗರ ಅಭಿಪ್ರಾಯ ಸಂಗ್ರಹ. ಡಾ.ಎಸ್.ಎಲ್.ಭೈರಪ್ಪ, ಶ್ರೀಮತಿ ವೈದೇಹಿ, ಡಾ.ಎಂ.ಎಸ್.ಆಶಾದೇವಿ ಸೇರಿದಂತೆ ಅನೇಕ ಲೇಖಕ ಲೇಖಕಿ ಹಾಗು ಓದುಗರುಗಳು ’ಆವರ್ತ’ ಕೃತಿಯ ಕುರಿತಂತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿರುವುದು “ಆವರ್ತ-ಮಂಥನ” ಹೊಸ ಪುಸ್ತಕದ ವಿಶೇಷ.

ಕಾದಂಬರಿಯನ್ನು ಕುರಿತು ಇನ್ನು ಅನೇಕ ವಿಮರ್ಶೆಗಳನ್ನು ಈಗಾಗಲೇ “ಪ್ರಜಾವಾಣಿ, ಕನ್ನಡ ಪ್ರಭ, ವಾರ್ತಾಭಾರತಿ, ಹೊಸ ದಿಗಂತ ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವುದು ‘ಆವರ್ತ’ ಕಾದಂಬರಿಯ ಜನಪ್ರಿಯತೆಯನ್ನು ಸಾರುತದ್ದೇ.

ಈ ಶುಭ ಸಂದರ್ಭದಲ್ಲಿ ‘ಆವರ್ತ’ ಹಾಗು “ಆವರ್ತ ಮಂಥನ” ಪುಸ್ತಕವನ್ನು ಬಿಡುಗಡೆಗೂ ಮುನ್ನ ಬುಕ್ ಮಾಡುವವರಿಗೆ ಸಾಹಿತ್ಯ ಲೋಕ ಪಬ್ಲಿಕೇಷನ್ಸ್ ನಿಂದ ವಿಶೇಷ ರಿಯಾಯಿತಿ ಲಭ್ಯವಿದೆ. ಆವರ್ತ ಪುಸ್ತಕದ ಮುಖಬೆಲೆ ರೂ 530/- ಇರುವುದು ರೂ 450/ ಕ್ಕೆ ಲಭ್ಯವಿದೆ ಹಾಗು “ಆವರ್ತ ಮಂಥನ” ಪುಸ್ತಕದ ಮುಖಬೆಲೆ ರೂ 85/- ಅಂಚೆ ವೆಚ್ಚ ಉಚಿತ.

ಪುಸ್ತಕ ಕೊಳ್ಳುವ ಆಸಕ್ತಿಯುಳ್ಳವರು ಪ್ರಿಆರ್ಡರ್ ಮಾಡಲು ಸಾಹಿತ್ಯಲೋಕ ಪಬ್ಲಿಕೇಶನ್ಸ್ ನ ರಘುವೀರ್ ಅವರನ್ನು 99459 39436 ಮೂಲಕ ಸಂಪರ್ಕಿಸಿ, ವಿಶೇಷ ರಿಯಾಯಿತಿಯ ಬೆಲೆಯಲ್ಲಿ ತಮ್ಮ ಮನೆ ಬಾಗಿಲಿಗೆ ತರಿಸಿಕೊಳ್ಳಿ.

ಸಾಹಿತ್ಯಮೈತ್ರಿ ತಂಡ

Related post

Leave a Reply

Your email address will not be published. Required fields are marked *