ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ
ಶಿವನ ಕುಮಾರರಾಗಿ ಬಂದು
ಧರೆಯ ಜನರ ಕಷ್ಟ ಅರಿತು
ಕಲ್ಪವೃಕ್ಷವಾಗಿ ನಿಂತು
ಪರಮ ಸೇವೆ ಗೈದಿರಿ
ಮುಖದ ಮೇಲೆ ಮಂದಹಾಸ
ಹಣೆಯ ಮೇಲೆ ಧರ್ಮ ಭಸ್ಮ
ಮನದೊಳಗೆ ಕಾಯಕದ ತುಡಿತ
ತ್ರಿವಿಧ ದಾಸೋಹ ಗೈದಿರಿ
ಹಸನ ಮನದ ಶುದ್ಧ ಭಾವ
ಬದುಕು ಜಗವ ಮೆಚ್ಚುವಂತ
ಕರ್ಮ ಯೋಗಿ ಆದಿಯಾಗಿ
ಸಿರಿಯ ಹೊನ್ನ ಉಣಬಡಿಸಿದಿರಿ
ಹಸಿವು ಮುಕ್ತರಾಗಿ ಮಾಡಿ
ಜ್ಞಾನ,ಕಲೆ, ವಿಜ್ಞಾನ ಕನ್ನಡಾಂಬೆಗೆ
ತ್ರಿವಿಧ ದಾಸೋಹಿಯಾಗಿ
ನಡೆದಾಡುವ ದೇವ ಮಾನವರಾದಿರಿ
ಗೌರವಕೆ ಡಾಕ್ಟರೇಟ್, ಕರ್ನಾಟಕ ರತ್ನ,
ಪದ್ಮಭೂಷಣ ಪ್ರಶಸ್ತಿ ದೊರೆತ
ಕರುಣಾಮಯಿ ಜಗದ ಬಸವಣ್ಣರಾಗಿ
ಜಗದ ಬಾಳು ಬೆಳಗಿದಿರಿ
ಜಗದ ಈಶ, ಜನರ ಈಶ
ಶಿವನ ಕುಮಾರ ಶಿವಕುಮಾರ
ಸ್ವಾಮೀಜಿಗಳಾಗಿ ಬಾಳಿಗೆ ಬೆಳಕಾದಿರಿ
ಜಗಕೆ ಧಾರಿ ದೀಪವಾದಿರಿ
ಪ್ರಕಾಶ. ಫ್. ಮರಿ ತಮ್ಮನವರ (ಗಣಿತ)
ಸರ್ಕಾರಿ ಪ್ರೌಢಶಾಲೆ ಹಾರುಗೊಪ್ಪ
ತಾ ಸೌದತ್ತಿ ಜಿ ಬೆಳಗಾವಿ
9844340373