ಸಂತೋಷದ ರಹಸ್ಯ

ಓರ್ವ ಮಾನವಶಾಸ್ತ್ರಜ್ಞ ಒಮ್ಮೆ ಆಫ್ರಿಕನ್ ಬುಡಕಟ್ಟು ಮಕ್ಕಳಿಗೆ ಆಟವೊಂದನ್ನು ಆಡಲು ತಿಳಿಸುತ್ತಾನೆ. ಆಟದ ನಿಯಮ ಏನಂದ್ರೆ ಮಕ್ಕಳಿಂದ ಅನತಿ ದೂರದಲ್ಲಿ‌ ಮರವೊಂದಿರುತ್ತೆ. ಅದರ ಬುಡದಲ್ಲಿ ರುಚಿಕರವಾದ ಹಣ್ಣಿನ ಬುಟ್ಟಿಯೊಂದನ್ನು ಇಟ್ಟು, ಗುಂಪಿನಲ್ಲಿರುವ ಮಕ್ಕಳಲ್ಲಿ ಯಾರು ಮೊದಲು ಆ ಮರವನ್ನು ತಲುಪುತ್ತಾರೋ ಅವರಿಗೆ ಮಾತ್ರ ಆ ಬುಟ್ಟಿಯಲ್ಲಿರುವ ಹಣ್ಣುಗಳು ಸಿಗುತ್ತೆ ಎನ್ನುತ್ತಾನೆ.

      ಮಕ್ಕಳು ನಡೆಯಲು ಆರಂಭಿಸುತ್ತಿದ್ದಂತೆ ಮಾನವಶಾಸ್ತ್ರಜ್ಞನಿಗೆ ಪರಮಾಶ್ಚರ್ಯ ಆಗುತ್ತೆ. ಯಾಕೆಂದರೆ ಆ ಮಕ್ಕಳು ಮರದೆಡೆಗೆ ಸ್ಪರ್ಧೆಯಿಂದ ಓಡುವ ಬದಲು, ಪರಸ್ಪರ ಕೈ ಕೈ ಹಿಡಿದು ಸೌಹಾರ್ದತೆಯಿಂದ ನಡೆದುಕೊಂಡೇ ಹೋಗಿ ಮರವನ್ನು ತಲುಪುತ್ತಾರೆ. ಹಾಗೆಯೇ ಬುಟ್ಟಿಯಲ್ಲಿದ್ದ ಹಣ್ಣುಗಳನ್ನು ಎಲ್ಲರೂ ಹಂಚಿಕೊಂಡು ತಿನ್ನುತ್ತಾರೆ!

     ಆಗ ಮಾನವಶಾಸ್ತ್ರಜ್ಞ ನಾನು ಟಾಸ್ಕ್ ನೀಡಿದ್ದು ಯಾರು ಬೇಗನೆ ಮರವನ್ನು ತಲುಪುತ್ತೀರೋ ಅವರಿಗೆ ಮಾತ್ರ ಹಣ್ಣಿನ ಬುಟ್ಟಿ ಸಿಗುವುದು ಎಂದಲ್ಲವೇ ಎನ್ನುತ್ತಾನೆ?

    ಆ ಮಕ್ಕಳು ಉತ್ತರಿಸುತ್ತಾರೆ: “ನಮ್ಮಲ್ಲಿ ಎಲ್ಲರೂ ಸಂಕಷ್ಟದಲ್ಲಿ ಇರುವುದರಿಂದ ಯಾರೋ ಒಬ್ಬರು ಗೆದ್ದು ಸಂತೋಷಪಡುವುದು ಸಂಸ್ಕಾರವಲ್ಲ. ಹಂಚಿ ತಿನ್ನೋದಷ್ಟೇ ನಾವು ಕಲಿತಿರೋದು”.

    ಕೊನೆಗೆ ಆ ಮಾನವಶಾಸ್ತ್ರಜ್ಞನಿಗೆ ಈ ಪ್ರಯೋಗದಿಂದ ಗೊತ್ತಾಗಿದ್ದು;  “ಬುಡಕಟ್ಟು ಜನರು ತಮನ್ನು ತಾವು  ಸುಸಂಸ್ಕೃತ ಸಮಾಜವೆಂದು ಪರಿಗಣಿಸುವ ಸಂತೋಷದ ರಹಸ್ಯವನ್ನು ತಿಳಿದಿದ್ದಾರೆ” ಎಂಬುದು…!!

ಗೌಡಹಳ್ಳಿ ಮಹೇಶ್

ಫೇಸ್ಬುಕ್ ಕೃಪೆ- ಪರಿಸರ ಪರಿವಾರ

Related post